ಹಾಸನದ ಕಲ್ಯಾಣ ಮಂಟಪದಲ್ಲಿ 'ತುಳಸೀದಳ' ಧಾರಾವಾಹಿ ನಟಿ ಸ್ಫೂರ್ತಿ ಹಾಗೂ ಅಶ್ವಿನ್ ಸಪ್ತಪದಿ  ತುಳಿದಿದ್ದಾರೆ. ಕೊರೋನಾ ಕಾಟದಿಂದ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದು, ಇನ್ನಿತರೆ ಬಂಧು ಬಾಂಧವರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.

ಗುರು-ಹಿರಿಯರು ನಿಶ್ಚೆಯಿಸಿದ ಹುಡುಗನ ಜೊತೆ ಸ್ಫೂರ್ತಿ ಸರಳವಾಗಿ ಮದುವೆಯಾಗಿದ್ದಾರೆ. ಕೆಲ ತಿಂಗಳ ಹಿಂದೆಯೇ ಈ ಮದುವೆ ನಿಶ್ಚಯವಾಗಿದ್ದರೂ, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಕಾರಣ ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಸ್ಫೂರ್ತಿ ವರಿಸಿರುವ ಅಶ್ವಿನ್ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ಬಾರಮ್ಮ ಚಂದನ್; ಸಂಭ್ರಮದ ಫೊಟೋಗಳು! 

ಕನ್ನಡದ ತುಳಸೀದಳ ಧಾರಾವಾಹಿಯಲ್ಲಿ ಅಭಿನಯಿಸಿರುವ ಸ್ಫೂರ್ತಿ ತಮಿಳು ಹಾಗೂ ತೆಲುಗು ಭಾಷೆಯ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ. ಮದುವೆ ನಂತರವೂ ಅಭಿನಯಿಸಲಿದ್ದು ಸಿನಿಮಾ ಹಾಗೂ ವೆಬ್‌ ಸೀರಿಸ್‌ ಅವರ ಆಯ್ಕೆಯಲ್ಲಿದೆ ಎಂದಿದ್ದಾರೆ.

ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ರಾಜಹಂಸ ನಟ ಗೌರಿಶಂಕರ್‌ ಮತ್ತು ಅರುಣಾ! 

ಕೆಲ ದಿನಗಳ ಹಿಂದೆ ಕಿರುತೆರೆ ನಟ ಚಂದನ್ ಗೌಡ ಕೂಡ ಬಾಲ್ಯದ ಗೆಳತಿ ಶಾಲಿನಿ ಜೊತೆ ಸಪ್ತಪದಿ ತುಳಿದರು. ರಾಜಹಂಸ ನಟ ಗೌರಿಶಂಕರ್‌ ಕೂಡಾ ಅರುಣಾ ಅವರ ಜೊತೆ ಕೊಲ್ಲೂರು ದೇವಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.