Asianet Suvarna News Asianet Suvarna News

ಮಗಳು ಜಾನಕಿಗೆ ಟಿಎನ್ ಸೀತಾರಾಮ್ ಮುಕ್ತಿ ಮುಕ್ತಿ ಮುಕ್ತಿ

ಮಗಳು ಜಾನಕಿ ಧಾರಾವಾಹಿಗೆ ನೋವಿನ ವಿದಾಯ/ ಅನಿವಾರ್ಯವಾಗಿ ಧಾರಾವಾಹಿ ಅಂತ್ಯ ಮಾಡಬೇಕಾದ ಸಂದರ್ಭ/ ವಿಚಾರ ಹಂಚಿಕೊಂಡ ನಿರ್ದೇಶಕ ಟಿ.ಎನ್.ಸೀತಾರಾಮ್/ ರಾತ್ರಿ 9.30ಕ್ಕೆ ಮನೆ ಮನೆಗೆ ಬರುತ್ತಿದ್ದ ಮಗಳು

Kannada Super hit serial T N Seetharam s Magalu Janaki to go off air
Author
Bengaluru, First Published Jun 1, 2020, 9:26 PM IST

ಮಗಳು ಜಾನಕಿಯ
ಆತ್ಮೀಯ ಬಂಧುಗಳಿಗೆ ನಮಸ್ಕಾರ

ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಅಕ್ಟೋಬರ್ ವರೆಗೆ ಸ್ಥಗಿತಗೊಳ್ಳುತ್ತಿದೆ.

ಅದಕ್ಕೆ ಮುಂಚೆ ಜೂನ್ ಒಂದರಿಂದ ರಾತ್ರಿ 9.30 ಕ್ಕೆ ನಾವು ಹಿಂದೆ ಶೂಟಿಂಗ್ ಮುಗಿಸಿದ್ದ ಮಗಳು ಜಾನಕಿಯ ಹೊಸ ಎಪಿಸೋಡು ಗಳನ್ನು ಸುಮಾರು ಎರಡು ವಾರಗಳ ಕಾಲ ಪ್ರಸಾರ ಮಾಡುತ್ತಿದ್ದಾರೆ. ನೋಡಬೇಕಾಗಿ ಪ್ರಾರ್ಥನೆ. ನೀವು ಮಗಳು ಜಾನಕಿಗೆ ತೋರಿದ ಪ್ರೀತಿ ಕಂಡು ನನ್ನ ಹೃದಯ ಆರ್ದ್ರ ಗೊಂಡಿದೆ.

ನಿಮಗೆಲ್ಲ ಧನ್ಯವಾದಗಳು

ಮತ್ತೊಮ್ಮೆ ನಿಮ್ಮ ಜತೆ ಮಾತನಾಡುತ್ತೇನೆ.

ಪ್ರೀತಿ ತುಂಬಿದ ನಮನಗಳು

(ಬೇರೆ ಚಾನಲ್ ಗಳಲ್ಲಿ ಮುಂದುವರೆಸ ಬೇಕೆಂದು ಅನೇಕರು ಕೇಳುತ್ತಿದ್ದೀರಿ.
ಕಾರಣಾಂತರಗಳಿಂದ ಅದು ಸಾಧ್ಯವಿಲ್ಲ)

ಬೆಂಗಳೂರು(ಜೂ.01)   ಇದು ನಿರ್ದೇಶಕ ಟಿ. ಎನ್ ಸೀತಾರಾಮ್ ತಮ್ಮ ಫೇಸ್ ಬುಕ್ ಮೂಲಕ ಹಂಚಿಕೊಂಡ ವಿಚಾರ. ದೊಡ್ಡ ವರ್ಗದ ಮನಗೆದ್ದಿದ್ದ ಮಗಳು ಜಾನಕಿ ಅರ್ಧದಲ್ಲೆ ಅಂತ್ಯ ಕಾಣುತ್ತಿದೆ.

ಗುಣಮಟ್ಟದ, ಸದಭಿರುಚಿಯ, ಕೌಟುಂಬಿಕ ಧಾರಾವಾಹಿ ಎನಿಸಿಕೊಂಡಿದ್ದ ಮಗಳು ಜಾನಕಿ ರಾತ್ರಿ 9.30ಕ್ಕೆ ಬರುವುದಿಲ್ಲ.  ಧಾರಾವಾಹಿ ಪ್ರಸಾರವಾಗುತ್ತಿದ್ದ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ ಪರಿಣಾಮ ಧಾರಾವಾಹಿ ಸಹ ಅನಿವಾರ್ಯವಾಗಿ ಅಂತ್ಯ ಕಾಣುತ್ತಿದೆ.

ಮಗಳು ಜಾನಕಿ ಮಾತುಗಳಿವೆ ಬಾಕಿ: ಟಿನ್ ಸೀತಾರಾಮ್ ಸಂದರ್ಶನ

ಲಾಕ್ ಡೌನ್ ಪರಿಣಾಮ ಧಾರಾವಾಹಿ ಶೂಟಿಂಗ್ ಗಳು ಬಂದ್ ಆಗಿದ್ದವು. ಕೆಲವು ನಿಯಮಗಳನ್ನು ವಿಧಿಸಿ ಈಗ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಟಿ.ಎನ್.ಸೀತಾರಾಮ್ ಮುಖ್ಯ ಭೂಮಿಕೆಯಲ್ಲಿ ತಂದೆಯಾಗಿ ಕಾಣಿಸಿಕೊಂಡಿದ್ದರು. ಮಗಳು ಜಾನಕಿಯಾಗಿ, ಪೊಲೀಸ್ ಅಧಿಕಾರಿಯಾಗಿ ಗಾನವಿ ಮನಗೆದ್ದಿದ್ದರೆ ರಾಕೇಶ್ ಮಯ್ಯ ನಿರಂಜನನಾಗಿ ಮನಸ್ಸಿನ ಒಳಕ್ಕೆ ಸೇರಿಕೊಂಡಿದ್ದರು.

2018ರ ಮಧ್ಯದಲ್ಲಿ ಆರಂಭವಾದ ಧಾರಾವಾಹಿ ಒಂದೂವರೆ ವರ್ಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕೌಟುಂಬಿಕ ಸಂಬಂಧ, ರಾಜಕಾರಣ, ವಾಸ್ತವದ ಬದುಕು, ಕಾನೂನು ಮತ್ತು ನ್ಯಾಯಾಲಯ ಸಂಗತಿಗಳ ಮೇಲೆ ಧಾರಾವಾಹಿ ಮುನ್ನಡೆಯುತ್ತಿತ್ತು. 
 

 

Follow Us:
Download App:
  • android
  • ios