Asianet Suvarna News Asianet Suvarna News

ನನ್ನ ಹುಟ್ಟುಹಬ್ಬವನ್ನು ಫ್ಯಾಮಿಲಿ ಡೇಯಾಗಿ ಆಚರಿಸಿ: ಕನ್ನಡತಿ ಕಿರಣ್ ರಾಜ್

ಕನ್ನಡತಿ ಧಾರಾವಾಹಿ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ನಟ ಕಿರಣ್ ರಾಜ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಆದ್ರೆ ಯಂಗ್ ಬಾಯ್ ಈ ಬಾರಿ ಸ್ವಲ್ಪ ಭಿನ್ನವಾಗಿ ಆಲೋಚನೆ ಮಾಡಿದ್ದಾರೆ. ಬರ್ತ್ ಡೇಯನ್ನು ಫ್ಯಾಮಿಲಿ ಡೇಯಾಗಿ ಪರಿವರ್ತಿಸಿದ್ದಾರೆ. 
 

kannada small scren and sandalwood actor Actor Kiran Raj Requests To Celebrate His Birthday As A Family Day roo
Author
First Published Jul 4, 2024, 2:48 PM IST

ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಂತ್ರ ಯುವ ನಟ ಕಿರಣ್ ರಾಜ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಜುಲೈ 5ರಂದು ಕಿರಣ್ ರಾಜ್ 31ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದ್ರೆ ಈ ಬಾರಿ ತಮ್ಮ ಹುಟ್ಟುಹಬ್ಬದ ದಿನವನ್ನು ಫ್ಯಾಮಿಲಿ ಡೇ ಆಗಿ ಆಚರಿಸುವಂತೆ ಕಿರಣ್ ರಾಜ್ ಅಭಿಮಾನಿಗಳಿಗೆ ವಿನಂತಿ ಮಾಡಿದ್ದಾರೆ. 

ಕಿರಣ್ ರಾಜ್ (Kiran Raj) ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಅದ್ರಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಂದ್ರೆ ಜುಲೈ 5ರಂದು ಫ್ಯಾಮಿಲಿ ಡೇ ಆಗಿ ಆಚರಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. 

ಕಿರಣ್ ರಾಜ್ ಇನ್ಸ್ಟಾ ಪೋಸ್ಟ್ : ಜುಲೈ 5 – ಫ್ಯಾಮಿಲಿ ಡೇ (Family Day) ಎಂಬ ಶೀರ್ಷಿಕೆ ಹಾಕಿರುವ ಕಿರಣ್ ರಾಜ್, ಹಾಯ್ ಫ್ಯಾಮ್ ಎಂದು ಪೋಸ್ಟ್ ಶುರು ಮಾಡಿದ್ದಾರೆ. ನನ್ನ ಶಕ್ತಿಯಾಗಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನನಗೆ ಪ್ರೇರಣೆಯಾಗಿದ್ದಕ್ಕೆ ತುಂಬಾ ಧನ್ಯವಾದಗಳು. ನೀವು ನನ್ನ ಹುಟ್ಟುಹಬ್ಬವನ್ನು ತುಂಬಾ ಉತ್ಸಾಹ ಮತ್ತು ಪ್ರೀತಿಯಿಂದ ಆಚರಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ನನಗಾಗಿ ಯಾವುದೇ ಉಡುಗೊರೆಗಳನ್ನು ತರಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಇದರ ಬದಲಿಗೆ ಜುಲೈ 5 ಅನ್ನು ಫ್ಯಾಮಿಲಿ ಡೇ ಎಂದು ಆಚರಿಸೋಣ. ನಿಮ್ಮ ಕುಟುಂಬವನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಗುಣಮಟ್ಟದ ಸಮಯವನ್ನು ಕಳೆಯಿರಿ. ಕುಟುಂಬದ ಫೋಟೋವನ್ನು ಅಪ್‌ಲೋಡ್ ಮಾಡಿ ಮತ್ತು ನನ್ನನ್ನು ಟ್ಯಾಗ್ ಮಾಡಿ. ನನ್ನನ್ನು ನಂಬಿ, ನೀವು ಫೋಟೋ ಹಾಕಿದ್ರೆ ನಾನು ಉಡುಗೊರೆಯನ್ನು ಪಡೆದಷ್ಟೇ ಸಂತೋಷಪಡುತ್ತೇನೆ. ಆರೋಗ್ಯವಾಗಿರಿ ಎಂದು ಕಿರಣ್ ರಾವ್ ಬರೆದುಕೊಂಡಿದ್ದಾರೆ.

Lakshmi Baramma: ಕೀರ್ತಿ ಮೇಲೀಗ ವೀಕ್ಷಕರಿಗೆ ಕನಿಕರ, ವೈಷ್ಣವ್ ಜೊತೆ ಮದ್ವೆ ಮಾಡ್ಸಬೇಕಂತೆ!

ನಟ ಕಿರಣ್ ರಾವ್ ಈ ಪೋಸ್ಟ್ ವೈರಲ್ ಆಗಿದೆ. 35 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ಅಭಿಮಾನಿಗಳು ತಮ್ಮ ಕಮೆಂಟ್ ಮೂಲಕ ಕಿರಣ್ ರಾವ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಿರಣ್ ರಾವ್ ಅವರ ಫ್ಯಾಮಿಲಿ ಡೇ ಕಾನ್ಸೆಪ್ಟ್ ಅಭಿಮಾನಿಗಳಿಗೆ ಇಷ್ಟವಾಗಿದೆ. ನಿಮ್ಮ ಹುಟ್ಟುಹಬ್ಬವಾದ ಜುಲೈ 5 ರಂದು ಫ್ಯಾಮಿಲಿ ಡೇಯಾಗಿ ಆಚರಿಸೋದು ಒಳ್ಳೆಯ ಉಪಾಯ. ಈ ವರ್ಷ ಖಂಡಿತಾ ನಾವು ಫ್ಯಾಮಿಲಿ ಡೇ ಆಚರಿಸುತ್ತೇವೆ ಎಂದು ಅಭಿಮಾನಿಯೊಬ್ಬರು ಭರವಸೆ ನೀಡಿದ್ದಾರೆ. ನೀವು ಯಾವಾಗಲೂ ಅನನ್ಯ ಮತ್ತು ಅಪರೂಪದ ರತ್ನ, ನಿಮ್ಮ ಮಾತಿನಂತೆ ಆಗಲಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಜುಲೈ 5 ಅನ್ನು ಫ್ಯಾಮಿಲಿ ಡೇಯಾಗಿ ಆಚರಿಸಿ, ಕುಟುಂಬಸ್ಥರ ಜೊತೆಗಿರುವ ಫೋಟೋ ಪೋಸ್ಟ್ ಮಾಡೋದಾಗಿ ಇನ್ನು ಕೆಲ ಅಭಿಮಾನಿಗಳು ತಿಳಿಸಿದ್ದಾರೆ.

ಸ್ಯಾಂಡಲ್ವುಡ್ ಕಲಾವಿದರು ಹುಟ್ಟುಹಬ್ಬವನ್ನು ಅವಾಯ್ಡ್ ಮಾಡ್ತಿದ್ದಾರೆ. ಇದಕ್ಕೆ ನಟ ದರ್ಶನ್ ಜೈಲುವಾಸ ಕಾರಣ ಎನ್ನಲಾಗ್ತಿದೆ. ಊರಿನಲ್ಲಿರದ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗ್ತಿಲ್ಲ, ಮನೆ ಬಳಿ ಬರಬೇಡಿ ಎಂದು ಗಣೇಶ್ ಪೋಸ್ಟ್ ಹಾಕಿದ್ದರು. ಅದ್ರ ಬೆನ್ನಲ್ಲೆ ಪ್ರಜ್ವಲ್ ದೇವರಾಜ್ ಕೂಡ, ಈ ಬಾರಿ ಊರಿನಲ್ಲಿರದ ಕಾರಣ ನಿಮ್ಮ ಜೊತೆ ಹುಟ್ಟುಹಬ್ಬದ ಆಚರಣೆ ಸಾಧ್ಯವಿಲ್ಲ. ನೀವಿರುವ ಜಾಗದಲ್ಲೇ ಬಡವರಿಗೆ ಅನ್ನದಾನ ಮಾಡಿ, ಸಹಾಯ ಮಾಡಿ ಎಂದಿದ್ದರು. ಈಗ ಕಿರಣ್ ರಾಜ್, ಫ್ಯಾಮಿಲಿ ಡೇ ಆಚರಿಸುವ ಮನವಿ ಮಾಡಿ, ಗಿಫ್ಟ್ ನೀಡದಂತೆ ಸೂಚನೆ ನೀಡಿದ್ದಾರೆ.

ಮೈಕಲ್ ಮತ್ತು ಮದುವೆ ಎರಡೂ ಒಟ್ಟಿಗೆ ಸೇರಲ್ಲ..35ವರ್ಷಕ್ಕಿಂತ ಕಮ್ಮಿ ಆಗಲ್ಲ: ಬಿಗ್ ಬಾಸ್ ಸ್ಪರ್ಧಿ ತಾಯಿ ಹೇಳಿಕೆ ವೈರಲ್

ಇನ್ನು ಕಿರಣ್ ರಾವ್ ವೃತ್ತಿ ಜೀವನದ ಬಗ್ಗೆ ಹೇಳೋದಾದ್ರೆ ಸದ್ಯ ಕಿರಣ್ ರಾವ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಬಹು ನಿರೀಕ್ಷಿತ ಹಾಗೂ ದೊಡ್ಡ ಬಜೆಟ್ ಚಿತ್ರ ರಾನಿ, ಆಗಸ್ಟ್ ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.  

 
 
 
 
 
 
 
 
 
 
 
 
 
 
 

A post shared by Kiran Raj (@itskiranraj)

Latest Videos
Follow Us:
Download App:
  • android
  • ios