ಈ ಕಾಲದ ಹೆಣ್ಮಕ್ಕಳು ಹೇಗಿರಬೇಕು ಅಂತ ಹೇಳ್ತಾಳೆ ಹೀರೋಯಿನ್‌ ಸತ್ಯಾ!

ಹುಡುಗೀರು ಅಂದ್ರೆ ಅವ್ರಿಗೆ ಹುಡುಗರ ಪ್ರೊಟೆಕ್ಷನ್ ಬೇಕು ಅನ್ನೋ ಥರನೇ ಹೆಚ್ಚಿನ ಸೀರಿಯಲ್‌ಗಳು ಹೇಳುತ್ತಾ ಬಂದಿವೆ. ಸತ್ಯಾ ಸೀರಿಯಲ್‌ ನ ನಾಯಕಿ ಸತ್ಯಾ ಮಾತ್ರ ಈ ಕಾಲದ ಹೆಣ್ಮಕ್ಕಳು ಹೇಗೆ ದಿಟ್ಟ ಹೆಜ್ಜೆ ಇಡಬೇಕು ಅನ್ನೋದನ್ನ ಕರೆಕ್ಟಾಗಿ ಹೇಳಿದ್ದಾಳೆ.

 

Kannada serial heroine Sathya teaches life skills to young girls

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗ್ತಿರೋ ಸತ್ಯಾ (Sathya) ಸೀರಿಯಲ್ (Serial) ಶುರುವಿನಿಂದಲೇ ವಿಭಿನ್ನ ಕತೆಯ ಕಾರಣಕ್ಕೆ ಸುದ್ದಿಯಲ್ಲಿತ್ತು. ಬೇರೆ ಸೀರಿಯಲ್‌ನ ನಾಯಕಿಯರು 80'ನ ಹೆಣ್ಮಕ್ಕಳಂತಿದ್ದರೆ ಸತ್ಯಾ ತನ್ನ ಶಕ್ತಿ, ಸಾಮರ್ಥ್ಯಗಳಿಂದಲೇ ಜನಪ್ರಿಯಳಾದ ಹುಡುಗಿ. ಟಾಮ್‌ ಬಾಯಿಶ್‌ (Tom Boy) ಲುಕ್‌ನಲ್ಲಿ ಈಕೆ ಸಖತ್‌ ಡಿಫರೆಂಟ್‌ ಅನಿಸುತ್ತಾಳೆ. ಇದೀಗ ಈ ಕಾಲದ ಹುಡುಗಿಯರು ಹೇಗಿರಬೇಕು ಅಂತ ಈಕೆ ಹೇಳಿರೋದು ಎಲ್ಲಾ ಹೆಣ್ಮಕ್ಕಳಿಗೂ ಪಾಠದ ಹಾಗಿದೆ. 

ಹೆಣ್ಮಕ್ಕಳು ಹಾಗಿರಬೇಕು, ಹೀಗಿರಬೇಕು, ತಲೆ ತಗ್ಗಿಸಿ ನಡೀಬೇಕು ಅಂತೆಲ್ಲ ಸಮಾಜ ಹುಡುಗೀರ ಮೇಲೆ ರಿಸ್ಟ್ರಿಕ್ಷನ್ (Restrictions) ಹಾಕುತ್ತಲೇ ಬಂದಿದೆ. ಇದನ್ನ ಮೀರಿ ನಡೆಯೋ ಹುಡುಗಿಯರನ್ನು 'ಅವರ ಕ್ಯಾರೆಕ್ಟರ್ ಸರಿ ಇಲ್ಲ' ಅಂತ ಬಿಂಬಿಸಿ ಬಲವಂತವಾಗಿ ಅವರ ದಿಟ್ಟತನವನ್ನು ಹತ್ತಿಕ್ಕುತ್ತೆ. ಹಿಂದಿನಿಂದ ಇಂದಿನವರೆಗೂ ಇಂಥದ್ದೊಂದು ತಡೆಯನ್ನು ಹೆಣ್ಮಕ್ಕಳು ಫೇಸ್ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸೀರಿಯಲ್‌ಗಳೂ ತಮ್ಮ ನಾಯಕಿಯರನ್ನು ಎಮೋಶನಲೀ ವೀಕ್‌ (Emotionally Week) ಆಗಿ ಚಿತ್ರಿಸುತ್ತಾ ಬಂದಿವೆ. ಹೀಗೆ ಭಾವನಾತ್ಮಕವಾಗಿ ದುರ್ಬಲವಾಗಿರೋದೇ ಒಳ್ಳೆ ಹೆಣ್ಣಿನ ಗುಣ ಅಂತ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಸತ್ಯಾ ಸೀರಿಯಲ್‌ ಈ ಎಲ್ಲವನ್ನೂ ಸೈಡಿಗಿಟ್ಟು ಹುಡುಗಿಯರು ಸತ್ಯಾಳಂತೆ ದಿಟ್ಟತನದಿಂದ ಬದುಕಬೇಕು ಅಂತ ಹೇಳುವ ಪ್ರಯತ್ನ ಮಾಡಿದೆ. ಅದರಲ್ಲೂ ಈ ಸಲದ ಎಪಿಸೋಡ್‌ನಲ್ಲಿ ಹೆಣ್ಮಕ್ಕಳು ಹೇಗಿರಬೇಕು ಅನ್ನೋದನ್ನು ತಿಳಿಸಿಕೊಟ್ಟಿದೆ ಈ ಸೀರಿಯಲ್‌. ಪ್ರೀತಿಸುತ್ತೇನೆ ಅಂತ ನಾಟಕ ಮಾಡಿ ಮೋಸ ಮಾಡಿದ ಹುಡುಗನಿಂದ ಹುಡುಗಿಯನ್ನು ರಕ್ಷಿಸಿ ಆಕೆಗೆ ಹುಡುಗಿಯರು ಹೇಗಿರಬೇಕು ಅನ್ನೋ ಬಗ್ಗೆ ಪಾಠ (life lesson) ಮಾಡಿದ್ದಾಳೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

1. ಹುಡುಗೀರು ತಮ್ಮ ರಕ್ಷಣೆ ತಾವೇ ಮಾಡ್ಕೊಳ್ಳಬೇಕು
ಸತ್ಯಾ ತನ್ನ ರಕ್ಷಣೆ ತಾನೇ ಮಾಡ್ಕೊಳ್ಳುವ ಜೊತೆಗೆ ಇತರರ ರಕ್ಷಣೆಯನ್ನೂ ಮಾಡ್ತಾಳೆ. ಇತರ ಹುಡುಗಿಯರು ತಮ್ಮ ತಮ್ಮ ರಕ್ಷಣೆಯನ್ನು ತಾವೇ ಮಾಡುವಂತಿರಬೇಕು ಅಂತಾಳೆ ಸತ್ಯಾ. ಹುಡುಗಿಯರು ಸ್ಟ್ರಾಂಗ್ ಆದಷ್ಟೂ ಅವರ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಬೀಳುತ್ತೆ. ಇತರರು ಆಕೆಯ ಮೇಲೆ ದೌರ್ಜನ್ಯ ಮಾಡಲು ಅಂಜುತ್ತಾರೆ. ತನ್ನ ರಕ್ಷಣೆಯನ್ನು ತಾನೇ ಮಾಡಬಲ್ಲೆ ಎಂಬ ಮನಸ್ಥಿತಿಯ ಹುಡುಗಿಯರಲ್ಲಿ ಆತ್ಮವಿಶ್ವಾಸವೂ ಚೆನ್ನಾಗಿರುತ್ತೆ. ಹೀಗಾಗಿ ಆಕೆ ತನ್ನ ರಕ್ಷಣೆ ತಾನು ಮಾಡ್ಕೊಳ್ಳೋದನ್ನು ಕಲಿಯಲೇ ಬೇಕು

ಹರ್ಷ ಭುವಿಗೆ ಹಾಕಬೇಕಿದ್ದ ಉಂಗುರ ವರೂ ಕೈಯಲ್ಲಿ! ಹರ್ಷನ ಪ್ರಪೋಸ್ ಸಕ್ಸಸ್‌ ಆಗುತ್ತಾ?

2. ಎಮೋಶನಲೀ ವೀಕ್‌ ಆಗಿರಬೇಡಿ
ಭಾವನಾತ್ಮಕವಾಗಿ ಹೆಣ್ಮಕ್ಕಳು ಸ್ಟ್ರಾಂಗ್ (Emotionally Strong) ಆದಷ್ಟೂ ಅವರನ್ನು ಯಾಮಾರಿಸುವವರು ಕಡಿಮೆ ಆಗುತ್ತಾರೆ. ಹುಡುಗೀರ ಎಮೋಶನ್‌ ಜೊತೆಗೆ ಆಟ ಆಡುವವರು ಬಹಳ ಜನ ಇರುತ್ತಾರೆ. ಹುಡುಗಿ ಮಾನಸಿಕ ಗಟ್ಟಿ ಇರೋದು ಈ ಕಾಲದ ಅಗತ್ಯ. ಸಣ್ಣಪುಟ್ಟದಕ್ಕೂ ಅಳುತ್ತಾ ಅಳುಮುಂಜಿಯಾಗಿರೋದು, ಅತೀ ಒಳ್ಳೆಯತನ, ಯೋಚನೆ ಮಾಡದೇ ಎಲ್ಲವನ್ನು ನಂಬಿಬಿಡುವ ಪೆದ್ದುತನ ಇವ್ಯಾವುವೂ ಒಳ್ಳೆಯದಲ್ಲ. ಮುಗ್ಧತೆ ಹೆಣ್ಣಿಗೆ ಆಭರಣೆ ಎಂಬ ಬಗೆಯ ಮಾತುಗಳು ನಿಮ್ಮನ್ನು ಯಾಮಾರಿಸಲೇ ಇರೋದು ಅನ್ನೋದು ಗೊತ್ತಿರಲಿ.
 

Kannada serial heroine Sathya teaches life skills to young girls

3. ಸೋಷಿಯಲ್‌ ಮೀಡಿಯಾ (Social Media) ಬಳಕೆ ಬಗ್ಗೆ ಎಚ್ಚರ ಇರಲಿ. 
ಸೋಷಿಯಲ್‌ ಮೀಡಿಯಾದಲ್ಲಿ ಫ್ರೆಂಡ್‌ ಥರ ತೋರಿಸಿಕೊಟ್ಟು, ಹುಡುಗೀರ ಭಾವನೆಗಳ ಜೊತೆಗೆ ಆಟ ಆಡೋದು, ಅವರನ್ನು ಮಿಸ್ ಯೂಸ್ ಮಾಡ್ಕೊಳ್ಳೋದು ಈ ಕಾಲದ ದಂಧೆಯಂತಾಗಿದೆ. ಸೋಷಿಯಲ್‌ ಮೀಡಿಯಾಗಳನ್ನು ಎಷ್ಟು ಬೇಕೋ ಅಷ್ಟೇ ಬಳಸಿ, ಪರ್ಸನಲ್ ಅನ್ನುವ ವ್ಯವಹಾರ ಇಲ್ಲಿ ಬೇಡ. ಇಲ್ಲಿ ಸಿಗೋ ಗೆಳೆಯರ ಬಗ್ಗೆ ಅನುಮಾನ ಯಾವಾಗಲೂ ಬೇಕು.

'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?

4. ಕೆಟ್ಟೋರನ್ನು ಅಳಿಸಿ, ನೀವು ಅಳೋದಲ್ಲ
ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ಆದಾಗ ಅವಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋರು ಹೆಚ್ಚು. ಅವಳಿಗಾದ ಅನ್ಯಾಯವನ್ನು ವಿರೋಧಿಸೋದು ಬಿಟ್ಟು ಅವಳನ್ನೇ ಟಾರ್ಗೆಟ್‌ (target) ಮಾಡೋ ಜನರಿರ್ತಾರೆ. ತಮಗೆ ಅನ್ಯಾಯ ಆದಾಗ ಹುಡುಗೀರು ಅನ್ಯಾಯ ಮಾಡುವ ಕೆಟ್ಟವರ ಕಣ್ಣಲ್ಲಿ ನೀರು ತರಿಸಬೇಕೇ ವಿನಃ ತಾವೇ ಅಳುತ್ತಾ ಕೂರೋದು ಒಳ್ಳೆಯದಲ್ಲ. 

5. ಸ್ವಾತಂತ್ರ್ಯ (Freedom) ನಿಮ್ಮ ಹಕ್ಕು (Rights), ಅದನ್ನು ಯಾರೂ ಕೊಡಬೇಕಿಲ್ಲ
ಹದಿನೆಂಟು ತುಂಬಿದ ಪ್ರತಿಯೊಬ್ಬರಿಗೂ ವ್ಯಕ್ತಿ ಸ್ವಾತಂತ್ರ್ಯ ಇದೆ. ಅದನ್ನು ಹೆಣ್ಣುಮಕ್ಕಳಿಗೆ ಇನ್ನೊಬ್ಬರು ಕೊಡಬೇಕಾಗಿಲ್ಲ. ಆದರೆ ಈ ವ್ಯಕ್ತಿ ಸ್ವಾತಂತ್ರ್ಯವನ್ನು ನೀವು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಪೂರಕವಾಗಿ ಬಳಸಿಕೊಳ್ಳಿ. ಆಗ ಹೆಣ್ಮಕ್ಕಳಾದ ನೀವು ಮುಂದೆ ಬರ್ತೀರಿ. ಇತರರು ನಮಗೆ ಕೊಡ್ತಾರೆ, ಕೊಡಬೇಕು ಅಂತೆಲ್ಲ ಅಂದುಕೊಳ್ಳೋದು ಫೂಲಿಶ್‌ನೆಸ್‌ ಅಂತ ತಿಳಿದಿರಲಿ. 

ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

Latest Videos
Follow Us:
Download App:
  • android
  • ios