ರ‍್ಯಾಪರ್ ಅಲೋಕ್ ಅಪ್ಪನಾಗುತ್ತಿರುವ ಸಂತೋಷದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಕನ್ನಡ ರ‍್ಯಾಪರ್ ಅಲೋಕ್ ಬಾಬು ಮತ್ತು ನಿಶಾ ನಾಟರಾಜನ್ ನವೆಂಬರ್ 2019ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈ ವರ್ಷ ತಾವು ಪೋಷಕರಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಮೆಂಟ್ ಮೂಲಕ ಸಿನಿ ಸ್ನೇಹಿತರು ಹಾಗೂ ಆಪ್ತರು ಶುಭ ಹಾರೈಸುತ್ತಿದ್ದಾರೆ.
'There's a new Good vibe adding to our Tribe Soon. ನಮ್ಮ ಬೇಬಿ ಆನ್ ದಿ ವೇ. ನಿಮ್ಮ ಪ್ರೀತಿ, ಹಾರೈಕೆ ಸದಾ ನಮ್ಮ ಮೇಲಿರಲಿ,' ಎಂದು ಸೆಲ್ಫೀ ಫೋಟೋ ಅಪ್ಲೋಡ್ ಮಾಡಿದ್ದಾರೆ. ನಟಿ ಶ್ರೀಲೀಲಾ, ನೇಹಾ, ಶುಭ್ರ ಅಯ್ಯಪ್ಪ, ಸೋನಿಕಾ ಗೌಡ, ಶ್ವೇತಾ ಶ್ರೀವಾತ್ಸವ್, ಅಮೂಲ್ಯ, ಅದ್ವಿತಿ ಶೆಟ್ಟಿ, ದೀಪಿಕಾ ದಾಸ್, ಖುಷಿ ರವಿ, ನಯನಾ ಪುಟ್ಟಸ್ವಾಮಿ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.
ಲಾಕ್‌ಡೌನ್‌ನಲ್ಲಿ 16 ನಟಿಯರನ್ನು ಒಂದಾಗಿಸಿದ 'Dont Worry'!ನೋಡಲೇ ಬೇಕಣ್ಣ..
'ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಲೋಕ್ ಬಾಬು, ಸುಮಾರು 25ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿ, ವಿವಿಧ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲೂ ಡೋಂಟ್ ವರಿ ಹಾಡು ಬಿಬಿಸಿ ರೆಡಿಯೋ ಲಂಡನ್‌ನಲ್ಲಿ ಪ್ರಸಾರವಾಗಿತ್ತು. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಕನ್ನಡ ಚಿತ್ರರಂಗದ 16 ನಟಿಯರನ್ನು ಒಂದಾಗಿಸಿ 'ಡೋಂಟ್ ವರಿ' ಹಾಡಿಗೆ ಹೆಜ್ಜೆ ಹಾಕಿಸುವ ಮೂಲಕ ಜನರಲ್ಲಿ ಎನರ್ಜಿ ತುಂಬಿದ್ದರು.
ಅಲೋಕ್ ಬಾಬು ಮತ್ತು ನಿಶಾಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ವತಿಯಿಂದ ಕಂಗ್ರಾಜುಲೇಷನ್ಸ್.
