ಕೊರೋನಾ ವೈರಸ್‌ ಲಾಕ್‌ಡೌನ್‌ನಲ್ಲಿ  ಜನರಲ್ಲಿ ಜೋಶ್‌ ತುಂಬಿಸಲು ನಟಿ ವೈನಿಧಿ ಜಗದೀಶ್‌ ಮತ್ತು  ರ‍್ಯಾಪರ್  ಅಲೋಕ್‌  'Don’t worry ಹಾಡಿಗೆ 16 ನಟಿಯರಿಂದ ಹೆಜ್ಜೆ  ಹಾಕಿಸಿದ್ದಾರೆ. 

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಟುಂಬಸ್ಥರ ಜೊತೆ ಟೈಂ ಪಾಸ್ ಮಾಡುತ್ತಿರುವ ಸಿನಿ ತಾರೆಯರು ಏನಾದರೂ ವಿಭಿನ್ನವಾಗಿ ಪ್ರಯತ್ನಿಸುತ್ತ ತಮ್ಮ ಅಭಿಮಾನಿಗಳನ್ನು ಮನೋರಂಜಿಸುತಲ್ಲೇ ಇರುತ್ತಾರೆ. 

ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಸೂಪರ್ ಹಿಟ್‌ ಆದ Dont Worry ರ್ಯಾಪ್ ಸಾಂಗ್‌ಗೆ ನಟ ಜೈಜಗದೀಶ್‌ ಪುತ್ರಿ ವೈನಿಧಿ ಜೋಶ್ ತುಂಬಿದ್ದಾರೆ . ಮನೆಯಲ್ಲಿ ಬೋರ್ ಆಗಿ ಕುಳಿತಿರುವ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ತುಂಬಲು Dont Worry ಹಾಡಿಗೆ 16 ಕನ್ನಡ ಚಿತ್ರರಂಗದ ಖ್ಯಾತ ನಟಿಯರನ್ನು ಒಟ್ಟಾಗಿಸಿ ನೃತ್ಯ ಮಾಡಿಸಿದ್ದಾರೆ.

'ಡೋಂಟ್‌ ವರಿ' ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರ‍್ಯಾಪರ್ All.ok!

ಡೋಂಟ್‌ ವರಿ ಎಲ್ಲಾ ಚಿಂತೆಗಳನ್ನು ಬಿಟ್ಟಾಕಿ ಈ ಹಾಡನ್ನು ವೀಕ್ಷಿಸಿ. ಕಾರ್ಮಿಕರ ದಿನಾಚರಣೆಯಂದು ರಿಲೀಸ್‌ ಮಾಡಿದ ಸಾಂಗ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ಚಿತ್ರದಲ್ಲಿ ಜೈ ಜಗದೀಶ್‌ ಅವರು ಅವಳಿ ಹೆಣ್ಣು ಮಕ್ಕಳು ವೈನಿಧಿ, ವೈಸಿರಿ ಹಾಗೂ ಹಿರಿಯ ಮಗಳು ವೈಭವಿ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್‌, ಬಿಗ್‌ ಬಾಸ್‌ ದೀಪಿಕಾ ದಾಸ್, ಡ್ಯಾನ್ಸಿಂಗ್ ಸ್ಟಾರ್ ದಿಶ್ ಮದನ್, ಗಾಯಕಿ ಶೃತಿ ಪ್ರಕಾಶ್‌, ಬಾರ್ಬಿ ಡಾಲ್ ನಿವೇದಿತಾ ಗೌಡ, ಐಶ್ವರ್ಯ ಸಿಂಧೋಗಿ, ದಿಯಾ ಚಿತ್ರ ಖುಷಿ, ಸ್ಮೈಲಿಂಗ್ ಕ್ವೀನ್‌ ಕೃಷಿ, ಸಿಹಿ ಕಹಿ ಚಂದ್ರು ಪುತ್ರಿ ಹಿತಾ, ಚೈತ್ರಾ ವಾಸುದೇವನ್‌, ಚಂದನಾ ಗೌಡ, ಸೋನಿಕಾ ಗೌಡ ಹಾಗೂ ಮಿಲನ್ ರಾಜ್ ಹೆಚ್ಚೆ ಹಾಕಿದ್ದಾರೆ.

'ಖುಷಿಯಾಗಿರಿ ಚಿಂತಿಸಬೇಡಿ. ಈ ಸಂದರ್ಭವನ್ನು ನಾವೆಲ್ಲೂ ಒಟ್ಟಾಗಿ ಎದುರಿಸೋಣ. ಎಲ್ಲರಿಗೂ ಕಾರ್ಮಿಕರ ದಿನಾಚರಣೆ ಶುಭಾಶಯಗಳು' ಎಂದು ವೈನಿಧಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

View post on Instagram

ಇನ್ನು ಲಾಕ್‌ಡೌನ್‌ ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಮಾತನಾಡಲು ನಟಿಯರು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಲೈವ್‌ ಮಾಡುತ್ತಿದ್ದಾರೆ. ವೈನಿಧಿ ಹಾಗೂ ವೈಸಿರಿ ವರ್ಕೌಟ್‌ ವಿಡಿಯೋಗಳನ್ನು ಶೇರ್ ಮಾಡುತ್ತಾರೆ, ವೈಭವಿ ಮೇಕಪ್‌ ಟುಟೋರಿಯಲ್‌ ವಿಡಿಯೋವನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚೈತಾ ವಾಸುದೇವನ್‌ ಎಲ್ಲಾ ಸ್ಟಾರ್ ನಟಿಯ ಜೊತೆ ಲೈವ್‌ ಚಾಟ್‌ ಮಾಡುತ್ತಾ ಅವರ ಲೈಫ್‌ಸ್ಟೈವ್‌ ಬಗ್ಗೆ ಮಾಹಿತಿ ನೀಡುತ್ತಾರೆ. ಒಟ್ಟಿನಲ್ಲಿ ಈ ಹಾಡನ್ನು ನೀವೂ ಕೇಳಿದ್ರೆ ಲೈಫ್‌ ಸಿಕ್ಕಾಪಟ್ಟೆ ಸೂಪರ್...