ನಿವೇದಿತಾ ಗೌಡ ತಮ್ಮ ಬಗ್ಗೆ ಕಮೆಂಟ್‌ ಮಾಡುವವರಿಗೆ ಅಂತಲೇ ವೀಡಿಯೋ ಮಾಡ್ತಾರೆ. ಮತ್ತೊಂದು ವಿಷ್ಯ ಅಂದ್ರೆ ಈ ವೀಡಿಯೋಗೂ ಲಕ್ಷಾಂತರ ಜನರ ವೀಕ್ಷಣೆ ಸಿಕ್ಕಿದೆ.  

ನಟಿ ನಿವೇದಿತಾ ಗೌಡ (Nivedita Gowda) ಮೇನ್‌ ಸ್ಟ್ರೀಮ್‌ಗೆ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್‌ (Troll) ಆಗುತ್ತಲೇ ಇದ್ದರು. ಅವರ ಇಂಗ್ಲೀಶ್‌ ಶೈಲಿಯ ಮಾತಿನ ರೀತಿ, ಡ್ರೆಸಿಂಗ್‌ ಸ್ಟೈಲ್‌ ಮುಖ್ಯವಾಗಿ ಟ್ರೋಲ್‌ಗೆ ಒಳಗಾಗುತ್ತಲೇ ಬಂದಿತ್ತು. ಕನ್ನಡದ ಪ್ರಖ್ಯಾತ ರ್ಯಾಪರ್‌ ಚಂದನ್‌ ಶೆಟ್ಟಿ (Chandan shetty) ಅವರನ್ನು ನಿವೇದಿತಾ ಗೌಡ ಮದುವೆ ಆಗಿ ವರ್ಷಗಳೇ ಕಳೆದಿವೆ. ಬಿಗ್ ಬಾಸ್‌ (Big boss) ಮನೆಯಲ್ಲಿ ಪರಿಚಯವಾಗಿ, ಸ್ನೇಹಿತರಾಗಿ ಕೊನೆಗೆ ದಸರಾದಲ್ಲಿ ಪ್ರೊಪೋಸ್‌ ಮಾಡಿ ವಿವಾದಕ್ಕೆ ಸಿಲುಕಿದ ಈ ಜೋಡಿ ಶುರುವಿನಿಂದಲೂ ವಿವಾದಗಳ ಮೂಲಕ ಸಾಕಷ್ಟು ಸುದ್ದಿ ಮಾಡಿತು. ಕಳೆದ ಕೆಲವು ದಿನಗಳಿಂದ ನಿವೇದಿತಾ ಗೌಡ ತಮ್ಮ ರೀಲ್ಸ್‌ ಮೂಲಕ ಸಖತ್‌ ಟ್ರೆಂಡಿಂಗ್‌ನಲ್ಲಿದ್ದಾರೆ. ಮೊದ ಮೊದಲು ಇನ್‌ಸ್ಟಾ (Instagram) ರೀಲ್ಸ್‌ ಮೂಲಕ ಗಮನ ಸೆಳೆಯುತ್ತಿದ್ದ ಈಕೆ ಇದೀಗ ತನ್ನದೇ ಯೂಟ್ಯೂಬ್‌ ಚಾನೆಲ್‌ (Youtube channel) ಅನ್ನೂ ಮಾಡಿದ್ದಾರೆ. ಇದರಲ್ಲಿರುವ ನಿವೇದಿತಾ ಗೌಡ ವೀಡಿಯೋಗಳನ್ನು ಲಕ್ಷಾಂತರ ಜನ ನೋಡುತ್ತಾರೆ. ಈ ಚಾನೆಲ್‌ ಕೆಲವು ದಿನಗಳ ಹಿಂದಷ್ಟೇ ಶುರು ಮಾಡಿದ್ದರೂ ಹತ್ರತ್ರ ಲಕ್ಷ ಜನ ಸಬ್ ಸ್ಕ್ರೈಬರ್ಸ್‌ ಇದ್ದಾರೆ. 

ನೀವೊಮ್ಮೆ ಈ ಚಾನೆಲ್‌ನ ಒಳಹೊಕ್ಕು ನೋಡಿದ್ರೆ ನಿವೇದಿತಾ ತರಲೆ, ತುಂಟಾಟ, ಸ್ಟೈಲ್‌ ಇತ್ಯಾದಿಗಳನ್ನು ಎನ್‌ಜಾಯ್‌ ಮಾಡಬಹುದು. ರೀಸೆಂಟಾಗಿ ಇದ್ರಲ್ಲಿ ತನ್ನ ಬಳಿ ಇರುವ ಜ್ಯುವೆಲ್ಲರಿ (Jewellery) ಕಲೆಕ್ಷನ್‌ ಅನ್ನು ಪ್ರದರ್ಶಿಸಿದ್ದಾರೆ. ಅದರಲ್ಲೊಂದು ಜ್ಯುವೆಲ್ಲರಿಯನ್ನು 20 ಸಾವಿರ ಕೊಟ್ಟು ಒಂದು ಜ್ಯುವೆಲ್ಲರಿ ತಂದದ್ದು ಹೇಳಿದ್ದಾರೆ. ಸ್ಕೂಲ್‌ ಟೈಮ್‌ನ ಜ್ಯುವೆಲ್ಲರಿಗಳಿಂದ ಇವತ್ತಿನವರೆಗಿನ ಜ್ಯುವೆಲ್ಲರಿಗಳ ಡೀಟೇಲ್‌ ಹೇಳಿದ್ದಾರೆ. ಇದನ್ನು ನೋಡಿದ್ರೆ, ನಿವೇದಿತಾ ಸ್ಟೈಲಲ್ಲೇ ಹೇಳೋದಾದ್ರೆ, ಅಬ್ಬಬ್ಬಾ, ನಿವೇದಿತಾ ಹತ್ರ ಎಷ್ಟೊಂದು ಜ್ಯುವೆಲ್ಲರಿಗಳಿವೆ.. ಅಂತ ಆಶ್ಚರ್ಯ ಪಟ್ಕೊಳ್ಳಬಹುದು. 

ಪತಿ ಚಂದನ್‌ ಶೆಟ್ಟಿಗೆ ಕ್ಯಾರೆಟ್‌ ಹಲ್ವ ಮಾಡಿಕೊಟ್ಟ ನಿವೇದಿತಾ ಗೌಡ!

ವಿಷ್ಯ ಇದಲ್ಲ. ಆದ್ರೆ ಇದನ್ನೆಲ್ಲ ಹೇಳೋದಕ್ಕೂ ಕಾರಣ ಇದೆ. ನಿವೇದಿತಾ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡ್ತಿರೋ ಕಾರ್ಯಕ್ರಮವನ್ನು ನೋಡಿದ ಜನ ಸುಮ್ಮನೇ ಕೂತಿಲ್ಲ. ತಾವೇನೋ ದೊಣ್ಣೆ ದಾಸರು ಅನ್ನೋ ಸ್ಟೈಲಲ್ಲಿ ಕಮೆಂಟ್‌ ಮೇಲೆ ಕಮೆಂಟ್‌ ಹೊಡೆದಿದ್ದಾರೆ. ಕೆಲವರಂತೂ ಈಕೆಯ ಡ್ರೆಸ್‌ ಹೇಗಿರಬೇಕು ಅನ್ನೋ ಬಗ್ಗೆಯೂ ಉಪದೇಶ ಕೊಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ನಿವೇದಿತಾ ಈ ಕಮೆಂಟಿಗರ ಜನ್ಮ ಜಾಲಾಡಿದ್ದಾರೆ. ಇದಕ್ಕಾಗಿ ಒಂದು ವೀಡಿಯೋ ಮಾಡಿ ಚೆನ್ನಾಗಿ ಕ್ಲಾಸ್‌ ತಗೊಂಡಿದ್ದಾರೆ. ರಿಪ್ಲೈಯಿಂಗ್‌ ಟು ಹೇಟರ್ಸ್‌ ಅಂತಲೇ ಒಂದು ವೀಡಿಯೋಗೆ ಹೆಸರಿಟ್ಟಿದ್ದಾರೆ. ಅವರ ಈ ಎಪಿಸೋಡನ್ನು ಲಕ್ಷಾಂತರ ಜನ ನೋಡಿದ್ದಾರೆ. 

'ಬರೀ ಹೆಣ್ಮಕ್ಕಳೇ ಅಡುಗೆ ಮಾಡಿದ್ರೆ ಗಂಡ್ಮಕ್ಕಳೇನಕ್ಕೆ ಇರೋದು' ಅನ್ನೋದನ್ನು ಗಂಡ್‌ ಮಕ್ಳೇ ವೇಸ್ಟ್‌ ಗುರು, ಭೂಮಿಗೆ ಭಾರ ಗುರೂ ಅನ್ನೋ ಸ್ಟೈಲಲ್ಲಿ ಹೇಳಿದ್ದಾರೆ. 'ಮುಚ್ಕೊಂಡು ಕನ್ನಡ ಮಾತಾಡು, ಇಲ್ಲಾ ಇಂಗ್ಲೀಷ್ ಚಾನೆಲ್ ಓಪನ್ ಮಾಡು, ಕನ್ನಡ ಕಲಿಯಲ್ಲೇ..' ಅಂತ ಇದ್ದ ಮೊದಲ ಕಮೆಂಟ್‌ಅನ್ನು ನಗುತ್ತಲೆ ಓದಿ, ನೀವಿದನ್ನು ಕನ್ನಡದಲ್ಯಾಕೆ ಟೈಪ್ ಮಾಡಿಲ್ಲ, ಇಂಗ್ಲೀಷ್‌ ಯಾಕೆ ಬಳಸಿದ್ರಿ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. 

37.6 ಮಿಲಿಯನ್ ಫ್ಯಾನ್ಸ್‌ ಇದ್ದ ಖಾತೆ ಡಿಲೀಟ್; ಹಿಂಪಡೆದುಕೊಂಡ ಸಂಭ್ರಮದಲ್ಲಿ Nora!

ತನ್ನ ಬಟ್ಟೆ ಬಗ್ಗೆ ಮಾತನಾಡಿರುವವರಿಗೆ ನಿವೇದಿತಾ ಉತ್ತರ ಕೊಟ್ಟಿದ್ದಾರೆ. ನೀವು ಮೈ ಕಾಣುವ ಹಾಗೆ ತುಂಡು ಬಟ್ಟೆಗಳನ್ನು ತೊಡಬೇಡಿ, ಚೂಡಿದಾರ್ ಅಥವಾ ಸೀರೆ ತೊಟ್ಟು ವಿಡಿಯೋ ಮಾಡಿ ಎನ್ನುವ ಕಮೆಂಟ್‌ಗಳು ಬಂದಿವೆ. ಇದಕ್ಕೆ ಉತ್ತರಿಸಿದ ನಿವೇದಿತಾ "ನನ್ನ ಬಟ್ಟೆ, ನನ್ನ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಹೇಗೆ ಮಾತನಾಡುತ್ತೀರಿ, ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಸರಿ ಇರುತ್ತೆ. ಹಾಗಾಗಿ ನನಗೆ ಇಷ್ಟ ಬಂದ ಬಟ್ಟೆಯನ್ನು ನಾನು ಹಾಕುತ್ತೇನೆ." ಎಂದು ನಿವೇದಿತಾ ಉತ್ತರ ನೀಡಿದ್ದಾರೆ.

ನಿವೇದಿತಾ ಅವರು ಆಗಾಗ ಕೆಲವೊಂದು ಅಡುಗೆಗಳನ್ನು ಮಾಡಿ, ರೆಸಿಪಿಗಳನ್ನು ವಿಡಿಯೋದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಬಗ್ಗೆ ಬಂದಿರುವ ಕಮೆಂಟ್‌ನಲ್ಲಿ 'ಇನ್ನು ನಿಮಂತಹ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ, ಮನೆಯವರು ಹೊಟ್ಟೆ ತುಂಬಾ ತಿಂದ ಹಾಗೆ" ಎಂದು ಬರೆಯಲಾಗಿದೆ. ಇದಕ್ಕೆ ನಿವೇದಿತಾ "ಹೆಣ್ಣು ಮಕ್ಕಳೇ ಅಡುಗೆ ಮಾಡಬೇಕು, ಮನೆ ಕೆಲಸ ಮಾಡಬೇಕು, ಮಕ್ಕಳನ್ನು ಹೆರಬೇಕು ಅಂತ ರೂಲ್ಸ್ ಯಾಕೆ.? ಹಾಗಾದರೆ ಗಂಡು ಮಕ್ಕಳು ಇರುವುದು ಯಾಕೆ." ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ಉತ್ತರ ಫನ್ನಿ ಆಗಿದ್ರೂ ಚೆನ್ನಾಗಿ ತಟ್ಟಿರೋ ಥರ ಇರೋದಂತೂ ಸತ್ಯ. ಇನ್ಮೇಲೆ, ಸೆಲೆಬ್ರಿಟಿಗಳ ಬಗ್ಗೆ ಹಗುರವಾಗಿ ಕಮೆಂಟ್‌ ಮಾಡೋರು ಕೊಂಚ ಯೋಚಿಸ್ಬೇಕು, ಆ ಥರ ಇವರ ಈ ವೀಡಿಯೋ ಇದೆ. 

ನಟಿಯ ಮೈಯಲ್ಲಿ ಎಷ್ಟು ಮಚ್ಚೆ ಇದೆ: ಪತ್ರಕರ್ತನ ಪ್ರಶ್ನೆಗೆ ನಟ Siddu ಜೊನ್ನಲಗಡ್ಡ ಉತ್ತರವಿದು