ಪ್ರೇಮಿಗಳ ದಿನದಂದು ಚಿರಂಜೀವಿ ಸರ್ಜಾ ಕೊಟ್ಟಿರುವ ಮೊದಲ ಗಿಫ್ಟ್‌, ಫನ್ನಿ ಗಿಫ್ಟ್‌ ಏನೆಂದು ಹಂಚಿಕೊಂಡ ಮೇಘನಾ ರಾಜ್..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸಿಂಗ್ ಚಾಂಪಿಯನ್‌' ನಲ್ಲಿ ಮೇಘನಾ ರಾಜ್‌ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳವ ಮೂಲಕ ಮನೆ ಮಾತಾಗಿದ್ದಾರೆ. ಪ್ರತಿ ವೀಕೆಂಡ್ ಮೇಘನ ಅವರನ್ನು ನೋಡಬೇಕು, ಅವರು ಸಿಂಪಲ್ ಆಂಡ್ ಸ್ಟ್ರೇಟ್ ಕಾಮೆಂಟ್ ಕೇಳಬೇಕು ಎಂದು ವೀಕ್ಷಕರು ಕಾಯುತ್ತಿರುತ್ತಾರೆ. ಈ ವಾರ ಪ್ರೇಮಿಗಳ ದಿನಾಚರಣೆ ಸ್ಪೆಷಲ್ ಎಂದು ಮೇಘನಾಗೆ ಆಗಲೇ ಗಿಫ್ಟ್‌ ಆಗಿ ಬಂದಿರುವ ಸ್ಪೆಷಲ್ ಗಿಫ್ಟ್‌ಗಳನ್ನು ನೀಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಹೌದು! 'ಆಟಗಾರ' ಸಿನಿಮಾ ಚಿತ್ರೀಕರಣದ ವೇಳೆ ಚಿರಂಜೀವಿ ಸರ್ಜಾ ಮೇಘನಾ ರಾಜ್‌ಗೆ ಪ್ರಪೋಸ್ ಮಾಡಿದ್ದು ಅಂದಿನಿಂದ ಚಿರು ಕೊಟ್ಟ ಪ್ರತಿಯೊಂದು ಗಿಫ್ಟ್‌ನ ಮೇಘಾನ ತುಂಬಾನೇ ಕೇರ್ ಮಾಡಿ ಜೋಪಾನ ಮಾಡಿದ್ದಾರೆ. ಇಡೀ ವಾಹಿನಿಯಿಂದ ನಿಮಗೆ ಸ್ಪೆಷಲ್ ಗಿಫ್ಟ್‌ ಎಂದು ನಿರೂಪಕ ಅಕುಲ್ ಬಾಲಾಜಿ ಕೆಂಪು ಬಣ್ಣದ ಉಡುಗೊರೆ ಡಬ್ಬವನ್ನು ನೀಡಿದ್ದಾರೆ. ಅದನ್ನು ಓಪನ್ ಮಾಡುತ್ತಲೇ ಮೇಘನಾ ರಾಜ್ ಭಾವುಕರಾಗಿದ್ದಾರೆ. 

ಒಂದು ಒಡವೆ ಡಬ್ಬ ಓಪನ್ ಮಾಡಿ ಎಲ್ಲರಿಗೂ ಸರ ತೋರಿಸಿದ್ದಾರೆ. 'ನಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಚಿರು ನನಗೆ ಗಿಫ್ಟ್ ಮಾಡಿದ ಸರ ಇದು' ಎಂದು ಮತ್ತೊಂದು ಗಿಫ್ಟ್‌ ಓಪನ್ ಮಾಡಿದ್ದಾರೆ. ಕಪ್ಪು ಬಣ್ಣದ ಬ್ಯಾಗ್ ಹೊರ ತೆಗೆದು 'ನನಗೆ ಹ್ಯಾಂಡ್‌ಬ್ಯಾಗ್ ತುಂಬಾನೇ ಇಷ್ಟ ಎಲ್ಲ ಹುಡುಗಿಯರಿಗೂ ಇಷ್ಟ ಇರುತ್ತೆ. ಚಿರುಗೂ ಗೊತ್ತು ನನಗೆ ಹ್ಯಾಂಡ್‌ ಬ್ಯಾಗ್ ಅಂದ್ರೆ ಇಷ್ಟ ಅಂತ. 2019 ವ್ಯಾಲೆಂಟೈನ್ಸ್‌ ಡೇ ದಿನ ನಾವು ಆಚರಿಸಿದ್ದಾಗ ಚಿರು ಕೊಟ್ಟ ಗಿಫ್ಟ್ ಇದು'ಎಂದಿದ್ದಾರೆ ಮೇಘನಾ. ಮತ್ತೆ ಬ್ಯಾಗ್‌ ಒಳಗಿದ್ದ ಎರಡು ಗಿಫ್ಟ್‌ ತೆಗೆದಿದ್ದಾರೆ. ಒಂದರಲ್ಲಿ ಚಿರು ಜೊತೆಗಿರುವ ಫೋಟೋ ಮತ್ತೊಂದು ಕನ್ನಡದ ಮೀಸೆ ಇರುವ ಕಾರ್ಟೂನ್ ಕ್ಯಾರೆಕ್ಟರ್. 

Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

    'ಇದು ಇಲ್ಲಿ ಇರುವುದಕ್ಕೆ ಮನೆಯಲ್ಲಿ ಕಾಣಿಸುತ್ತಿರಲಿಲ್ಲ. ಗೋವಾದಲ್ಲಿ ಆಟಗಾರ ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ ಮಾಡಿದ ಫೋಟೋ ಇದು. ಚಿರು ಪ್ರಕಾರ ಅವರು ಅಫೀಶಿಯಲ್ ಆಗಿ ಪ್ರಪೋಸ್ ಮಾಡಿದ ದಿನ ಅದು. ಇಡೀ ತಂಡ ರಾತ್ರಿ ಊಟ ಮಾಡ್ತಿದ್ವಿ ಆಗ ಇದ್ದಕ್ಕಿದ್ದಂತೆ ಪಟಾಕಿ ಸೌಂಡ್ ಬಂತು ನಾನು ಏನಪ್ಪ ಅಂತ ನೋಡ್ತಿದ್ದೀನಿ ಆಗ ಚಿರು ಮಂಡಿಯೂರಿ ನನಗೆ ಪ್ರಪೋಸ್ ಮಾಡಿದ್ದರು. ನಾನು ಈ ರೀತಿ ರೊಮ್ಯಾಂಟಿಕ್ ಎಲ್ಲಾ ಇಷ್ಟ ಪಡ್ತೀನಿ ಅವರು ಹೀಗೆ ಮಾಡಬೇಕು ಅಂತ ನನಗೆ ಇಷ್ಟ ಇತ್ತು. ಮದುವೆಗೂ ಮುಂಚೆ ನಾನು ಇದನ್ನು ಬೆಡ್ ಪಕ್ಕ ಇಟ್ಕೊಂಡು ಮಲಗುತ್ತಿದ್ದೆ. ಇದನ್ನ ನಾನು ಮೂರು ದಿನದಿಂದ ಎಲ್ಲಿ ಇಟ್ಟೆ ಅಂತ ಹುಡುಕ್ತಿದ್ದೆ. ನನ್ನ ಮಗ ಇದನ್ನು ಇಟ್ಕೊಂಡು ಓಡಾಡುತ್ತಿರುತ್ತಾನೆ. ಎಲ್ಲಿ ಬಿಸಾಕಿ ಬಿಡುತ್ತಾನಾ ಅಂತ ನೋಡ್ತಾ ಇರ್ತೀನಿ' ಎಂದು ಮೇಘನಾ ಹೇಳಿದ್ದಾರೆ.

    Meghana Raj Gets Emotional: ಅಮ್ಮ ಅಂದ್ರೆ ಅಪ್ಪ ಅಪ್ಪ ಅಂತಾನೆ ರಾಯನ್..! ಭಾವುಕರಾದ ಮೇಘನಾ

      ಮತ್ತೊಂದು ಪ್ಲಾಸ್ಟಿಕ್ ಆಟಿಕೆ ಹಿಡಿದುಕೊಂಡು 'ಚಿರು ಪ್ರಕಾರ ಇದು ಗಿಫ್ಟ್‌ ಅಲ್ಲ ಆದರೆ ನನ್ನ ಪ್ರಕಾರ ಅವರು ಕೊಡಿಸಿದ ಮೊದಲ ವಸ್ತು ಇದು. ವಾಯುಪುತ್ರ ಸಿನಿಮಾ ನೋಡ್ಕೊಂಡು ಮನೆಗೆ ಬರ್ತಿದ್ವಿ ಆಗ ಸಿಗ್ನಲ್‌ನಲ್ಲಿ ಈ ಮಾಸ್ಕ್‌ ಮಾರ್ತಿದ್ರು ಚಿರುಗೆ ನನ್ನ ರೇಗಿಸುವುದಕ್ಕೆ ಇಷ್ಟ ಆಗ ಇದನ್ನು ಕೊಡಿಸಿ ಹಾಕ್ಕೋ ಹಾಕ್ಕೋ ಅಂತ ರೇಗಿಸಿದ್ರು' ಎಂದು ಮೇಘನಾ ನೆನಪಿಸಿಕೊಂಡರು. ಪಿಂಕ್ ಬಣ್ಣದ ಸೆಲ್ವಾರ್ ತೆಗೆದುಕೊಂಡು ಚಿರು ನನಗೆ ಕೊಡಿಸಿದ ಮೊದಲ ಬಟ್ಟೆ ಇದು' ಎಂದರು. 

      ಚಿರು ಧ್ವನಿ:

      'ಹಾಯ್ ಮೇಘನಾ ತುಂಬಾನೇ ಸ್ಪೆಷಲ್ ಫೀಲ್ ಆಗುತ್ತಿದೆ. ನಾನು ನಿನ್ನ ಜೊತೆ ತುಂಬಾ ಕಿತ್ತಾಡ್ತೀನಿ ನಿನ್ನ ಜೊತೆ ಕಂಪ್ಲೀಟ್ ಫೀಲ್ ಆಗುತ್ತದೆ. ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ದೇವರು ನಿನಗೆ ಒಳ್ಳೆಯದು ಮಾಡಲಿ.ಆರೋಗ್ಯ, ಆಯಸ್ಸು, ಶ್ರೇಯಸ್ಸು ಸಂಪತ್ತು ನಿನಗೆ ಸಿಗಲಿ. ಲವ್ ಯೂ' ಎಂದು ಚಿರಂಜೀವಿ ಈ ಹಿಂದೆ ಮೇಘನಾ ಅವರಿಗೆ ಕಳುಹಿಸಿದ ಧ್ವನಿಯನ್ನು ವೇದಿಕೆಯಲ್ಲಿ ಪ್ಲೇ ಮಾಡಲಾಗಿತ್ತು.

      ಚಿರು ಧ್ವನಿ ಕೇಳುತ್ತಿದ್ದಂತೆ ಮೇಘನಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 'ಇದು ಸತ್ಯ ಆಗಬಾರದಿತ್ತಾ ಅನಿಸುತ್ತಿದೆ' ಎಂದು ಮೇಘನಾ ಅತ್ತಿದ್ದಾರೆ. ಹಾಗೇ ಪತಿ ಕೊಟ್ಟಿದ್ದ ಸರವನ್ನು ಹಾಕಿಕೊಂಡಿದ್ದಾರೆ.

      View post on Instagram