Asianet Suvarna News Asianet Suvarna News

ಆಂಕರ್ ಅನುಶ್ರೀಯನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ ಕನ್ನಡಿಗರು; ಇದಕ್ಕೆಲ್ಲಾ ಅಕುಲ್ ಬಾಲಾಜಿ ಹೊಣೆ!

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೂಟಿಂಗ್ ಬಿಡುವಿನ ವೇಳೆ ಅಕುಲ್ ಬಾಲಾಜಿ ಜೊತೆಗೆ ಡ್ಯಾನ್ಸ್ ಮಾಡಿದ ಆಂಕರ್ ಅನುಶ್ರೀಗೆ ಕನ್ನಡಿಗರು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ್ದಾರೆ.

Kannada fans angry showing on Anchor Anushree for tamil song dance with akul Balaji sat
Author
First Published Jul 10, 2024, 7:44 PM IST

ಬೆಂಗಳೂರು (ಜು.10): ಕನ್ನಡ ಕಿರುತೆರೆಯ ಅತ್ಯಂತ ಬೇಡಿಕೆಯ ಆಂಕರ್ ಎಂದರೆ ಅದು ಅನುಶ್ರೀ.. ಇನ್ನು ಅನುಶ್ರೀ ಕನ್ನಡವನ್ನು ಹರಳು ಹುರಿದಂತೆ ಪಟ ಪಟನೇ ಮಾತನಾಡುವ ಸುಂದರಿ. ಇದೀಗ ಅನುಶ್ರೀ ಅಕುಲ್ ಬಾಲಾಜಿ ಜೊತೆ ಸೇರಿ ಹಾಳಾಗಿ ಹೋಗಿದ್ದಾರೆ. ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅಭಿಮಾನಿಗಳು ಅನುಶ್ರೀಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಕಿರುತೆರೆಯ ಅಭಿಜಾತ ಸುಂದರಿ ಅನುಶ್ರೀ ನೋಡಲಿಕ್ಕೆ ಮುದ್ದಾಗಿರುವುದು ಮಾತ್ರವಲ್ಲದೇ, ಅವಳ ಮಾತುಗಳು ಕೂಡ ಮನಸ್ಸಿಗೆ ಮೋಡಿ ಮಾಡುತ್ತವೆ. ಯಾವುದೇ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ನಿರೂಪಣೆ ಮಾಡುತ್ತಿದ್ದರೂ, ಅನುಶ್ರೀ ಮಾತುಗಳನ್ನು ಬಿಟ್ಟು ವೀಕ್ಷಕರು ಬೇರೆ ಚಾನೆಲ್ ಹಾಕುವುದೇ ಇಲ್ಲ. ಕಾರಣ ಶುದ್ಧ ಕನ್ನಡದಲ್ಲಿ ಮಾತನಾಡುತ್ತಾ ಇಡೀ ವೀಕ್ಷಕರ ಮನಸ್ಸನ್ನು ತನ್ನತ್ತ ಕೇಂದ್ರೀಕರಿಸಿಕೊಂಡು ಮುಂದೇನಾಗುತ್ತದೆ ಎಂಬ ಕುತೂಹಲವನ್ನು ತಮ್ಮ ಮಾತಿನ ಪದಗಳಲ್ಲಿ ಹಿಡಿದಿಟ್ಟುಕೊಂಡಿರುತ್ತಾಳೆ. ಆದರೆ, ಈಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋ ಆರಂಭವಾದಾಗಿನಿಂದ ಕನ್ನಡಿಗರು ಅನುಶ್ರೀಯನ್ನು ಕೆಕ್ಕರಿಸಿ ನೋಡುತ್ತಿದ್ದಾರೆ.

ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!

ಹೌದು, ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಆದರೆ, ಪ್ರೀಮಿಯರ್ ಲೀಗ್‌ನ 5 ತಂಡಗಳ ನೇತೃತ್ವವನ್ನು ಜೀ ಕನ್ನಡದ ಹಲವು ಆಂಕರ್‌ಗಳಿಗೆ ನೀಡಲಾಗಿದೆ. ಅದರಲ್ಲಿ ನಿರೂಪಕರಾದ ಅನುಶ್ರೀ, ಶ್ವೇತಾ ಚೆಂಗಪ್ಪ, ಮಾಸ್ಟರ್ ಆನಂದ್, ಕುರಿ ಪ್ರತಾಪ್ ಹಾಗೂ ಅಕುಲ್ ಬಾಲಾಜಿ ಕೂಡ ಇದ್ದಾರೆ. ಇನ್ನು ತಂಡದ ನೇತೃತ್ವ ವಹಿಸಿಕೊಂಡಿರುವ 5 ಮೆಂಟರ್‌ಗಳು ಕೂಡ ತಮ್ಮ ತಂಡಗಳಿಗೆ ಸಪೋರ್ಟ್ ಮಾಡುವ ಜೊತೆಗೆ ಬಿಡುವಿನ ವೇಳೆಯಲ್ಲಿ ತಮ್ಮದೇ ಕೂಟ ಮಾಡಿಕೊಂಡು ರೀಲ್ಸ್, ಹಾಡು, ಕುಣಿತ ಇತ್ಯಾದಿ ಚಟುವಟಿಕೆ ಮಾಡುತ್ತಿದ್ದಾರೆ. ಹೀಗಿರುವಾಗ ನಟಿ ಹಾಗೂ ಆಂಕರ್ ಅನುಶ್ರೀ, ತಮ್ಮ ಸಹೋದ್ಯೋಗಿ ಅಕುಲ್ ಬಾಲಾಜಿ ಜೊತೆಗೆ ಕನ್ನಡ ಹಾಡುಗಳು ಸೇರಿದಂತೆ ತಮಿಳು ಹಾಗೂ ತೆಲುಗು ಹಾಡಿಗೆ ಕುಣಿದು ಕುಪ್ಪಳಿಸಿದ್ದಾಳೆ.

ಕನ್ನಡತಿ ಅನುಶ್ರೀ ಅಕುಲ್ ಬಾಲಾಜಿಯೊಂದಿಗೆ ಸೇರಿಕೊಂಡು ತಮಿಳು ಹಾಗೂ ತೆಲುಗು ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ಕನ್ನಡಿರು ಅನುಶ್ರೀ ಮೇಲೆ ಕೆಂಗಣ್ಣು ನೆಟ್ಟಿದ್ದಾರೆ. ಇನ್ನು ಅನುಶ್ರೀ ತನ್ನ ರೀಲ್ಸ್ ಮಾಡಿದ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ಫ್ಯಾಮಿಲಿ ರೌಂಡ್ ವೇಳೆ ತಮಿಳು ಹಾಡಿಗೆ ಇಬ್ಬರೂ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಹಲವು ನೆಟ್ಟಿಗರು ನೀವು ಕನ್ನಡ ಹಾಡಿಗೆ ನೃತ್ಯ ಮಾಡಿ, ಅದನ್ನು ಬಿಟ್ಟು ಅನ್ಯ ಭಾಷೆಯ ಹಾಡುಗಳಿಗೆ ಹೆಜ್ಜೆ ಹಾಕುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ಕಂಠೀರವ ಸ್ಟುಡಿಯೋದಲ್ಲಿ ಮುದ್ದಾಡುವಾಗಲೇ ಮತ್ತೆ ಸಿಕ್ಕಿಬಿದ್ದ ಆಂಕರ್ ಅನುಶ್ರೀ..!

ಇನ್ನೊಬ್ಬರು 'ಕನ್ನಡಿಗರಾಗಿ ಬೇರೆ ಬಾಷೆ ಸಾಂಗ್ ತಪ್ಪಾಲವಾ..?' ಎಂದರೆ ಮತ್ತೊಬ್ಬರು, 'ನಾಚಿಕೆಯಾಗಬೇಕು ನಿಮಗೆ ! ತಮಿಳು ಹಾಡು ಹಾಕ್ಕೊಂಡು ನೃತ್ಯ ಮಾಡಲಿಕ್ಕೆ' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ, ನಮ್‌ ಕನ್ನಡದಲ್ಲೆ ಹೆಜ್ಜೆ ಹಾಕೊ ಸಾಂಗ್ಸ್ ಇದಾವಲ್ಲ ಬೇರೆ ಭಾಷೆದು ಸಾಂಗ್ ಯಾಕೆ....? ಎಂದು ಕೇಳಿದ್ದಾರೆ. ಮುಂದುವರೆದು ಮತ್ತೊಬ್ಬರು 'ಕನ್ನಡ ಸಾಂಗ್ ಎಲ್ಲ ಸೋತೋಗಿದ್ದಾವಾ? ಕನ್ನಡ ಹಾಡಿಗೆ ಕುಣೀರಪ್ಪಾ ಎಂದು ಅನುಶ್ರೀಗೆ ಸಲಹೆ ನೀಡಿದ್ದಾರೆ.

ಆದರೆ, ಅನುಶ್ರೀ ಪರವಾಗಿ ಮಾತನಾಡಿದ ಒಬ್ಬ ನೆಟ್ಟಿಗರು 'ನಾಳೆ ಊಟ ಮಾಡೋಕೆ ಕನ್ನಡದ ಅಕ್ಕಿ ಪಲಾವ್ ಇರ್ ಬೇಕಾದರೆ ಬೇರೆ ರಾಜ್ಯದ ಮಸಾಲೆ ದೋಸೆ ಯಾಕೆ ಅಂತಾನೂ ದಬ್ಬಾಳಿಕೆ ಶುರು ಆಗಬಹುದು. ಅವರಿಗೆ ಆ ಹಾಡು ಇಷ್ಟ ಆಯ್ತು ಕುಣಿತಿದಾರೆ. ಇಂತದ್ದೇ ಹಾಡು ಕೇಳಬೇಕು, ಇಂತದ್ದೇ ತಿನ್ನಬೇಕು ಅನ್ನೋಕೆ ಕನ್ನಡ ಅನ್ನೋದು ಜೈಲಾ? ಅವರಿಗೆ ಇಷ್ಟ ಆಗೋದೆಲ್ಲ ಬರೀ ಕನ್ನಡ ಮಾತ್ರ ಇರ ಬೇಕಾ? ಎಂದು ಕನ್ನಡದ ಬಗ್ಗೆ ಪಾಠ ಮಾಡಿದವರಿಗೆ ತೊರುಗೇಟು ಕೊಟ್ಟಿದ್ದಾರೆ. ಆದರೆ, ಅನುಶ್ರೀ ಮಾತ್ರ ಯಾವುದೇ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿಲ್ಲ.

Latest Videos
Follow Us:
Download App:
  • android
  • ios