ಬೆಂಗಳೂರು (ಮಾ. 18): ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ ಮನ ಗೆದ್ದ ರಿಯಾಲಿಟಿ ಶೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಈ ಶೋವನ್ನು ಹೋಸ್ಟ್ ಮಾಡುತ್ತಿದ್ದು, ಇದಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಸದ್ಯದಲ್ಲೇ ವೀಕೆಂಡ್ ವಿತ್ ರಮೇಶ್ ಶುರುವಾಗಲಿದೆ. 

ಕೆಜಿಎಫ್ ಚಾಪ್ಟರ್-2 ಲುಕ್ ರಿವೀಲ್ ಮಾಡಿದ ಯಶ್! 

ಇದೀಗ ಮತ್ತೆ ರಮೇಶ್ 4 ನೇ ಆವೃತ್ತಿ ಮೂಲಕ ನಮ್ಮ ಮುಂದೆ ಬರಲಿದ್ದಾರೆ. ಮತ್ತೆ ನಿಮ್ಮ ಮುಂದೆ ಬರಲು ಖುಷಿಯಾಗುತ್ತಿದೆ. ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದಾಗ ಆಗುವ ಖುಷಿಯಾಗುತ್ತಿದೆ. ವೀಕೆಂಡ್ ವಿತ್ ರಮೇಶ್ ಜನರಲ್ಲಿ ಒಂದು ಕನಸನ್ನು ಬಿತ್ತಿದೆ. ಇಲ್ಲಿನ ಕೆಂಪು ಕುರ್ಚಿ ಯುವ ಜನರಲ್ಲಿ ಭರವಸೆಯನ್ನು ಮೂಡಿಸುತ್ತಿದೆ ಎಂದು ರಮೇಶ್ ಹೇಳಿದ್ದಾರೆ. 

ಕಿಚ್ಚನ ಫ್ಯಾನ್ಸ್‌ಗೆ ತ್ರಿಬಲ್ ಧಮಾಕಾ..!

ನಾವು ನಮ್ಮ ಪ್ರೇಕ್ಷಕರಿಗೆ ಉತ್ತಮ ಸಂದೇಶದ ಜೊತೆಗೆ ಮನರಂಜನೆ ನೀಡಲು ಸಿದ್ಧರಾಗಿದ್ದೇವೆ. ಅತಿಥಿಗಳನ್ನು ಕರೆ ತರುವುದು, ಅವರ ಸಾಧನೆ, ಕೊಡುಗೆಗಳನ್ನು ಪ್ರಸ್ತುತಪಡಿಸುವ ರೀತಿ ಜನರ ಮನ ಗೆದ್ದಿದೆ. ವಿಕೆಂಡ್ ವಿತ್ ರಮೇಶ್ ಯಶಸ್ಸಿಗೆ ಇದೇ ಕಾರಣ. ಈ ಸೀಸನ್ ನಲ್ಲೂ ಸಾಕಷ್ಟು ವಿಶೇಷತೆಗಳಿರುತ್ತವೆ ಎಂದು ಬ್ಯಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.