ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 2 ವಿನ್ನರ್ ಚಂದನಾ ಗೌಡ ಬೆಂಗಳೂರಿನಲ್ಲಿ ಸ್ವಂತ ಮನೆ ಖರಿದಿಸಿದ್ದು ಹೇಗೆ? ಮಾಡಲಿಂಗ್, ಮನಿ ಆಂಡ್ ಫ್ಯಾಮಿಲಿ ಬಗ್ಗೆ ನಟಿ ಮಾತು....
ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ 'ಹಳ್ಳಿ ಹೈದ ಪ್ಯಾಟೆಗ್ ಬಂದ' ಸೀಸನ್ 2 ವಿನ್ನರ್ ಚಂದನಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟ ಆಕ್ಟಿವ್ ಆಗಿದ್ದಾರೆ. ಮಾಡಲಿಂಗ್, ಇಂಗ್ಲಿಷ್ ಕ್ಲಾಸ್ ಮತ್ತು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲು ಚಂದನಾ ತಮ್ಮ ಜೀವನದ ಕಥೆ ಹಂಚಿಕೊಂಡಿದ್ದಾರೆ.
'ಕನ್ನಡ ಮೀಡಿಯಂ ಶಾಲೆಯಲ್ಲಿ ಓದಿದ್ರೆ ಕನಸು ನನಸು ಮಾಡಿಕೊಳ್ಳಲು ಅಗುವುದಿಲ್ಲ. 5.4' ಹೈಟ್ ಇದ್ರೆ ಮಾಡಲಿಂಗ್ ಮಾಡೋಕೆ ಆಗಲ್ಲ, ಕಪ್ಪ ಬಣ್ಣ ಇದ್ರೆ ಇಂಡಿಯಾನ ಪ್ರತಿನಿಧಿಸಲು ಆಗಲ್ಲ ಅಂತ ತುಂಬಾ ಜನ ಹೀಯಾಳಿಸಿದರು. ಈ ರೀತಿ ಕಾಮೆಂಟ್ ಮಾಡಿದ ಜನರ ಎದುರು ಮಿಸ್ ಗ್ರ್ಯಾಂಡ್ ಏಷ್ಯಾ 2019 ಕಿರೀಟ ಪಡೆದುಕೊಂಡೆ, ಕಪ್ಪಿದ್ದರೂ ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್ 2ರ ವಿನ್ನರ್ ಕಿರೀಟ ಪಡೆದೆ, ಕನ್ನಡ ಮೀಡಿಯಂನಿಂದ ಬಂದ್ರೂ ಇಂದು ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ತೆಗೆದುಕೊಳ್ಳುವೆ' ಎಂದು ಚಂದನಾ Josh Talk ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ನಾರ್ಮಲ್ ಡೆಲಿವರಿ ಆದ ತಕ್ಷಣ ಹೊಟ್ಟೆಗೆ ಬಟ್ಟೆ ಕಟ್ಟಿದ ನಟಿ ಅಮೃತಾ; ಮಗು ಆದ್ಮೇಲೆ ಸಣ್ಣ ಆಗೋದು ಹೀಗೆ
'ಮಿಡಲ್ ಕ್ಲಾಸ್ ಕುಟುಂಬದಿಂದ ಬಂದವಳು ನಾನು. ನನಗೆ ಅಂತ ಫ್ಯಾಮಿಲಿ ಇರುವುದು ನನ್ನ ತಾಯಿ ನನ್ನ ಅಕ್ಕ. ನಾನು ಒಂದು ವರ್ಷದ ಮಗು ಇದ್ದಾಗ ತಂದೆ ತೀರಿಕೊಂಡರು. ನಮಗೆ ಯಾರೂ ಸಪೋರ್ಟ್ ಮಾಡಿಲ್ಲ ನನ್ನ ತಾಯಿನೇ ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದು. ನಮಗೆ ಅಂತ ಫ್ಯಾಮಿಲಿ, ಸಂಬಂಧಿಕರು ಅಥವಾ ಅಕ್ಕ ಪಕ್ಕದ ಮನೆಯವರು ನಿಂತುಕೊಂಡಿಲ್ಲ ಏಕೆಂದರೆ ತಂದೆ ಇಲ್ಲದೆ ಇರುವ ಫ್ಯಾಮಿಲಿ, ತಾಯಿ ಏನು ನೋಡಿಕೊಳ್ಳುತ್ತಾರೆ ಅಂತ. ತಿಂಗಳಿಗೆ 1 ಸಾವಿರ ದುಡಿಯುತ್ತಿದ್ದ ನನ್ನ ತಾಯಿ ನೋಡಿ ಸ್ವಾಭಿಮಾನ ಕಲಿತೆ. ನನ್ನ ಬಾಲ್ಯದಲ್ಲಿ ತುಂಬಾ ಕಷ್ಟವಿತ್ತು' ಎಂದು ಚಂದನಾ ಮಾತನಾಡಿದ್ದಾರೆ.
'ಸ್ಕಾಲರ್ಶಿಪ್ ನಲ್ಲಿ ನಾನು ಬಾಸ್ಟನ್ ಯೂನಿವರ್ಸಿಟಿಗೆ ಓದಲು ಅವಕಾಶ ಪಡೆದುಕೊಂಡೆ. ಅಲ್ಲಿಗೆ ಹೋಗಲು ನನ್ನ ಬಳಿ ಒಂದು ಬಟ್ಟೆ ಇರಲಿಲ್ಲ. ಒಳ್ಳೆ ಒಳ್ಳೆ ಬಟ್ಟೆ ಕೊಡಿಸಲು ನನ್ನ ತಾಯಿಗೆ ಆಗುತ್ತಿರಲಿಲ್ಲ. ಪ್ರತಿಯೊಬ್ಬರು ಜೀವನದಲ್ಲಿ ಕಷ್ಟ ಎದುರಿಸುತ್ತಾರೆ ಅವರ ಪರವಾಗಿ ನಾವು ನಿಲ್ಲಬೇಕು. ನನ್ನ ತಾಯಿ 14 ವರ್ಷವಿದ್ದಾಗ ಮದುವೆ ಮಾಡಿಕೊಂಡರು 21 ವರ್ಷವಿದ್ದಾಗ ಗಂಡ ಕಳೆದುಕೊಂಡರು. ನಾವು ಶೀಟ್ ಮನೆಯಲ್ಲಿ ವಾಸಮಾಡುತ್ತಿದ್ದ ಕಾರಣ ಮಳೆ ಬಂದರೆ ಮನೆಯೊಳಗೆ ನೀರು ಸೋರುತ್ತಿತ್ತು. ನಾನು 10ನೇ ಕ್ಲಾಸ್‌ಗೆ ಬಂದಾಗ ಟ್ಯೂಶನ್ ಮತ್ತು ಡ್ಯಾನ್ಸ್ ಕ್ಲಾಸ್ ತೆಗೆದುಕೊಂಡು ಸ್ವಲ್ಪ ಹಣ ಸಂಪಾದನೆ ಮಾಡಲು ಶುರು ಮಾಡಿದೆ. ಸಿಇಟಿ ಎಕ್ಷಾಂ ಬರೆಯಲು ನನ್ನ ಬಳಿ 500 ರೂಪಾಯಿ ಇರಲಿಲ್ಲ ಯಾರನ್ನು ಕೇಳಲು ಅಗಲಿಲ್ಲ ಹೀಗಾಗಿ ಎಂಜಿನಿಯರಿಂಗ್ ಮಾಡಲು ಇಷ್ಟವಿಲ್ಲ ಎಂದು ಸುಳ್ಳು ಹೇಳಿದೆ. ಆಂಕರ್‌ರಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದೆ ಒಂದು ಎಪಿಸೋಡ್‌ಗೆ 1 ಸಾವಿರ ಹಣವಿತ್ತು...ನನ್ನ ನಿರೂಪಣೆ ಸೂಪರ್ ಹಿಟ್ ಆಯ್ತು. ಸ್ನೇಹಿತರಿಂದ ಬಟ್ಟೆ ಪಡೆದುಕೊಂಡು ನಿರೂಪಣೆ ಮಾಡಿದೆ' ಎಂದಿದ್ದಾರೆ ಚಂದನಾ.
ಗ್ಯಾಸ್ಟ್ರಿಕ್ ಆದ್ರೆ ಮನೆಯಲ್ಲಿ ಮೂಲಂಗಿ ತಿನ್ನುತ್ತಾರೆ; Valentines ಆಚರಣೆಯಲ್ಲಿ ಝಾದ್ ಖಾನ್ ಜೊತೆ ಸೋನಲ್!
'ಒಂದು ಸಾವಿರ ರೂಪಾಯಿಂದ ಕೆಲಸ ಆರಂಭಿಸಿದೆ ಈಗ ನನ್ನ ಒಂದು ದಿನದ ಸಂಬಳ 75 ಸಾವಿರ.ಶಿಟ್ ಮನೆಯಲ್ಲಿ ಇದ್ದ ಹುಡುಗಿ ನಾನು ಈಗ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಿರುವೆ. ಮಾಡಲಿಂಗ್ ಮಾಡುವಾಗ ಶೋ ಇದ್ದ ಹಾಗೆ ಹಣ ಬರುತ್ತದೆ. ಮನೆ ಬಾಡಿಗೆ 6 ರಿಂದ 7 ಸಾವಿರ ಇದ್ದ ಕಾರಣ ಬಾರ್ತಡೇ ಮತ್ತು ಮದುವೆ ಕಾರ್ಯಕ್ರಮದಲ್ಲಿ ಡ್ರಿಂಕ್ಸ್ ಅಥವಾ ಅದು ಇದು ಕೊಡುವ ಕೆಲಸ ಮಾಡಲು ಒಪ್ಪಿಕೊಂಡೆ. ಕೇಕ್ ಮತ್ತು ಕೋಕ್ ಕೊಡುವ ಕೆಲಸ ನಾನು ಮಾಡಬೇಕಿತ್ತು ಆದರೆ ಅಲ್ಲಿದ್ದವರು ಕುಡಿದಿದ್ದರು ಹೆಣ್ಣು ಮಕ್ಕಳ ಜೊತೆ ಹೇಗೆ ವರ್ತಿಸಬೇಕು ಎಂದು ಗೊತ್ತಿರಲಿಲ್ಲ 10 ನಿಮಿಷಗಳ ಕಾಲ ಅವರ ಎದುರು ನಿಂತಿದ್ದೆ ನಿರ್ಲಕ್ಷ್ಯ ಮಾಡಿದರು. ನನ್ನ ಕೆಲಸದ ಬಗ್ಗೆ ವಿಚಾರಿಸಿದ್ದರು ನನ್ನ ಪರ್ಸನಲ್ ಜೀವನದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಬೇಕೆಂದು ಕೋಕ್‌ನ ನನ್ನ ಮೈ ಮೇಲೆ ಎರೆಚಿದರು. ಆಗ ಏನು ಮಾಡಬೇಕು ಎಂದು ಗೊತ್ತಿರಲಿಲ್ಲ. ನೀವು ಕೊಡುವ ಹಣ ಬೇಡ ಏನೂ ಬೇಡ ಎಂದು ಮನೆಗೆ ಹೋಗಿ 1 ವಾರಗಳ ಕಾಲ ಮನೆಯಿಂದ ಹೊರ ಬರಲಿಲ್ಲ' ಎಂದು ಚಂದನಾ ಹೇಳಿದ್ದಾರೆ.
