ದುಬೈ ಪ್ರವಾಸದ ವಿಡಿಯೋ ಹಂಚಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್, ಸಣ್ಣ ಪುಟ್ಟ ಮಾಹಿತಿಗಳ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್...
ಕನ್ನಡ ಜನಪ್ರಿಯ ನಿರೂಪಕಿ ಮತ್ತು ಬಿಗ್ ಬಾಸ್ (Bigg Boss) ಸ್ಪರ್ಧಿ ಚೈತ್ರಾ ವಾಸುದೇವನ್ (Chaitra Vasudevan) ಕೊರೋನಾ ತೀವ್ರತೆ ಕರ್ನಾಟಕದಲ್ಲಿ ಹೆಚ್ಚಾದಾಗ ದುಬೈ (Dubai) ಪ್ರವಾಸದಲ್ಲಿದ್ದರು. ಕೆಲಸದ ಕಾರಣ ಪ್ರಯಾಣ ಮಾಡುವುದು ಅನಿವಾರ್ಯ ಎಂದು ಕೂಡ ಸೋಷಿಯಲ್ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದರು. ಹೀಗಾಗಿ ತಮ್ಮ ಪ್ಯಾಕಿಂಗ್‌ನಿಂದ ಹಿಡಿದು, ವಿಮಾನ ನಿಲ್ದಾಣದಲ್ಲಿ ನಡೆಯುವ ಚೆಕ್ಕಿಂಗ್, ಕೊರೋನಾ ಟೆಸ್ಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಹಲವು ತಿಂಗಳಿನಿಂದ ಯುಟ್ಯೂಬ್‌ನಲ್ಲಿ (Youtube) ಆ್ಯಕ್ಟಿವ್ ಆಗಿರುವ ಚೈತ್ರಾ ವಾಸುದೇವನ್, ಇದೀಗ ದುಬೈನಲ್ಲಿ ಶಾಪಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಯಾರೇ ದುಬೈಗೆ ಹೋದರೂ ತಪ್ಪದೇ ಶಾಪಿಂಗ್ ಮಾಡಿಯೇ ಬರುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ, ಒಂದು ಅಲ್ಲಿ ಸಿಗುವ ಕಲೆಕ್ಷನ್ ಎಲ್ಲಿಯೂ ಸಿಗುವುದಿಲ್ಲ. ಮತ್ತೊಂದು ಅಲ್ಲಿ ಸದಾ ಆಫರ್ ಇರುತ್ತದೆ. ಹೀಗಾಗಿ ಚೈತ್ರಾ ಕೂಡ ತಮ್ಮ ಸ್ನೇಹಿತೆ ಜೊತೆ ಶಾಪಿಂಗ್ ಮಾಡಿದ್ದಾರೆ. ಸ್ನೇಹಿತೆ ಮೇಕಪ್ ಆರ್ಟಿಸ್ಟ್ (Makeup artist) ಆಗಿರುವ ಕಾರಣ ಕೆಲವೊಂದು ಪ್ರಾಡೆಕ್ಟ್‌ಗಳನ್ನು ಡಿಸ್ಕೈಂಟ್‌ನಲ್ಲಿ ಖರೀದಿಸಿದ್ದಾರೆ.
ಬುರ್ಜ್ ವಿಸ್ತಾದಲ್ಲಿ (Burj Vista) ವಾಸವಾಗಿರುವ ಚೈತ್ರಾ ದುಬೈ ಮಾಲ್‌ಗೆ (Dubai Mall) ಕನೆಕ್ಟಿಂಗ್ ಬ್ರಿಜ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ವಿದೇಶಗಳಲ್ಲಿ ಮಾಲ್‌ಗಳು ಹೇಗಿರುತ್ತವೆ ಯಾವ ರೀತಿ ಅಲ್ಲಿರುವ ಅಂಗಡಿಗಳನ್ನು ಹುಡುಕಬೇಕು, ಎಂದು ವಿಡಿಯೋದಲ್ಲಿ ಹೇಳಿಕೊಟ್ಟಿದ್ದಾರೆ. ಹಾಗೆಯೇ ತಮ್ಮ ಸ್ನೇಹಿತೆಯನ್ನು ಬರ ಮಾಡಿಕೊಂಡು, ಮೇಕಪ್ ಶಾಪಿಂಗ್ (Makeup Shopping), ಬಟ್ಟೆ ಶಾಪಿಂಗ್ ಶುರು ಮಾಡಿದ್ದಾರೆ. ಪ್ರತಿಯೊಂot ಮಾಲ್‌ನಲ್ಲೂ ಒಂದು ಜನಪ್ರಿಯ ಹೋಟೆಲ್ ಅಥವಾ ಫುಡ್ ಶಾಪ್ ಇರುತ್ತದೆ. ಭಾರತದಲ್ಲಿ ಹೇಗೆ ಆಲ್ ಬೇಕ್ (Al Bake) ಇರುತ್ತದೆ/a ಹಾಗೆಯೇ ದುಬೈ ಮಾಲ್‌ನಲ್ಲಿಯೂ ಆಲ್ ಬೈಟ್ಸ್ (Al bites) ಇವೆ, ಇಲ್ಲಿ ಚಿಕನ್ ನಗೆಟ್ಸ್ (chicken Nuggets) ಸೂಪರ್ ಆಗಿದೆ ಎಂದು 1 ಗಂಟೆಗಳ ಕಾಲ ಕ್ಯೂನಲ್ಲಿ ಕಾದು ರುಚಿ ನೋಡಿದ್ದಾರೆ. ಆನಂತರ ಮತ್ತೆ ಶಾಪಿಂಗ್ ಮಾಡಿ ಸ್ನೇಹಿತೆ ಕುಟುಂಬದ ಜೊತೆ ದುಬೈನಲ್ಲಿ ಸಿಗುವ ಅತಿ ದೊಡ್ಡ ಶವರ್ಮಾವನ್ನು ಸೇವಿಸಿದ್ದಾರೆ.
ಇಷ್ಟೊಂದು ವಿಭಿನ್ನ ಲಂಗ ಧಾವಣಿ ಇದ್ಯಾ?; ಚೈತ್ರಾ ವಾಸುದೇವನ್ ಔಟ್‌ಫಿಟ್ಸ್ ವೈರಲ್
ತಮ್ಮ ಚಿಕನ್ ಶವರ್ಮಾ (Chicken Shawarma) ಜೊತೆ ಟರ್ಕಿಶ್ ಐಸ್ ಕ್ರೀಮ್, ಬಕ್ಲಾವ ಮತ್ತು ಸಫ್ರಾನಿ ಮಿಲ್ಕ್ ಟೀ ರುಚಿ ನೋಡಿದ್ದಾರೆ. ಒಂದು ಶವರ್ಮಾನ ಮೂರು ಜನರ ತಿನ್ನಬಹುದು ಎಂದು ಹೋಟೆಲ್‌ನವರೇ ಹೇಳುತ್ತಾರಂತೆ. ಶವರ್ಮಾ ತುಂಬಾನೇ ಸಾಫ್ಟ್ ಚಿಕನ್, ಜೊತೆಗೆ ಜ್ಯೂಸಿಯಾಗಿದೆ ಎಂದು ವಿವರಣೆ ನೀಡಿದ್ದಾರೆ. ಎರಡು ಲೋಟ್ ಮಿಲ್ಕ್ ಟೀ (Tea) ರುಚಿ ನೋಡಿ ವಿಡಿಯೋ ಮುಗಿಸಿದ್ದಾರೆ. ಈ ವಿಡಿಯೋದಲ್ಲಿ ಚೈತ್ರಾ ಧರಿಸಿರುವ ಮಾಡ್ರನ್ ಬಟ್ಟೆ ಬಗ್ಗೆ ಮತ್ತು ಎಷ್ಟು ಖರ್ಚಾಯ್ತು (Expenses) ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಚೈತ್ರಾ ಜೊತೆ ಪ್ರಯಾಣ ಮಾಡಬೇಕಿದ್ದ ಇನ್ನೂ ಇಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಿಂತಿರುಗಿ ಕಳುಹಿಸಲಾಗಿತ್ತಂತೆ.
ಚೈತ್ರಾ ವಾಸುದೇವನ್ ಬಗ್ಗೆ ನೆಟ್ಟಿಗರು ಪದೇ ಪದೇ ಹುಡುಕುವ ಪ್ರಶ್ನೆಗಳಿವು!
ಚೈತ್ರಾ ಪ್ಯಾಕಿಂಗ್ ವಿಡಿಯೋದಲ್ಲಿ 10ಕ್ಕೂ ಹೆಚ್ಚು ಮಾಸ್ಕ್‌ಗಳನ್ನು (Mask) ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ. ಒಂದು ಸಣ್ಣ ಬ್ಯಾಗ್‌ನಲ್ಲಿ ಬಟ್ಟೆ ಇದ್ದರೆ, ಮತ್ತೊಂದು ದೊಡ್ಡ ಸೂಟ್ ಕಾಲಿ ಕೇಸ್ (Suit case) ಇಟ್ಕೊಂಡು ಪ್ರಯಾಣ ಮಾಡಿದ್ದಾರೆ. ಅಲ್ಲಿ ಖರೀದಿಸುವ ವಸ್ತುಗಳನ್ನು ಇದರಲ್ಲಿ ಇಟ್ಕೊಂಡು ಬರಬಹುದು ಎಂದು. ಪ್ರಯಾಣ ಮಾಡುವಾಗ ಬಟ್ಟೆಗೆ ಮ್ಯಾಚ್ ಆಗುವಂತೆ ಎರಡು ಮೂರು ಜೊತೆ ಚಪ್ಪಲ್ ಕ್ಯಾರಿ ಮಾಡುವುದು ಕಾಮನ್. ಇದಕ್ಕೆ ಒಂದು ಟ್ರಿಕ್ ಹೇಳಿಕೊಟ್ಟಿದ್ದಾರೆ. ಚಪ್ಪಲಿನಿಂದ (Chappel) ಬಟ್ಟೆಗೆ ಧೂಳ್ ಅಂಟ ಬಾರದು ಅಂದ್ರೆ ಶವರ್ ಕ್ಯಾಪ್‌ಗೆ (Shower cap) ಚಪ್ಪಲಿ ಇಟ್ಟು ಅದರ ದಾರ ಟೈಟ್ ಮಾಡಿದರೆ ಸೇಫ್ ಆಗಿರುತ್ತದೆ ಎಂದಿದ್ದಾರೆ.
ಚೈತ್ರಾ ತಮ್ಮ ಯುಟ್ಯೂಬ್ ಚಾನೆಲ್ (Youtube)ನಲ್ಲಿ ಈ ರೀತಿ ಟ್ರಿಕ್ ಆ್ಯಂಡ್ ಹ್ಯಾಕ್‌ಗಳನ್ನು ಹೇಳಿಕೊಡುತ್ತಾರೆ. ಹೀಗಾಗಿ ಪ್ರತಿಯೊಂದು ವಿಡಿಯೋ ಟ್ರೆಂಡಿಂಗ್ ಲಿಸ್ಟ್‌ನಲ್ಲಿರುತ್ತದೆ.

