Asianet Suvarna News Asianet Suvarna News

ಚೈತ್ರಾ ವಾಸುದೇವನ್‌ ಬಗ್ಗೆ ನೆಟ್ಟಿಗರು ಪದೇ ಪದೇ ಹುಡುಕುವ ಪ್ರಶ್ನೆಗಳಿವು!

ಬಿಗ್ ಬಾಸ್ ಚೈತ್ರಾ ವಾಸುದೇವನ್ ಪರ್ಸನಲ್‌ ಲೈಫ್‌ ಬಗ್ಗೆ ಗೂಗಲ್‌ನಲ್ಲಿ ನೆಟ್ಟಿಗರು ಸರ್ಚ್ ಮಾಡುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.. 
 

Anchor Chaitra Vasudevan make a Youtube video about most asked questions about personal life  vcs
Author
Bangalore, First Published Sep 30, 2021, 5:15 PM IST
  • Facebook
  • Twitter
  • Whatsapp

ಬಿಗ್ ಬಾಸ್ ಸೀಸನ್ 5ರ (Bigg Boss) ಸ್ಪರ್ಧಿ ಚೈತ್ರಾ ವಾಸುದೇವನ್ (Chaitra Vasudevan) ಕನ್ನಡ ಕಿರುತೆರೆಯ (Kannada Small Screen) ಜನಪ್ರಿಯ ನಿರೂಪಕಿ (Anchor). ಸದಾ ಬ್ಯುಸಿಯಾಗಿರಲು ಇಷ್ಟ ಪಡುವ ಚೈತ್ರಾ ತಮ್ಮದೇ ಇವೆಂಟ್ ಕಂಪನಿ (Event Company) ನಡೆಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಯುಟ್ಯೂಬ್ (Youtube) ಚಾನೆಲ್‌ ಕೂಡ ಆರಂಭಿಸಿದ್ದಾರೆ. ವಿಭಿನ್ನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಚೈತ್ರಾ ಕೊನೆಗೂ ತಮ್ಮ ಬಗ್ಗೆ ಜನರು ಗೂಗಲ್‌ನಲ್ಲಿ (Google) ಏನೆಲ್ಲಾ ಸರ್ಚ್ ಮಾಡುತ್ತಾರೆ, ಅದಕ್ಕೆ ತಮ್ಮ ಉತ್ತರ ಏನು ಎಂದು ಹೇಳಿದ್ದಾರೆ.

ಕೆಲವರು ಚೈತ್ರಾ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾರಾ, ಎಂದು ಸರ್ಚ್ ಮಾಡಿದ್ದಾರೆ. ಚೈತ್ರಾ ಉಂಗುರದ ಬೆರಳಲ್ಲಿ ದೊಡ್ಡ ಸ್ಟಾರ್ ಹಾಗೂ ಸಣ್ಣ ಸ್ಟಾರ್ ಟ್ಯಾಟು ಹಾಕಿಸಿಕೊಂಡಿದ್ದಾರೆ. ಚೈತ್ರಾ ಸಹೋದರಿ ಚಂದನಾ (Chandana Vasudevan) ಅವರಿಗೆ ಜೀವನದಲ್ಲಿ ಅಕ್ಕ ಸ್ಟಾರ್ ಆಗಬೇಕು ಎಂಬ ಆಸೆ ಇತ್ತಂತೆ. ಹೀಗಾಗಿ ತಮ್ಮ 16ನೇ ವಯಸ್ಸಿಗೆ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈಗ ಅದರ ಆಕಾರ ಬದಲಾಗಿದೆ. ಮುಂದೊಂದು ದಿನ ಲೇಸರ್‌ ಮಾಡಿ, ತೆಗೆಸುತ್ತೇನೆ ಎಂದಿದ್ದಾರೆ. 

Anchor Chaitra Vasudevan make a Youtube video about most asked questions about personal life  vcs

ಚೈತ್ರಾ ನೆಚ್ಚಿನ ನಟ, ನಟಿಯರು ಎಂದು ಸರ್ಚ್ ಮಾಡಿದ್ದಾರೆ. ಸೂಪರ್ ಸ್ಟಾರ್‌ಗಳಿಂದ ಹಿಡಿದು ಹೊಸಬರ ಜೊತೆ ಕೆಲಸ ಮಾಡಿದ್ದೀನಿ. ಎಲ್ಲರೂ ನನಗೆ ಇಷ್ಟ. ಆದರೆ ಒಬ್ಬರು ಹೇಳಬೇಕೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar). ನಟಿಯರಲ್ಲಿ ಯಾವಾಗಲೂ ರಾಧಿಕಾ ಪಂಡಿತ್ (Radhika Pandit). ಅವರ ಗ್ರೇಸ್, ಆರಾ (Aura), ಸಿನಿಮಾ ಆಯ್ಕೆ ಮಾಡಿಕೊಳ್ಳುವ ರೀತಿ ತುಂಬಾ ಇಷ್ಟ ಆಗುತ್ತದೆ. ನಾನು ಅವ್ರುನ ನನ್ ಮದ್ವೆಗೆ ಕರೆದಿದ್ವಿ ಅವರು ಯಶ್ (Yash) ಸರ್‌ನೂ ಕರೆದುಕೊಂಡು ಬಂದಿದ್ದರು. ರಾಧಿಕಾ ಅವರು ತುಂಬಾ ಸಿಂಪಲ್.

ಲಾಕ್‌ಡೌನ್‌ನಲ್ಲಿ ಕೋತಿಗಳ ಕಾಳಜಿ ವಹಿಸಿದ ನಿರೂಪಕಿ ಚೈತ್ರಾ ವಾಸುದೇವನ್!

ಚೈತ್ರಾ ವಯಸ್ಸೆಷ್ಟು (Age) ಎಂದು ಸರ್ಚ್ ಮಾಡಿದ್ದಾರೆ. ಚೈತ್ರಾ ಅವರ ವಯಸ್ಸು 27. ಅವರು ಅಜ್ಜಿಯ ಆಸೆ ಪಟ್ಟಂತೆ 24ನೇ ವಯಸ್ಸಿಗೇ ಮದುವೆ ಮಾಡಿಕೊಂಡಿದ್ದಾರೆ. ವಿದ್ಯಾಭ್ಯಾಸ ನಂತರ ತಮ್ಮದೇ ಕಂಪನಿಯನ್ನೂ ಶುರು ಮಾಡಿ ಸೆಟಲ್ ಆದ ಕಾರಣ ಮದುವೆ ಮಾಡಿಕೊಂಡಿದ್ದಾರೆ. 

ಚೈತ್ರಾ ಎಜುಕೇಷನ್ (Education) ಏನು?: ಚಿತ್ರರಂಗಕ್ಕೆ ಬರುವವರು ಓದುವುದಿಲ್ಲ. ಕ್ಲಾಸ್ ಬಂಕ್ ಮಾಡುತ್ತಾರೆ ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ಆದರೆ ಅದು ಸುಳ್ಳು. ತುಂಬಾ ಜನರು ಮಾಸ್ಟರ್ ಡಿಗ್ರಿ ಹಿಡಿದುಕೊಂಡು ಬಂದಿರುತ್ತಾರೆ. ನಾನು ಇಂಜಿನಿಯರಿಂಗ್ (Engineering) ಓದಿದ್ದೀನಿ.  ನಾನು ಸುದೀಪ್ (Sudeep) ಸರ್ ಜೂನಿಯರ್. ನಾನು ಡಿಸ್ಟಿಂಕ್ಷನ್ ಮಾರ್ಕ್ಸ್ (Distinction marks) ತೆಗೆದಯುತ್ತಿದ್ದೆ. ಅದರಲ್ಲೂ M1 M2ನಲ್ಲಿ 98 ಅಂಕ ತೆಗೆದಿರುವೆ. 

ಕೊನೆಗೂ ಸ್ಕಿನ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಬಿಗ್‌ಬಾಸ್‌ ಚೈತ್ರಾ ವಾಸುದೇವನ್‌!

ಚೈತ್ರಾ ಕುಡೀತಾರಾ? (Drinks) ಇಲ್ಲ ನಾನು ಕುಡಿಯುವುದಿಲ್ಲ. ಆದರೆ ಒಂದು ಸಲ ಕುಡಿದಿದ್ದೀನಿ. ನನ್ನ ಸ್ನೇಹಿತೆ ಕೂರ್ಗ್‌ನವರು (Coorg) ಅವರ ಮನೆಯಲ್ಲಿದ್ದ ಬ್ರ್ಯಾಂಡಿನ (Brandy) ಒಂದು ಗ್ಲಾಸ್‌ ಗೆ ಹಾಕೊಂಡು ಎಲ್ಲಾ ಫ್ರೆಂಡ್ ಸೇರಿಕೊಂಡು ಕುಡುದ್ವಿ ಎಂದಿದ್ದಾರೆ. 

ಸತ್ಯನಾರಾಯಣ (Sathyanarayan) ಯಾರು? ನೀವು ಗೂಗಲ್‌ನಲ್ಲಿ ಚೈತ್ರಾ ಸತ್ಯನಾರಾಯಣ ಯಾರು ಎಂದು ಸರ್ಚ್ ಮಾಡಿದ್ದೀರಿ. ಸತ್ಯನಾರಾಯಣ ನನ್ನ ಪತಿದೇವ್ರು, ನನ್ನ ಯಜಮಾನರು. ನಮ್ದು ಅರೇಂಜ್ಡ್ ಮದುವೆ (Arranged Marriage). ನನಗಿಂತ ಉದ್ದ ಇದ್ದಾರೆ. ಕೆಲವರು ನನ್ನ ಮದುವೆ ಸ್ಟೋರಿ ಬಗ್ಗೆ ಕೇಳಿದ್ದಾರೆ ಅದನ್ನು ಮತ್ತೊಂದು ವಿಡಿಯೋದಲ್ಲಿ ಇಡೀ ಸ್ಟೋರಿ ಹೇಳ್ತೀನಿ ಅಂದಿದ್ದಾರೆ.

 

Follow Us:
Download App:
  • android
  • ios