ನಮ್ಮನೆ ಯುವರಾಣಿ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಿರಣ್ ಮತ್ತು ಹಿತಾ. ತಮ್ಮ ಲವ್ ಸ್ಟೋರಿ ಹಂಚಿ ಕೊಂಡಿದ್ದಾರೆ. 

'ಕಾಲ್ ಕೇಜಿ ಪ್ರೀತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡಿದ ನಟಿ ಹಿತಾ ಚಂದ್ರಶೇಖರ್ (Hita Chandrashekar) ಹಾಗೂ ಫೇಮಸ್ ಕ್ರಿಕೆಟ್‌ ನಿರೂಪಕ ಕಿರಣ್ ಶ್ರೀನಿವಾಸ್ (Kiran Srinivas) ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತರುವ ಮದುವೆ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಿದ್ದರು. ಈ ವೇಳೆ ತಮ್ಮ ಲವ್ ಸ್ಟೋರಿ ಬಗ್ಗೆ ಹಂಚಿಕೊಂಡಿದ್ದಾರೆ. 

ಕಿರಣ್ ಹಿತಾ ಲವ್:
'ನಾವು ಮದ್ವೆಯಾಗಿ ಮೂರು ವರ್ಷಗಳಾವೆ. ಎಷ್ಟು ಜನ ಇನ್ನೂ ನಮ್ಮ ಲವ್ ಸ್ಟೋರಿ (Love story) ಬಗ್ಗೆ ಕೇಳುತ್ತಾರೆ. ನಾವು ಹೇಳಿದರೆ ಜನರು ನಂಬುವುದಿಲ್ಲ. ನಾವು ಡೈರೆಕ್ಟ್‌ ಮದುವೆ ಆಗಿದ್ದು, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ವಿ. ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿದ್ವಿ. ನಮ್ಮಿಬ್ಬರ ನಡುವೆ ನಿಷ್ಕಲ್ಮದ ಸ್ನೇಹ ಇತ್ತು. ಇಬ್ಬರೂ ಯಾವತ್ತೂ ಫ್ಲರ್ಟ್ (Flirt) ಮಾಡಿಲ್ಲ. ಒಂದು ಮಾತು ಹೇಳುತ್ತಾರೆ, ಗೊತ್ತಿರದ ವ್ಯಕ್ತಿಗಿಂತ, ಗೊತ್ತಿರುವ ದೆವ್ವ ಒಳ್ಳೆಯದು ಅಂತ ಹೇಳುತ್ತಾರೆ,' ಎಂದು ಹಿತಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಟ್ರಿಪ್‌ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!

'ಆ ಸಮಯದಲ್ಲಿ ಮದುವೆ ಅಗಬೇಕು, ಎಂದು ಹಿತಾಗೆ ಕ್ಲಾರಿಟಿ ಇತ್ತು. ಮದುವೆ ಆಗಬಾರದು ಅನ್ನೋದು ನನಗೆ ಇತ್ತು. ಎರಡು ವರ್ಷದವರೆಗೂ ನಾವು ಸ್ನೇಹಿತರಾಗಿದ್ವಿ. ಹಾಗೆ ನಾನು ಕೇಳಿದೆ ಮದುವೆ ಕಥೆ ಏನಾಯ್ತು, ಅಂತ ಆಗ ಇನ್ನೂ ಹುಡುಕುತ್ತಿದ್ದಾರೆ ಅಂತ ಹೇಳಿದ್ಲು. ಅದಕ್ಕೆ ನೀನು ಬಾಂಬೆನಲ್ಲಿ (Bombay) ಇದಿದ್ರೆ ಸುಲಭ ಆಗಿತ್ತು, ಅಂತ ಹೇಳಿದೆ. ಅದಕ್ಕೆ ಅವಳು ಕರೆದು ನೋಡು ಬರ್ತೀನಿ, ಅಂತ ಹೇಳಿದ್ಲು. ಅಲ್ಲಿಂದ ಶುರುವಾಯ್ತು. ಆಮೇಲೆ ಮದುವೆ ಪ್ಲ್ಯಾನಿಂಗ್ ಆಯ್ತು,' ಎಂದು ಕಿರಣ್ ಹೇಳಿದ್ದಾರೆ.

'ನಮ್ಮಿಬ್ಬರ ನಡುವೆ ತುಂಬಾನೇ ಹೊಂದಾಣಿಕೆ ಇದೆ. ನಮ್ಮ ಅಪ್ಪ, ಅಮ್ಮ ಅವರ ಅಪ್ಪ ಅಮ್ಮ, ನಮ್ಮನ್ನ ಬೆಳೆಸಿರುವ ರೀತಿಯಲ್ಲಿ ತುಂಬಾನೇ ಹೊಂದಾಣಿಕೆ ಇದೆ. ನಮ್ಮ ಫ್ಯಾಮಿಲಿ ಬ್ಯಾಗ್ರೌಂಡ್ (Family background) ಒಂದೇ ರೀತಿ ಇರೋದು. ಅದರಿಂದ ನಮ್ಮ ಸ್ನೇಹಿ ಬೆಳೆಯಿತು, ಇಬ್ಬರೂ ಒಂದೇ ಕೆಲಸ ಮಾಡ್ತಿದ್ವಿ, ಎಲ್ಲಾ ಹೊಂದಾಣಿಕೆ ಇದೆ. ಎಷ್ಟೋ ಸಂದರ್ಭವನ್ನು ಇಬ್ಬರೂ ಒಂದೇ ರೀತಿ ಹ್ಯಾಂಡಲ್ ಮಾಡಿದ್ದೀವಿ,' ಎಂದು ಹಿತಾ ಹೇಳಿದ್ದಾರೆ.

'ಸಣ್ಣ ಮಕ್ಕಳು ಪ್ರಶ್ನೆ ಕೇಳುತ್ತಾರೆ, ಇದು ಯಾಕೆ ಇದು ಹೇಗೆ ಅಂತಾ. ಇವನು ಅದೇ ರೀತಿ ತುಂಬಾ ಪ್ರಶ್ನೆ ಕೇಳ್ತಾರೆ. ಅಂದ್ರೆ ನಮಗೆ ಯೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಗುಣ ಅವರಿಂದ ನನಗೆ ಬಂದಿದೆ. ಒಂದು ನಿಮಿಷ ನಿಂತ್ಕೊಂಡು ಈ ರೀತಿಯೂ ಥಿಂಕ್ ಮಾಡಬಹುದು, ಎಂದು ನನಗೆ ಹೇಳಿಕೊಟ್ಟಿದ್ದಾರೆ.' ಎಂದು ಹಿತಾ ತಮಾಷೆ ಮಾಡಿದ್ದಾರೆ.

ಮುಂಬೈ ಪ್ರತಿಭಾವಂತರಿಗೆ ಒಳ್ಳೆಯ ಜಾಗ: ಹಿತಾ ಚಂದ್ರಶೇಖರ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಹಿತಾ ಪತಿ ಜೊತೆ ಬಾಂಬೆಯಲ್ಲಿ ನೆಲೆಸಿದ್ದಾರೆ. ಮದುವೆ ನಂತರ ಸಿನಿಮಾಗಳಿಗಿಂತ ಹೆಚ್ಚಾಗಿ ಜಾಹೀರಾತುಗಳಲ್ಲಿ (Advertisments) ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಅಥವಾ ಈ ರೀತಿ ಸ್ಪೆಷಲ್ ಅಪೀರಿಯನ್ಸ್‌ ಇದ್ದರೆ, ಇಬ್ಬರೂ ಬೆಂಗಳೂರಿಗೆ ಆಗಮಿಸುತ್ತಾರೆ. ಒಂದು ತಿಂಗಳು ಬೆಂಗಳೂರು (Bengaluru), ಎರಡು ತಿಂಗಳು ಬಾಂಬೆನಲ್ಲಿದ್ದು ಎರಡೂ ಫ್ಯಾಮಿಲಿಗಳನ್ನು ಹಿತಾ ಮ್ಯಾನೇಜ್ ಮಾಡುತ್ತಿದ್ದಾರೆ. ಹಿತಾ ನಟಿಸಿರುವ ತುರ್ತು ನಿರ್ಗಮನ (Thurtu Nirgamana) ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ತಂಡ ಬಿಡುಗಡೆಗೆ ಸಜ್ಜಾಗಿದೆ. ಎಷ್ಟು ಜನ ಇನ್ನೂ ನಮ್ಮ ಲವ್ ಸ್ಟೋರಿ (Love story) ಬಗ್ಗೆ ಕೇಳುತ್ತಾರೆ. ನಾವು ಹೇಳಿದರೆ ಜನ ನಂಬುವುದಿಲ್ಲ ನಾವು ಡೈರೆಕ್ಟ್‌ ಮದುವೆ ಆಗಿದ್ದು. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ವಿ ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿದ್ವಿ. ನಮ್ಮಿಬ್ಬರ ನಡುವೆ ನಿಷ್ಕಲ್ಮದ ಸ್ನೇಹ ಇತ್ತು. ಇಬ್ಬರೂ ಯಾವತ್ತೂ ಫ್ಲರ್ಟ್ (Flirt) ಮಾಡಿಲ್ಲ. ಒಂದು ಮಾತು ಹೇಳುತ್ತಾರೆ. ಗೊತ್ತಿರದ ವ್ಯಕ್ತಿಗಿಂತ ಗೊತ್ತಿರುವ ದೆವ್ವ ಒಳ್ಳೆಯದು ಅಂತ ಹೇಳುತ್ತಾರೆ,' ಎಂದು ಹಿತಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.