ಗುಜರಾತಿನ ಮುಸ್ಲಿಂ ಧರ್ಮ ಗುರುವನ್ನು ವರಿಸಿದ ಬಿಗ್ ಬಾಸ್ ಬ್ಯೂಟಿ
ಸಿನಿಮಾದಲ್ಲಿ ನಟಿಸೋದಿಲ್ಲ, ಸಮಾಜ ಸೇವೆ ಮಾಡ್ಬೇಕು ಎಂದಿದ್ದ ಬಿಗ್ಬಾಸ್ ಖ್ಯಾತಿಯ ನಟಿ ಸನಾ ಖಾನ್ ಈಗ ವಿವಾಹಿತರಾಗಿದ್ದಾರೆ. ಇಲ್ಲಿ ನೋಡಿ ಫೋಟೋಸ್
ಸನಾಖಾನ್ ಮುಫ್ತಿ ಅನಾಸ್ ಎಂಬವರ ಕೈಹಿಡಿದಿದ್ದಾರೆ.
ವೆಡ್ಡಿಂಗ್ ಗೌನ್ನಲ್ಲಿ ಪತಿಯ ಜೊತೆಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಕಾರ್ಯಕ್ರಮದಲ್ಲಿ ವಿವಾಹ ನಡೆದಿದೆ.
ಕೊರಿಯೋಗ್ರಫರ್ ಮೆಲ್ವಿನ್ ಲೂಯಿಸ್ ಜೊತೆ ನಟಿಯ ಬ್ರೇಕ್ಅಪ್ ಆಗಿತ್ತು.
ಮಾಜಿ ಬಿಗ್ಬಾಗ್ 6 ಸ್ಪರ್ಧಿ ಸನಾ ಖಾನ್ ದೊಡ್ಡದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಈ ಮೂಲಕ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಗೆ ಬಾಯ್ ಬಾಯ್ ಹೇಳಿದ್ದರು.
ಸಲ್ಮಾನ್ ಖಾನ್ ಅಭಿನಯದ ಜೈ ಹೋ ಸಿನಿಮಾದಲ್ಲಿ ನಟಿಸಿದ್ದರು. ಹಾಗೆಯೇ ಅವರು ಹಲವು ಸಿನಿಮಾ, ಟಿವಿ ಶೋಗಳಲ್ಲಿಯೂ ನಟಿಸಿದ್ದರು.
ಫಿಲ್ಮ್ ಇಂಡಸ್ಟ್ರಿ ಪ್ರಸಿದ್ಧಿ, ಗೌರವ, ಸಂಪತ್ತನ್ನೂ ಕೊಟ್ಟಿದೆ. ಆದರೆ ಹಣ ಮತ್ತ ಪ್ರಸಿದ್ಧಿ ಪಡೆಯೋದಷ್ಟೇ ನನ್ನ ಗುರಿಯಾಗಬಾರದು ಎಂದು ನನಗೆ ಅರಿವಾಗಿದೆ. ಇನ್ನುಮುಂದೆ ಜನ ಸೇವೆ ಮಾಡಿ ಸೃಷ್ಟಿಕರ್ತನ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ.
ನಾನು ನನ್ನ ಜೀವನದ ಒಂದು ಪ್ರಮುಖ ಘಟ್ಟದಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕಿದೆ. ನನಗೆ ಸಿಕ್ಕಿದ ಪ್ರಸಿದ್ಧಿ, ಗೌರವ, ಸಂಪತ್ತಿಗೂ ನಾನು ಅಭಾರಿ. ಒಬ್ಬ ಮನುಷ್ಯ ಈ ಭೂಮಿಗೆ ಬರುವ ಉದ್ದೇಶ ಹಣ ಮತ್ತು ಪ್ರಸಿದ್ಧಿ ಪಡೆಯುವುದು ಮಾತ್ರವೇ..? ಎಂದು ಪ್ರಶ್ನಿಸಿದ್ದರು.
ಅಸಹಾಯಕರ, ಕಷ್ಟದಲ್ಲಿರುವವರಿಗೆ ನೆರವಾಗಬೇಕಲ್ಲವೇ..? ಯಾರು ಯಾವಗಲಾದರೂ ಸಾಯಬಹುದು, ಸತ್ತ ನೇಲೆ ಏನಾಗುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿದ್ದಾರೆ.
ಇಂತಹದೊಂದು ಪೋಸ್ಟ್ ಹಾಕಿದ ಬೆನ್ನಲ್ಲೇ ನಟಿ ತಮ್ಮ ಫೋಟೋಸ್, ವಿಡಿಯೋಸ್ ಫೋಟೋ ಶೂಟ್, ಟ್ರಿಪ್ ಫೋಟೋಸ್ ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ.
ಸನಾ ಖಾನ್ ವಿವಾಹ ಫೋಟೋ