ಜಲೇಬಿ ಬೇಬಿ ಅಂತ ಹಾಡಿದ್ದ ನಿವೇದಿತಾ ಗೌಡ ಇದೀಗ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ಸ್‌, ಟೀ ಶರ್ಟ್ ಹಾಕಿ ಎರಡು ಜೆಡೆಯಲ್ಲಿ ಪುಟ್ಟ ಹುಡುಗಿಯಾಗಿ ಕಾಣಿಸ್ಕೊಂಡ ನಿವೇದಿತಾ ತಟ್ಟಂತ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ವಿಡಿಯೋ, ಫೋಟೋ ಶೇರ್ ಮಾಡುತ್ತಲೇ ಇರೋ ನಟಿ ಫ್ಯಾನ್ಸ್‌ಗೆ ಸರ್ಪೈಸ್ ಕೊಡುತ್ತಲೇ ಇರುತ್ತಾರೆ. ಈ ಬಾರಿ ಗರ್ಲ್‌ ಲೈಕ್ ಮೀ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಜಲೇಬಿ ಬೇಬಿ ಅಂತ ಕುಣಿತಿದ್ದಾರೆ ನಿವೇದಿತಾ..! ನೀನೇ ಬೇಬಿ ಹಾಗಿದ್ಯಮ್ಮ ಅಂದ್ರು ಫ್ಯಾನ್ಸ್

ಗ್ರೇ ಕಲರ್ ಟೀ ಶರ್ಟ್, ಬ್ಲಾಕ್‌ ಶಾರ್ಟ್ಸ್ ಹಾಕಿ ಕೂದಲನ್ನು ಬಾಚಿ ಎರಡು ಜೆಡೆ ಹಾಕಿದ್ದ ನಟಿ ನಂತರ ಪಿಂಕ್ ಬ್ಲೌಸ್‌ಗೆ ವೈಟ್‌ನಲ್ಲಿ ಪಿಂಕ್ ಪ್ರಿಂಟ್‌ನ ಸಿಂಪಲ್ ಸೀರೆಯಲ್ಲಿ ಮಿಂಚಿದ್ದಾರೆ.

ಅಂತೂ ಈ ಬಾರಿ ಭಾರೀ ಸ್ಟೆಪ್ಟ್ ಹಾಕಿಲ್ಲಾಂದ್ರೂ ಮ್ಯೂಸಿಕ್‌ಗೆ ಅನುಗುಣವಾಗಿ ಬಾಡಿ ಬೆಂಡ್ ಮಾಡಿದ್ದಾರೆ ಬಿಗ್‌ಬಾಸ್ ಚೆಲುವೆ. ಏನೇ ಆದ್ರೂ ಡ್ಯಾನ್ಸ್ ವಿಡಿಯೋಗಳೆಲ್ಲವನ್ನೂ ಫ್ಯಾನ್ಸ್ ಜೊತೆ ಹಂಚಿಕೊಳ್ತಾರೆ ನಿವೇದಿತಾ.