ಬೆಂಗಳೂರು, (ಜ.22): ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್‌ಬಾಸ್‌ ಮತ್ತೆ ಶುರುವಾಗ್ತಿದೆ. ಹೌದು ಸ್ವಾಮಿ ಅಸಲಿ ಆಟ ಈಗ ಶುರು ಅಂತಿದ್ದಾರೆ ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್.

.ಯೆಸ್... ಕೊರೋನಾ ವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭಕ್ಕೆ ಇದೀಗ ಮುಹೂರ್ತ ಕೂಡಿಬಂದಿದ್ದು, ಬಹಳ ನಿರೀಕ್ಷೆ ಹುಟ್ಟುಹಾಕಿರುವ ಬಿಗ್‌ಬಾಸ್‌ ಸೀಸನ್‌ 8 ಮುಂದಿನ ತಿಂಗಳು ಅಂದ್ರೆ ಇದೇ ಫೆಬ್ರವರಿಯಿಂದ ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳಲಿದೆ.

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..?

ಈ ಬಗ್ಗೆ ಇಂದು ಶುಭ ಶುಕ್ರವಾರ ಅಧಿಕೃತ ಘೋಷಣೆ ಆಗಿದೆ. ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಈ ಬಗ್ಗೆ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಕೊನೆಗೂ ಬಿಗ್ ಬಾಸ್-8 ಪ್ರಾರಂಭ ಮಾಡುವುದಾಗಿ ಅಪ್ ಡೇಟ್ ನೀಡುವ ಮೂಲಕ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದ್ದಾರೆ. ಆದ್ರೆ, ಈ ಬಾರಿ ಬಿಗ್​ ಬಾಸ್ ಸೀಸನ್​ 8ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

Bigg Boss Kannada to launch in Feb...

Posted by Parameshwar Gundkal on Friday, January 22, 2021