Asianet Suvarna News Asianet Suvarna News

ಕೆಟ್ಟ ಮೇಲೆ ಬುದ್ಧಿ ಕಲಿತ ಸೋನು ಗೌಡ, ವಿಡಿಯೋ ಕಾಲ್ ಬಗ್ಗೆ ಎಚ್ಚರವಿರಲು ಹುಡುಗಿಯರಿಗೆ ಕಿವಿ ಮಾತು


ತಮ್ಮ ವಿಡಿಯೋ ಲೀಕ್  ಬಗ್ಗೆ ಹೇಳಿಕೊಂಡಿರುವ ಸೋನು ಶ್ರೀನಿವಾಸ್ ಗೌಡ, ಇದೀಗ ವಿಡಿಯೋ ಕಾಲ್‌ ಬಗ್ಗೆ ಹುಡುಗಿಯರೇ ಎಚ್ಚರವಾಗಿರಿ ಕಿವಿ ಮಾತು ಹೇಳಿದ್ದಾರೆ.
 

Kannada Bigg Boss OTT Sonu Srinivas Gowda Talks about Video Call rbj
Author
Bengaluru, First Published Aug 8, 2022, 7:41 PM IST

ಈಗಿನ ಕಾಲದಲ್ಲಿ ಹುಡುಗ-ಹುಡುಗಿ ಪರಿಚಯವಾದ್ರೆ ಸಾಕು...ಡೇಟಿಂಗ್, ಚಾಟಿಂಗ್ ಕೊನೆಗೆ ವಿಡಿಯೋ ಕಾಲ್‌ಗೆ ಬಂದು ನಿಲ್ಲುತ್ತೆ. ಆ ವಿಡಿಯೋ ಕಾಲ್ ಏನೆಲ್ಲಾ ಅವಾಂತರ ಮಾಡುತ್ತೆ ಎನ್ನುವುದು ಆ ಕ್ಷಣದಲ್ಲಿ ಹುಡುಗಿ ಅಥವಾ ಹುಡುಗರಿಗೆ ಅರಿವು ಇರಲ್ಲ.

ವಿಡಿಯೋ ಕಾಲ್‌ ಮಾಡಿ ಅದನ್ನ ರೆಕಾರ್ಡ್ ಮಾಡಿಕೊಂಡು ಬಳಿಕ ಬ್ಯ್ಲಾಕ್ ಮೇಲ್‌ ಮಾಡಿದ ಉದಾಹರಣೆಗಳನ್ನ ನೋಡಬಹುದು. ಇದೀಗ ಅದೇ ತರ ಸೋನು ಶ್ರೀನಿವಾಸ್‌  ಗೌಡಗೂ ಆಗಿದೆ. ಅವರೇ ಬಗ್ಗೆ ಬಿಗ್‌ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ವಿಡಿಯೋ ಕಾಲ್ ಬಗ್ಗೆ ಎಚ್ಚರದಿಂದ ಇರುವಂತೆ ಹುಡುಗಿಯರಿಗೆ ಮನವಿ ಮಾಡಿದ್ದಾರೆ.

ಅಬ್ಬಬ್ಬೋ....! ಮತ್ತೊಂದು ವಿಡಿಯೋ ಲೀಕ್.....ಆತಂಕದಲ್ಲಿ ಸೋನು ಗೌಡ

ಹೌದು....ಹುಡುಗನನ್ನು ನಂಬಿ ಮಾಡಿದ ವಿಡಿಯೋ ಕಾಲ್ ಲೀಕ್ ಆಗಿರುವ ಬಗ್ಗೆ ಸೋನು ಗೌಡ ಸತ್ಯ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ರೀತಿ ತಪ್ಪು ಮಾಡಬೇಡಿ ಎಂದು ಹುಡುಗಿಯರಿಗೆ ಕರೆ ಕೊಟ್ಟಿದ್ದಾರೆ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್​ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು  ಮನವಿ ಮಾಡಿದ್ದಾರೆ.

ಸೋನು ಗೌಡ ಹೇಳಿದ್ದು ಒಂದು ರೀತಿಯಲ್ಲಿ ಕರೆಕ್ಟ್ ಇದೆ.  ವಿಡಿಯೋ ಕಾಲ್ ಏನೆಲ್ಲಾ ಅವಾಂತರ ಮಾಡುತ್ತೆ ಎನ್ನುವುದು ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿವೆ.

ವಿಡಿಯೋ ಕಾಲ್‌ ಮಾಡಿ ಅದನ್ನ ರೆಕಾರ್ಡ್ ಮಾಡಿಕೊಂಡು ಬಳಿಕ ಬ್ಯ್ಲಾಕ್ ಮೇಲ್‌ ಮಾಡಿದ ಉದಾಹರಣೆಗಳನ್ನ ನೋಡಬಹುದು. ಇದೀಗ ಅದೇ ತರ ಸೋನು ಗೌಡಗೂ ಆಗಿದ್ದು, ಇಂತಹ ತಪ್ಪು ಮಾಡಬೇಡಿ ಎಂದು ಹುಡುಗಿಯರು ಹೇಳಿದ್ದಾರೆ. 

ಆ ವಿಡಿಯೋ ಲೀಕ್‌ ಆಗಿದ್ದೇಗೆ? ಎಳೆ-ಎಳೆಯಾಗಿ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್​ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್​ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್​ ಮಾಡಿದೆ ಎಂದು ತಮ್ಮ ವಿಡಿಯೋ ಲೀಕ್‌ ಬಗ್ಗೆ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.

Follow Us:
Download App:
  • android
  • ios