Asianet Suvarna News Asianet Suvarna News

ಆ ವಿಡಿಯೋ ಲೀಕ್‌ ಆಗಿದ್ದೇಗೆ? ಎಳೆ-ಎಳೆಯಾಗಿ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಾ  ಬಿಗ್​ಬಾಸ್ ಸೇರಿರುವ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ವೈರಲ್ ಆಗಿದ್ದು, ಇದೀಗ ಆ ವಿಡಿಯೋ ಲೀಕ್ ಆಗಿರುವ ಬಗ್ಗೆ ಸ್ವತಃ ಸೋನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Kannada Bigg Boss OTT contestant Sonu Srinivas Gowda Revels Her Video Leaked rbj
Author
Bengaluru, First Published Aug 7, 2022, 8:27 PM IST

ಕಿಚ್ಚ ಸುದೀಪ್ ಅವರ  ಕನ್ನಡ ಬಿಗ್‌ಬಾಸ್‌ ಇದೇ ಫಸ್ಟ್ ಟೈಮ್ ಒಟಿಟಿ (IOTT) ಪ್ರಸಾರವಾಗುತ್ತಿದೆ. ಈ ಬಿಗ್‌ಬಾಸ್‌ ಒಟಿಟಿಗೆ ನಿನ್ನೆ(ಆಗಸ್ಟ್.06) ಅದ್ಧೂರಿ ಚಾಲನೆ ಸಿಕ್ಕಿದ್ದು, ಒಟ್ಟು 16 ಕಂಟೆಸ್ಟೆಂಟ್‌ಗಳು ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಆದ್ರೆ, ಸ್ಪರ್ಧಿಗಳ ಆಯ್ಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಸ್ವರಗಳು ಕೇಳಿಬುರುತ್ತಿವೆ. 

ಅದರಲ್ಲೂ ಎರಡನೇ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್‌ ಗೌಡ ಆಯ್ಕೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಸೋನು ಶ್ರೀನಿವಾಸ್‌ ಗೌಡ ಬಗ್ಗೆ ಸಾಮಾಜಿಕ  ಜಾಲತಾಣಗಳಲ್ಲಿ ನೆಗೆಟಿವ್ ಕಾಮೆಂಟ್ಸ್‌ ಮಾಡುತ್ತಿದ್ದಾರೆ.  ಯಾಕಂದ್ರೆ ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರದ್ದು ಎನ್ನಲಾದ ಹಸಿಬಿಸಿ ಅಶ್ಲೀಲ ವಿಡಿಯೋ, ಚಿತ್ರಗಳು ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನ ಏಕೆ ಆಯ್ಕೆ ಮಾಡಿದ್ದೀರಿ ಎಂದು ಕಿಡಿಕಾರುತ್ತಿದ್ದಾರೆ.

Bigg Boss OTT ಸೋಷಿಯಲ್‌ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್‌ಗೌಡ ಒರಿಜಿನಲ್ ಹೆಸ್ರು ಬಹಿರಂಗ

ಇನ್ನು ಐಫೋನ್ ವಿಡಿಯೋ ಲೀಕ್ ಆಗಿರುವ ಬಗ್ಗೆ ಸ್ವತಃ ಸೋನು ಶ್ರೀನಿವಾಸ್‌ ಗೌಡ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ. ಬಿಗ್‌ ಬಾಸ್ ಎಂಟ್ರಿ ವೇಳೆ ಸುದೀಪ್‌ ಮುಂದೆ ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ವಿಡಿಯೋ ಲೀಕ್ ಬಗ್ಗೆ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗಾದ್ರೆ, ಸೋನು ಗೌಡ ಆ ವಿಡಿಯೋ ಬಗ್ಗೆ ಏನೆಲ್ಲಾ ಹೇಳಿಕೊಂಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ....

ವಿಡಿಯೋ ಲೀಕ್‌ ಬಗ್ಗೆ ಸೋನು ಹೇಳಿದ್ದಿಷ್ಟು
ತಮ್ಮ ಜೀವನದ ಬಗ್ಗೆ ಬಿಗ್​​ ಮನೆಯೊಂದಿಗೆ ಮಾತನಾಡಿರೋ ಸೋನು ಶ್ರೀನಿವಾಸ್ ಗೌಡ, ನಮ್ಮ ಮನೆಯಲ್ಲಿ ನೀನು ಯಾರನ್ನಾದರೂ ಲವ್ ಮಾಡು ಎಂದು ಸ್ವಾತಂತ್ರ್ಯ ಕೊಟ್ಟಿದ್ರು.. ಹಾಗಾಗಿ ನಾನು ಒಂದು ಹುಡುಗನನ್ನು ಇಷ್ಟಪಟ್ಟೇ, ಆದ್ರೆ, ಒಂದು ದಿನ ಅವನು ಏನು ಕೇಳ್ದ ಅಂದ್ರೆ ವಿಡಿಯೋ ಕಾಲ್​ ಮಾಡು ಅಂತ ಹೇಳ್ದ.. ಅಮೇಲೆ ನನ್ನ ಹತ್ರ ವಿಡಿಯೋ ಇದೇ, ನೀನು ಯಾರನ್ನ ಮದ್ವೆ ಆಗ್ತೀಯಾ ನೋಡ್ತೀನಿ ಎಂದು ಬೆದರಿಕೆ ಹಾಕಿದ್ದ ಅಂತ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಇತರೇ ಸ್ಪರ್ಧಿಗಳು ಸೋನು ಶ್ರೀನಿವಾಸ್ ಅವರನ್ನ ಸಂತೈಸಿದರು.

ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ; ಸೋನು ಶ್ರೀನಿವಾಸ್ ವಿರುದ್ಧ ಮುಗಿಬಿದ್ದ ನೆಟ್ಟಿಗರು

ವಿಡಿಯೋ ಲೀಕ್‌ ಹಿನ್ನೆಲೆಯಲ್ಲಿ ಸೋನು ಆಯ್ಕೆ ಆಗಿರುವ ಬಗ್ಗೆ ನೆಟ್ಟಿಗರಿಗೆ ಅಸಮಾಧಾನ ಇದೆ. ಅವರು ಬೇಗ ಎಲಿಮಿನೇಟ್​ ಆಗಲಿ ಎಂದು ತುಂಬ ಜನರು ಕಮೆಂಟ್​ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಾ  ಶ್ರೀನಿವಾಸ್ ಗೌಡ  ಬಿಗ್​ಬಾಸ್ ಸೇರಿತ್ತಿದ್ದಂತೆಯೇ ಅವರ ವಿಡಿಯೋ ಬಗ್ಗೆನೇ ಬಿಸಿ-ಬಿಸಿ ಚರ್ಚೆಗಳು ಆಗುತ್ತಿವೆ. ಅಷ್ಟೇ ಅಲ್ಲದೇ ಸೋನು ಗೌಡ ಇದೀಗ ಟ್ರಾಲ್ ಪೇಜ್‌ಗಳಿಗೆ ಸಖತ್ ಆಹಾರವಾಗಿದ್ದಾರೆ. 

ಸದ್ಯ ಬಿಗ್​​ಬಾಸ್​ ಮನೆಗೆ 2ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಸೋನು ಶ್ರೀನಿವಾಸ್ ಗೌಡ ಮೊದಲ ದಿನವೇ ಮನೆ ಮಂದಿಗೆಯೊಂದಿಗೆ ತಮ್ಮ ಜೀವನದಲ್ಲಿ ಎದುರಾದ ಹೊಡೆತಗಳನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.
 

Follow Us:
Download App:
  • android
  • ios