ಬಿಗ್‌ಬಾಸ್ ಖ್ಯಾತಿಯ ಮಾಡೆಲ್ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಬೆಂಗಳೂರು: ಬಿಗ್‌ಬಾಸ್ ಅನ್ನೋದು ಕಿರುತೆರೆಯಲ್ಲಿ ಅತಿ ದೊಡ್ಡದಾದ ರಿಯಾಲಿಟಿ ಶೋ ಆಗಿದೆ. ಹಿಂದಿ, ತಮಿಳು, ತೆಲಗು, ಕನ್ನಡ ಮತ್ತು ಮರಾಠಿ ಕಿರುತೆರೆಗಳಲ್ಲಿ ಬಿಗ್‌ಬಾಸ್ ಶೋ ಪ್ರಸಾರವಾಗುತ್ತದೆ. ಕನ್ನಡದ ಖಾಸಗಿ ವಾಹಿನಿಯಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತದೆ. ಇಷ್ಟು ವರ್ಷ ನಟ ಸುದೀಪ್ ಕಾರ್ಯಕ್ರಮದ ನಿರೂಪಣೆ ಮಾಡಿಕೊಂಡು ಬಂದಿದ್ದರು. ಈ ಬಾರಿಯೂ ಮತ್ತೆ ಸುದೀಪ್ ನಿರೂಪಣೆ ಮಾಡ್ತಾರಾ ಅನ್ನೋದರ ಬಗ್ಗೆ ಗೊಂದಲವಿದೆ. ಬಿಗ್‌ಬಾಸ್ ಆರಂಭದ ಕುರಿತು ಸುದ್ದಿಗಳು ಮತ್ತು ಕೆಲವರ ಹೆಸರುಗಳು ಸಹ ಮುನ್ನಲೆಗೆ ಬರುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿಯ ಇನ್‌ಸ್ಟಾಗ್ರಾಂ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದೆ

ನೈಜಿರಿಯಾ ಮೂಲದ ಮೈಕಲ್ ಅಜಯ್ ಬೆಂಗಳೂರಿನಲ್ಲಿ ವಾಸವಾಗಿರುವ ಕನ್ನಡಿಗ. ಮಾಡೆಲ್ ಆಗಿರುವ ಮೈಕಲ್ ಅಜಯ್, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ತಮ್ಮ ದಿನನಿತ್ಯದ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದೃಢ ಮೈಕಟ್ಟು ಹೊಂದಿರುವ ಮೈಕಲ್ ಅಜಯ್, ಶರ್ಟ್‌ ಲೆಸ್ ಮತ್ತು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಅಗುತ್ತಿರುತ್ತವೆ. ಶನಿವಾರ ಮೈಕಲ್ ಅಜಯ್ ಹಂಚಿಕೊಂಡಿರುವ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಏನಿದು ಪೋಸ್ಟ್?

ಮೈಕಲ್ ಅಜಯ್ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳು ತಮ್ಮನ್ನು ಬಿಗಿಯಾಗಿ ಅಪ್ಪಿಕೊಂಡು ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ. ಫೋಟೋಗೆ ಪೋಸ್ ನೀಡಿರುವ ವಿಡಿಯೋವನ್ನು ಮೈಕಲ್ ಅಜಯ್ ಶೇರ್ ಮಾಡಿಕೊಂಡು Art ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

ಸೂಪರ್ ಮೈಕಿ, ನಿಮ್ಮನ್ನು ಅಪ್ಪಿಕೊಂಡು ಚೆಲುವೆ ಯಾರು? ಮೈಕಲ್ ಇಸ್ ಕಮ್ ಬ್ಯಾಕ್. ಸೂಪರ್ ಬಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದ್ರೆ ಮೈಕಲ್ ಅಜಯ್ ಯಾವುದೇ ಕಮೆಂಟ್‌ಗಳಿಗೂ ಪ್ರತಿಕ್ರಿಯೆ ನೀಡಲ್ಲ. ಇದು ಫೋಟೋಶೂಟ್ ಮಾಡಿದ್ದು? ಯಾವುದಾದರೂ ಬ್ರ್ಯಾಂಡ್‌ ಪ್ರಚಾರಕ್ಕೆ ಹೀಗೆ ಮಾಡಲಾಯಿತಾ ಸೇರಿದಂತೆ ಯಾವುದೇ ಮಾಹಿತಿಯನ್ನು ಮೈಕಲ್ ಅಜಯ್ ಹಂಚಿಕೊಂಡಿಲ್ಲ. ಈ ಪೋಸ್ಟ್‌ಗೆ 5 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಈ ಫೋಸ್ಟ್‌ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಾಗಿದೆ.

ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ

ಮೈಕಲ್ ಅಜಯ್ ಕನ್ನಡದ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದರು. ಮೊದಲ ವಾರದಿಂದ ಬಲಿಷ್ಠ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್, 13ನೇ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು. ಮಹಿಳಾ ಸ್ಪರ್ಧಿ ಜೊತೆಗಿನ ಮೈಕಲ್ ಅಜಯ್ ಕೆಮಿಸ್ಟ್ರಿ ನೋಡುಗರಿಗೆ ಇಷ್ವವಾಗಿತ್ತು. ರಿಯಾಲಿಟಿ ಶೋ ವೇಳೆ ತಾನು ಮಣ್ಣಿನ ಮಗ ಎಂದು ಮೈಕಲ್ ಹೇಳಿಕೊಂಡಿದ್ದರು. ಈ ಡೈಲಾಗ್ ಸಹ ವೈರಲ್ ಆಗಿತ್ತು.

ಸದ್ಯ ಬೆಂಗಳೂರಿನಲ್ಲಿರುವ ಮೈಕಲ್ ಅಜಯ್, ಬರ್ಗರ್ ಕೆಫೆ ಸಹ ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ರಸ್ತೆಬದಿಯಿಂದ ಆರಂಭಿಸಿದ ವ್ಯಾಪಾರ ಸ್ವಂತ ಕೆಫೆವರೆಗಿನ ಪಯಣದ ಬಗ್ಗೆ ಮೈಕಲ್ ಅಜಯ್ ಹೇಳಿಕೊಂಡಿದ್ದಾರೆ. ತಾನು ಜಿಮ್ ಮಾಡುವನಾದ್ರೂ ನನಗೆ ಬರ್ಗರ್ ಅಂದ್ರೆ ಇಷ್ಟ. ಅದಕ್ಕಾಗಿ ಬಿಲ್ಡ್ ಯುವರ್ ಓನ್ ಬರ್ಗರ್ ಹೆಸರಿನಲ್ಲಿ ಕೆಫೆ ಆರಂಭಿಸಿದ್ದಾರೆ. ಇನ್‌ ಸ್ಟಾಗ್ರಾಂನಲ್ಲಿ ಮೈಕಲ್ ಅಜಯ್ 293ಕೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮಾಡೆಲಿಂಗ್ ಜೊತೆಯಲ್ಲಿ ಉದ್ಯಮಿಯಾಗಿರುವ ಮೈಕಲ್ ಅಜಯ್, ಮತ್ತೆ ಕಿರುತೆರೆ ಎಂಟ್ರಿ ನೀಡಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

View post on Instagram