ಯೂಟ್ಯೂಬ್ ಚಾನೆಲ್‌ನಲ್ಲಿ Ikea ಪ್ರಪಂಚ ತೋರಿಸಿದ ಚೈತ್ರಾ. ಅನೇಕ ವಿಚಾರದಲ್ಲಿ ನೀವು ಮಾದರಿ ಎಂದ ನೆಟ್ಟಿಗರು...
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಇತ್ತೀಚಿಗೆ ಯೂಟ್ಯೂಬ್ ಲೋಕದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಸೆಟ್, ಈವೆಂಟ್ ಮೇಕಿಂಗ್ ವಿಡಿಯೋ, ಮೇಕಪ್, ಸ್ಕಿನ್ ಕೇರ್ ಮತ್ತು ಹೇರ್‌ಕೇರ್ ಬಗ್ಗೆ ಸಾಕಷ್ಟು ವಿಡಿಯೋ ಹಂಚಿಕೊಂಡು ಜನರಿಗೆ ಸುಲಭ ಟಿಪ್ಸ್ ಕೊಡುತ್ತಾರೆ. ಹೀಗಾಗಿ ಕಡಿಮೆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಿರೂಪಕಿ ಇವರೇ.
ಇತ್ತೀಚಿಗೆ IKEA ಅಂಗಡಿ ಬೆಂಗಳೂರಿನ ನಾಗಸಂದ್ರದಲ್ಲಿ ಓಪನ್ ಆಗಿದೆ. ಸೋಷಿಯಲ್ ಮೀಡಿಯಾ influencerಗಳು ಭೇಟಿ ಕೊಟ್ಟು ಅಲ್ಲಿರುವ ವಸ್ತುಗಳ ಬಗ್ಗೆ ವಿಡಿಯೋ ಮಾಡಿದ್ದಾರೆ. ಈಗ ಚೈತ್ರಾ ವಾಸುದೇವನ್ ಕೂಡ ಆ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಸ್ಥಳದ ಬಗ್ಗೆ ವಿಡಿಯೋ ಮಾಡಿದ್ದಾರೆ.

'ನಾಗಸಂದ್ರ ಮೆಟ್ರೋಯಿಂದ ನಡೆದುಕೊಂಡು ಹೋದ್ರೆ 20 ನಿಮಿಷಕ್ಕೆ ಅಂಗಡಿ ಸಿಗುತ್ತದೆ ಆದರೆ ನಾವು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೀವಿ. ಇದೇ ಮೊದಲು ನಾನು ಇಲ್ಲಿ ಬರುತ್ತಿರುವುದು. ಅನೇಕರು ನನಗೆ ಸಲಹೆ ಕೊಟ್ಟಿದ್ದಾರೆ ಫ್ಲ್ಯಾಟ್ ಚಪ್ಪಲಿ ಧರಿಸಿ ಹೀಲ್ಸ್ ಬೇಡ ಅಂತ ಹೇಳಿದ್ದಾರೆ. ನನ್ನ ಸಹೋದರಿ ಚಂದನಾ ಕರೆದುಕೊಂಡು ಹೋಗುತ್ತಿರುವೆ. ಇಲ್ಲಿ ದೇವಸ್ಥಾನದ ರೀತಿ ಕ್ಯೂನಲ್ಲಿ ಹೋಗಬೇಕಿದೆ. 30 ನಿಮಿಷ ವೇಟಿಂಗ್ ಹಾಗೇ ಊಟ ಮಾಡುವುದಕ್ಕೆ 1 ಗಂಟೆ ಕಾಯಬೇಕಿದೆ. ಅಲ್ಲಿ ಕವರ್ ಕೊಡ್ತಾರೋ ಇಲ್ವೊ ಗೊತ್ತಿಲ್ಲ ಆದರೆ ನಾವು ಬ್ಯಾಗ್ ತೆಗೆದುಕೊಂಡು ಬಂದಿದ್ದೀವಿ. ಒಂದು ಸಣ್ಣ ಬ್ಯಾಗ್‌ಗೆ 120 ರೂಪಾಯಿ ಕೊಡಬೇಕು' ಎಂದು ಚೈತ್ರಾ ಮಾತನಾಡಿದ್ದಾರೆ.
ತಾಯಿ 52ನೇ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿ ನಿರೂಪಕಿ ಚೈತ್ರಾ ವಾಸುದೇವನ್!
'ಈ ಅಂಗಡಿಯ ಸಿಬ್ಬಂದಿಗಳು ತುಂಬಾನೇ ಫ್ರೆಂಡ್ಲಿಯಾಗಿದ್ದಾರೆ ಪ್ರವೇಶ ಮಾಡುವಾಗ ಒಂದು ನೀರಿನ ಬಾಟಲ್ ಮತ್ತು ಮಾಸ್ಕ್ ಕೊಡುತ್ತಾರೆ. ಇಲ್ಲಿ ನಾವೇ ಆಹಾರಗಳನ್ನು ಪಿಕ್ ಮಾಡಬೇಕು ಆನಂತರ ಬಿಲ್ ಮಾಡಿಸಬೇಕು. ನನ್ನ ತಂಗಿ ಚಂದನಾ ಸಣ್ಣ ಕೇಕ್ ತೆಗೆದುಕೊಂಡಿದ್ದಾಳೆ ಹೀಗಾಗಿ ದೊಡ್ಡ ಕೇಕ್ ಪೀಸ್ ತೆಗೆದುಕೊಳ್ಳಲು ಮತ್ತೆ ಬಂದಿದ್ದೀವಿ. ಅಲ್ಲಿನವರು ಹೇಳುವ ಪ್ರಕಾರ ಇಲ್ಲಿ ಕೆಲಸ ಮಾಡುವುದು ಕನ್ನಡಿಗರು. ಹೀಗಾಗಿ ಏನೇ ಸಮಸ್ಯೆ ಇದ್ದರೂ ಸುಲಭವಾಗಿ ಸಹಾಯ ಮಾಡುತ್ತಾರೆ. ನಾವು ಖಾರ ಹೆಚ್ಚಿಗೆ ತಿನ್ನಯವ ಕಾರಣ ಊಟ ಅಷ್ಟಕ್ಕೆ ಅಷ್ಟು ಇಷ್ಟ ಆಗಿಲ್ಲ ' ಎಂದು ಚೈತ್ರಾ ಹೇಳಿದ್ದಾರೆ.
'ಎಲ್ಲರಿಗೂ ಮತ್ತೊಂದು ವಿಚಾರ ತಿಳಿಸಬೇಕು...ಏನೆಂದರೆ ಇಲ್ಲಿ ಒಂದು ಗ್ಲಾಸ್‌ಗೆ 60 ರೂಪಾಯಿ ಕೊಟ್ಟರೆ ನಾವು ಎಷ್ಟು ಸಲ ಬೇಕಿದ್ದರೂ ಕೂಲ್ ಡ್ರಿಂಕ್ ಅಥವಾ ಕಾಫಿ ಕುಡಿಯಬಹುದು. ವಸ್ತುಗಳಿಗೆ ಬಂದರೆ ನೀವು ಏನೇ ನೋಡಿದ್ದರೂ ಅದರ ಮೇಲಿರುವ ಕೋಡ್ ನೆನಪು ಇಟ್ಟಿಕೊಳ್ಳಬೇಕು ಆನಂತರ ಇಲ್ಲಿನ ಸಿಬ್ಬಂದಿಗಳನ್ನು ಕೇಳಿದರೆ ಅವರೇ ಸಹಾಯ ಮಾಡಿ ತಂದು ಕೊಡುತ್ತಾರೆ. ಕೋಡ್‌ನಲ್ಲಿ ಸಣ್ಣ ಪುಟ್ಟ ಬದಲಾವಣೆ ಇದ್ದರೂ ಬೇರೆ ಪ್ರಾಡೆಕ್ಟ್‌ಗಳಾಗಿರುತ್ತದೆ' ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಎರಡುವರೆ ಸಾವಿರ ರೂಪಾಯಿ ಊಟ ತಿಂದಿದಕ್ಕೆ ನಿರೂಪಕಿ ಚೈತ್ರಾ ವಾಸುದೇವನ್‌ಗೆ ಅವಮಾನ
'15 ವಸ್ತುಗಳಿಗಿಂತ ಕಡಿಮೆ ಖರೀದಿ ಮಾಡಿದ್ದರೆ ನಮಗೆ ನಾವೇ ಬಿಲ್ ಮಾಡಬಹುದು. ಸ್ಕ್ಯಾನರ್ ಬಳಸಿ ಪ್ರಾಡೆಕ್ಟ್ ಮೇಲಿರುವ ಕೋಡ್‌ನ ಸ್ಕ್ಯಾನ್ ಮಾಡಿ ಆನಂತರ ಕಾರ್ಡ್ ಮೂಲಕ ಪೇಮೆಂಟ್ ಮಾಡಬೇಕು. ಇಲ್ಲಿ ಅನೇಕರು ನನ್ನನ್ನು ಗುರುತಿಸಿ ಮಾತನಾಡಿಸಿದ್ದಾರೆ. ಹೀಗಾಗಿ ಬನ್ನಿ ಮೇಡಂ ಸಹಾಯ ಮಾಡ್ತೀನಿ ಎಂದು ಹೇಳಿದ್ದಾರೆ. ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ. ಇಲ್ಲಿ ಬಿಟ್ಟು ಬೇರೆ ಎಲ್ಲೂ ಸಿಗುವುದಿಲ್ಲ ಎನ್ನುವ ಹಾಗಿಲ್ಲ ಸಿಗುತ್ತದೆ ಆದರೆ ಎಲ್ಲಾ ಒಂದು ರೌಂಡ್ ನೋಡಿ ಆನಂತರ ಖರೀದಿಸಿ.' ಎಂದು ಹೇಳುವ ಮೂಲಕ Ikea ಬಗ್ಗೆ ತಮ್ಮ ಫಾಲೋವರ್ಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

