Covid19 ವ್ಯಾಕ್ಸಿನ್‌ ತೆಗೆದುಕೊಂಡಿಲ್ಲ, ಇದು ಮೆಡಿಕಲ್ ಮಾಫಿಯಾ: Agni Shridhar

ಕ್ರೀಂ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಕೊರೋನಾದಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡಿದ್ದ ಕನ್ನಡ ಪತ್ರಕರ್ತ ಅಗ್ನಿ ಶ್ರೀಧರ್.

Kannada Agni Shridhar says Covid19 and vaccine is a mafia in cream movie launch vcs

ಕೊರೋನಾ (Covid19) ಮೂರನೇ ಅಲೆ ಈಗ ಶುರುವಾಗುತ್ತಿದೆ. ನೈಟ್‌ ಕರ್ಫ್ಯೂ (Night Cerfew) ಮತ್ತು ಸೆಮಿ ಲಾಕ್‌ಡೌನ್‌ (Lockdown) ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಿಕೊಂಡು, ಜೀವನ ನಡೆಸುತ್ತಿರುವವರಿಗೆ ತುಂಬಾನೇ ಕಷ್ಟವಾಗಿದೆ. ದಿನಗೂಲಿ ಕಾರ್ಮಿಕರು ಮತ್ತು ಚಿತ್ರಮಂದಿರದ ಮಾಲೀಕರು ಹೆಚ್ಚಿನ ನಷ್ಟ ಅನುಭವಿಸುದ್ದಾರೆಂದರೆ  ತಪ್ಪಾಗದು. 2022ರಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದ್ದ ಸಿನಿಮಾಗಳು ದಿನಾಂಕವನ್ನು ಮುಂದೂಡಿವೆ. ಬುಕ್ಕಿಂಗ್ ಆಗಿದ್ದ ಚಿತ್ರಮಂದಿಗಳಿಂದ ಹಣ ವಾಪಸ್ ಪಡೆಯುತ್ತಿದ್ದಾರೆ. ಈ ಪರಿಸ್ಥಿತಿ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ. 

ಅಗ್ನಿ ಶ್ರೀಧರ್ (Agni Sridhar) ಅವರು ಬರೆದಿರುವ ಕ್ರೀಂ  (Cream) ಸಿನಿಮಾ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಸಿನಿಮಾರಂಗದ ಬಗ್ಗೆ ಮಾತನಾಡಿದ ಅವರು ಕೊರೋನಾ ವೈರಸ್‌ ಬಗ್ಗೆ ಮತ್ತು ಮೆಡಿಕಲ್ ಕ್ಷೇತ್ರ ಜನರಿಗೆ ಮಾಡುತ್ತಿರುವುದು ಮೋಸ ಎಂದು ಧ್ವನಿ ಎತ್ತಿದ್ದಾರೆ. ಶ್ರೀಧರ್ ಅವರ ಮಾತುಗಳನ್ನು ಕೇಳಿ ಕೆಲವರಿಗೆ ಶಾಕ್ ಆದರೂ, ಇದು ನಿಜ ಇರಬಹುದು ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. 

ಅಗ್ನಿ ಶ್ರೀಧರ್ ಮಾತು:
'ವೈದ್ಯ ಕ್ಷೇತ್ರ ಹಣ ಮಾಡಿಕೊಳ್ಳಲು ಕೊರೋನಾ ಎಂಬ ರೋಗದ ಭೀತಿ ಹಬ್ಬಿಸಿದ್ದಾರೆ. ನಾನು ಈವರೆಗೂ ವ್ಯಾಕ್ಸಿನ್‌ (Vaccine) ತೆಗೆದುಕೊಂಡಿಲ್ಲ. ನನ್ನ ಕುಟುಂಬದವರು ಸಹ ವ್ಯಾಕ್ಸಿನ್‌ ತೆಗೆದುಕೊಂಡಿಲ್ಲ. ಶೇ.60 ವೈದ್ಯರು ಈವರೆಗೆ ಕೊರೋನಾ ಲಸಿಕೆ ಪಡೆದಿಲ್ಲ. ಇದು ಸತ್ಯ. ಯಾರೂ ಕೋವಿಡ್‌ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರೂ ವೈರಸ್‌ ಇರುತ್ತವೆ. ಇದೊಂದನ್ನೇ ಹೈಲೈಟ್ ಮಾಡಲಾಗಿದೆ. ಇದು ನನ್ನ ಅಭಿಪ್ರಾಯ ಮಾತ್ರ,' ಎಂದು ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. 

Kannada Agni Shridhar says Covid19 and vaccine is a mafia in cream movie launch vcs

'ಕೆಜಿಎಫ್ 2 (KGF 2) ಸಿನಿಮಾ ಮುಗಿಸಿ ಎರಡು ವರ್ಷಗಳಾಗಿವೆ. ನೂರಾರೂ ಕೋಟಿ ಬಂಡವಾಳ ಹೂಡಿ, ಎರಡು ವರ್ಷದಿಂದ ಸುಮ್ಮನೆ ಇಟ್ಟುಕೊಂಡಿರುವುದೆಂದರೆ ಸಾಮಾನ್ಯವೇ? ಈ ರಾಜಕಾರಣಿಗಳು (Politicians) ತಮಗೆ ಬೇಕಾದಾಗ ಅನ್‌ಲಾಕ್‌ ಮಾಡುತ್ತಾರೆ. ರಾಜಕೀಯ ಸಭೆ, ಮೋಜು ಮಸ್ತಿ ಮಾಡುತ್ತಾರೆ. ಸಿನಿಮಾ ಬಿಡುಗಡೆ ಎಂದ ಕೂಡಲೇ ಕೊರೋನಾ ಭೀತಿ ಎನ್ನುತ್ತಾರೆ. ಇವರೆಲ್ಲ ಕೊಳಕು, ದುಷ್ಟ ಜನರು,' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ. 

ಕ್ರೀಂ ಸಿನಿಮಾದಲ್ಲಿ ನಟ ಅರುಣ್ ಸಾಗರ್ (Arun Sagar) ಕೂಡ ಅಭಿನಯಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ಸಂಯುಕ್ತಾ ಹೆಗ್ಡೆ (Samyuktha Hegde) ನಾಯಕಿಯಾಗಿದ್ದಾರೆ. 

ಹಿಳಾ ಪ್ರಧಾನ ಪಾತ್ರದಲ್ಲಿ Samyuktha Hegde , ಕ್ರೀಮ್ ಟೈಟಲ್ ಯಾಕೆಂದು ರಿವೀಲ್ ಮಾಡಲ್ಲ: Agni Shridhar

'ಕ್ರೀಂ ಸಿನಿಮಾ ಬಗ್ಗೆ ನಾನು ಏನೂ ಹೇಳೋಲ್ಲ. ಏಕೆಂದರೆ ಕರ್ನಾಟಕ ಇಂದು ರಂಪಮಯವಾಗಿದೆ. ಏನ್ ಏನೋ ಹೇಳ್ತಿದ್ದಾರೆ. ಕೊರೋನಾ ಅದು ಇದು ಅಂತ. ಪ್ರಾಮಾಣಿಕವಾಗಿ ಹೇಳ್ತೀನಿ ಈ ಸಮಯದಲ್ಲಿ ಮತ್ತೊಂದು ಸಿನಿಮಾ ತೆಗೆಯುವುದಕ್ಕೆ ನಾನು ಸಿದ್ಧವಾಗಿಲ್ಲ,' ಎಂದು ಹೇಳಿ ಹೇಗೆ ಸಿನಿಮಾ ಪ್ಲ್ಯಾನಿಂಗ್ ಶುರು ಮಾಡಿದ್ದೆ, ಎಂದು ವಿವರಿಸಿದ್ದಾರೆ. 

ಡಾಲಿ ಧನಂಜಯ್‌ (Dolly Dhananjay) ಜೊತೆ ಹೆಡ್‌ ಬುಷ್‌ (Head Bush) ಸಿನಿಮಾ ಕೂಡ ಮಾಡುತ್ತಿದ್ದಾರೆ ಅಗ್ನಿ ಶ್ರೀಧರ್ ಅವರು. ಅಗ್ನಿ ಶ್ರೀಧರ್ ಬರೆದಿರುವ ಈ ಕಥೆ ನಾನು ನಿರ್ಮಾಪಕ ಎಂದು ಕೂಡ ಡಾಲಿ ಅನೌನ್ಸ್ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣ ಶುರುವಾಗಿದ್ದು, ನಟಿ ಶ್ರುತಿ ಹರಿಹರನ್ (Sruthi Hariharan), ವಸಿಷ್ಠ ಸಿಂಹ (Vaista Simha) ಮತ್ತು ಲೂಸ್ ಮಾದಾ ಯೋಗಿ (Loose mada Yogi) ನಟಿಸುತ್ತಿದ್ದಾರೆ. ಇದು ಬೆಂಗಳೂರಿನ ಭೂಗತ ಲೋಕದ ಕಥೆಯಾಗಿದ್ದು, ಇಲ್ಲಿ ಧನಂಜಯ್‌ ಅವರು ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು ಹಾಗೂ ತೆಲುಗಿನ ಕಲಾವಿದರು ಕೂಡ ಚಿತ್ರಕ್ಕೆ ಜತೆಯಾಗಿದ್ದು, ಇದನ್ನು ಪ್ಯಾನ್‌ ಇಂಡಿಯಾ ಚಿತ್ರವಾಗಿಸುವ ಪ್ಲ್ಯಾನ್ ನಡೆಯುತ್ತಿದೆ.

Latest Videos
Follow Us:
Download App:
  • android
  • ios