ಮುಟ್ಟಬಾರದ ಜಾಗದಲ್ಲಿ ಕೆಟ್ಟದಾಗಿ ಮುಟ್ಟುತ್ತಿದ್ದರು: ನೀನಾಸಂ ಕರಾಳ ಸತ್ಯ ಬಿಚ್ಚಿಟ್ಟ ನಟಿ ಸಿತಾರಾ!
ಹೆಣ್ಣು ಮಕ್ಕಳನ್ನು ರಂಗಭೂಮಿಗೆ ಸೇರಿಸಲು ಪೋಷಕರು ಹೆದರಿಕೊಳ್ಳುತ್ತಾರೆ. ಕೆಟ್ಟದಾಗಿ ನಡೆದುಕೊಂಡು ಹುಡುಗರ ಬಗ್ಗೆ ಮಾತನಾಡಿದ ಸಿತಾರಾ.
ರಂಗಭೂಮಿ ಕಲಾವಿದೆ, ಕನ್ನಡ ಚಿತ್ರರಂಗದ ಹಾಗೂ ಕಿರುತೆರೆ ನಟಿ ಸಿತಾರಾ ನಟನೆಯಲ್ಲಿ ಸೈ ಎನಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಸಿತಾರಾ ಜೀವನದಲ್ಲಿ ಕಲ್ಪನೆ ಮಾಡಿಕೊಳ್ಳದಷ್ಟು ಕೆಟ್ಟ ಘಟನೆಗಳನ್ನು ನಡೆದಿದೆ. ಮಠ ಬಿಟ್ಟು ಯಾರನ್ನೋ ನಂಬಿ ಕೆಲಸ ಹುಡುಕಿಕೊಂಡು ಬಂದ ಸಿತಾರಾ ರಂಗಭೂಮಿಯಲ್ಲಿ ಅನುಭವಿಸಿದ ಕೆಟ್ಟ ಹಿಂಸೆ ನೆನೆದು ಕಣ್ಣೀರಾಕಿದ್ದಾರೆ.
'ಯಾರನ್ನೊ ನಂಬಿ ಕೆಲಸ ಸಿಗುತ್ತದೆ ಎಂದು ಮಠ ಬಿಟ್ಟು ಹೊರ ಬಂದಿದ್ದಕ್ಕೆ ಕಷ್ಟ ಅನುಭವಿಸುತ್ತಿರುವೆ. ಕೆಲಸ ಕೊಡಿಸುತ್ತೀನಿ ಎಂದು ಮೆಜೆಸ್ಟಿಕ್‌ನಲ್ಲಿ ಬಿಟ್ಟು ಹೋಗ ವ್ಯಕ್ತಿಯನ್ನು ನೆನಪಿಸಿಕೊಂಡರೆ ಕಣ್ಣೀರು ಬರುತ್ತದೆ. ಯಾರ ತೊಂದರೆ ಇಲ್ಲದೆ ನಾನು ಮೂರು ದಿನ ಮೆಜೆಸ್ಟಿಕ್‌ನಲ್ಲಿ ಮಲಗಿಕೊಂಡಿದ್ದೆ ಒಂದು ದಿನ ಸರ್ಕಾರಿ ಬಸ್ ಕಂಡಕ್ಟರ್ ಬಳಿ ಮಾತನಾಡಿ ಗುರು ಪ್ರಸಾದ್ ಅಣ್ಣ ಅವರನ್ನು ಸಂಪರ್ಕ ಮಾಡಿ ಅಲ್ಲಿಂದ ಬಸ್‌ನಲ್ಲಿ ಅವರ ಮನೆ ಕಡೆ ಮುಖ ಮಾಡಿದೆ. ಅವರು ಮನೆಯಲ್ಲಿ 15 ದಿನ ಉಳಿದುಕೊಂಡು ಅವರೇ ಸಹಾಯ ಮಾಡಿ ನನಗೆ ಜೀವನ ನಡೆಸಲು ದಿನಸಿ ಸಾಮಾಗ್ರಿಗಳನ್ನು ಕೊಡಿಸಿದರು. ಜೀವನ ನಡೆಸಲು ನೀನಾಸಂ ಕಡೆ ನನ್ನನ್ನು ಕಳುಹಿಸಿದರು. ನನ್ನ ಜೀವನದಲ್ಲಿ ದುಡಿದು ಅನ್ನ ತಿನ್ನುತ್ತಿರುವೆ ಅಂದ್ರೆ ಅದಕ್ಕೆ ನೀನಾಸಂ ಕಾರಣ. ಅಲ್ಲಿಗೆ ಹೋದ ಮೇಲೆ ಯಾವ ತಂದರೆ ಕೂಡ ಎದುರಾಗಲಿಲ್ಲ' ಎಂದು ಸಿತಾರಾ ಜನಪ್ರಿಯಾ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಪತಿ ಹರ್ಷ ಮಾಸ್ಟರ್ ಜೊತೆ 'ಬಿರುಗಾಳಿ' ನಟಿ ಸಿತಾರಾ; ಫ್ಯಾಮಿಲಿ ಫೋಟೋ ವೈರಲ್?
'ನೀನಾಸಂ ನಲ್ಲಿದ್ದಾಗ ಮತ್ತು ತಿರುಗಾಟ ನಾಟಕ ಮಾಡುವಾಗ ನನಗೆ ಕೆಲವೊಂದು ಕೆಟ್ಟ ಅನುಭವಾಗಿ. ಜಾಗ ಮತ್ತು ವ್ಯಕ್ತಿ ಹೆಸರು ಹೇಳುವುದಕ್ಕೆ ಆಗಲ್ಲ ಆದರೆ ಆ ವ್ಯಕ್ತಿಗಳು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆ ಘಟನೆಗಳನ್ನು ವಿವರಿಸುವುದು ಕಷ್ಟು. ಹುಡುಗಿ ಹೇಳೋರು ಕೇಳೋರು ಯಾರೂ ಇಲ್ಲ ಅಂದ್ರೆ They behave like a hell. ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಕೆಲವರು ನಡೆದುಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಈ ಕಾರಣಕ್ಕೆ ನಾನು ಜನರ ಜೊತೆ ತುಂಬಾ ರಫ್ ಆಗಿರುತ್ತಿದ್ದೆ. ಹುಡುಗರು ಮತ್ತು ಟೀಚರ್ಸ್‌ಗಳ ಮಾತನಾಡುವುದಕ್ಕೆ ಇಷ್ಟನೇ ಆಗುತ್ತಿರಲಿಲ್ಲ ಫ್ರೆಂಡ್ಸ್‌ಗಳ ಜೊತೆ ಮಾತನಾಡಲು ಆಗುತ್ತಿರಲಿಲ್ಲ...ಹುಡುಗರು ಅಂದ್ರೆನೇ ಕೈಕಾಲು ನಡುಕ ಬರುತ್ತಿತ್ತು. ತುಂಬಾ ಕೆಟ್ಟದಾಗಿ ನಡೆದುಕೊಂಡಿರುವ ವ್ಯಕ್ತಿಗಳ ಹೆಸರು ಹೇಳುವುದಕ್ಕೆ ಇಷ್ಟವಿಲ್ಲ ಒಂದು ವೇಳೆ ನಾನು ಹೇಳಿದರೂ ಅವರ ಕುಟುಂಬ ಬೀದಿಗೆ ಬರುತ್ತದೆ. ಈಗ ನನ್ನ ಬುದ್ಧಿ ಮೆಚ್ಯೂರ್ ಆಗಿ ಅವರ ಹೆಸರು ಹೇಳಬಾರದು ಅನ್ನೋ ಸೆನ್ಸ್ ಕೂಡ ನನಗಿದೆ' ಎಂದು ಸಿತಾರಾ ಹೇಳಿದ್ದಾರೆ.
ಮೂರು ತಿಂಗಳಿನಲ್ಲಿ 45 ಕೆಜಿ ಲಾಸ್; ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆಂದು ಸತ್ಯ ಬಿಚ್ಚಿಟ್ಟ ರಾಮಾಚಾರಿ ರಿತ್ವಿಕ್!
'ಆದರೆ ಆ ಸಮಯದಲ್ಲಿ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದರು, ಜೊತೆಯಲ್ಲಿ ನಾಟಕ ಮಾಡುತ್ತಿದ್ದವರು ವೇದಿಕೆ ಮೇಲೆ ಕಾಟ ಕೊಡುತ್ತಿದ್ದರು. ಈ ವ್ಯಕ್ತಿ ನನ್ನ ಜೊತೆ ಈ ರೀತಿ ವರ್ತಿಸುತ್ತಿದ್ದಾರೆ ಅಂತ ಹೇಳಿದರೂ ಯಾರೂ ನಂಬುವುದು. ಗ್ರೀನ್ ರೂಮ್‌ನಲ್ಲಿದ್ದರೆ ಅಲ್ಲಿಗೆ ಬರುತ್ತಿದ್ದರು ಸ್ನಾನ ಮಾಡುತ್ತಿದ್ದರೂ ಬಾತ್‌ರೂಮ್‌ಗೆ ಬರುತ್ತಿದ್ದರು ಮಲ್ಕೊಂಡಿದ್ದರೆ ನೆಮ್ಮದಿಯಾಗಿ ಮಲಗಲು ಬಿಡುತ್ತಿರಲಿಲ್ಲ ಬಸ್‌ನಲ್ಲಿ ನೆಮ್ಮದಿಯಾಗಿರಲು ಬಿಡುತ್ತಿರಲಿಲ್ಲ ಎಲ್ಲೆಲ್ಲಿ ಕೈ ಹಾಕಬಾರದು ಅಲ್ಲಿ ಕೈ ಹಾಕುತ್ತಿದ್ದರು. ಬಾಯಿ ಜೋರಿದ್ದರೆ ನಾವೇ ಮೈ ಮೇಲೆ ಬೀಳುತ್ತೀವಿ ಅಂತ ಅಂದುಕೊಳ್ಳುತ್ತಾರೆ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದರು. ಮುಟ್ಟಬಾರದ ಜಾಗಕ್ಕೆ ಕೈ ಹಾಕಿ ಮುಟ್ಟುತ್ತಿದ್ದರು ಇದನ್ನು ಯಾರಿಗೂ ಹೇಳಲು ಅಗಲ್ಲ. ರಂಗಭೂಮಿಗೆ ಕಳುಹಿಸಲು ಜನರು ಹೆದರಿಕೊಳ್ಳುತ್ತಾರೆ' ಎಂದಿದ್ದಾರೆ ಸಿತಾರಾ.