ಕೊನೆಯ ಇನ್‌ಸ್ಟಾ ಪೋಸ್ಟ್‌ನಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಶೋಭಿತಾ ಶಿವಣ್ಣ?

ಬ್ರಹ್ಮಗಂಟು ಸೇರಿದಂತೆ ಹಲವು ಧಾರವಾಹಿಗಳಲ್ಲಿ ಕನ್ನಡಿಗರ ಮನಗೆದ್ದ ನಟಿ ಶೋಭಿತಾ ಶಿವಣ್ಣ ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ಹಾಡಿನ ಮೂಲಕವೇ ಶೋಭಿತಾ ಸೂಚನೆ ನೀಡಿದ್ದರಾ? 

Kannada Actress shobitha shivanna last insta post hints tragedy says report ckm

ಹೈದರಾಬಾದ್(ಡಿ.01) ಕನ್ನಡಿಗರ ಮನಗೆದ್ದ ಖ್ಯಾತ ನಟಿ ಶೋಭಿತಾ ಶಿವಣ್ಣ ನಿಧನ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ನೀಡಿದೆ. ಇತ್ತೀಚೆಗೆ ಜನಪ್ರಿಯ ತಾರೆಗಳು, ನಿರ್ದೇಶಕರು ಏಕಾಏಕಿ ಬದುಕು ಅಂತ್ಯಗೊಳಿಸುತ್ತಿರುವ ಬೆಳವಣಿಗೆ ಆಘಾತ ತಂದಿದೆ. ಬ್ರಹ್ಮಗಂಟು ಸೇರಿದಂತೆ ಹಲವು ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಶೋಭಿತಾ ಶಿವಣ್ಣ ತಮ್ಮ ಸಾವಿನ ಸೂಚನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ನೀಡಿದ್ದರಾ ಅನ್ನೋ ಅನುಮಾನ ಶುರುವಾಗಿದೆ. ಶೋಭಿತಾ ಶಿವಣ್ಣ ಕೊನೆಯದಾಗಿ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಈ ಅನುಮಾನಗಳಿಗೆ ಕಾರಣವಾಗಿದೆ.

ಶೋಭಿತಾ ಶಿವಣ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊನೆಯದಾಗಿ ಬಾಲಿವುಡ್ ಹಾಡನ್ನು ನಿರ್ವಾನ ಮ್ಯೂಸಿಕ್ ಸ್ಟುಡಿಯೋದಲ್ಲಿ ಗಾಯಕರೊಬ್ಬರು ಹಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದರಲ್ಲೇನು ವಿಶೇಷವಿಲ್ಲ. ಆದರೆ ಈ ಹಾಡಿನ ಮೂಲಕ ನಟಿ ಶೋಭಿತಾ ಶಿವಣ್ಣ ಸೂಚನೆಗಳನ್ನು ನೀಡಿದ್ದರು ಅನ್ನೋ ಅನುಮಾನಗಳು ವ್ಯಕ್ತವಾಗತೊಡಗಿದೆ. 1984ರಲ್ಲಿ ತೆರೆಕಂಡ ಶರಾಬಿ ಬಾಲಿವುಡ್ ಚಿತ್ರದ ಇಂತಜಾರ್ ಕಿ ಹಾಡನ್ನು ಶೋಭಿತಾ ಪೋಸ್ಟ್ ಮಾಡಿದ್ದಾರೆ.

ನಿಧನರಾದ ನಟಿ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದುಮುದ್ದಾದ ಫೋಟೋಸ್!

ಕಾಯುತ್ತಿದ್ದೇನೆ ಅನ್ನೋ ಹಾಡಿನ ಮೂಲಕ ಶೋಭಿತ ಸೂಚ್ಯವಾಗಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ನವೆಂಬರ್ 16ರಂದ ಶೋಭಿತಾ ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿನ ತುಣುಕಿನ ವಿಡಿಯೋ ಹಾಕಿದ್ದಾರೆ. ಬಳಿಕ ಶೋಭಿತಾ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಇದೇ ಕೊನೆಯ ಪೋಸ್ಟ್, ನವೆಂಬರ್ 16ರಿಂದ  ಶೋಭಿತಾ ತಮ್ಮ ಸಾವಿನ ದಿನ ಏಣಿಸಿದ್ದರು ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಮಿತಾಬ್ ಬಚ್ಚನ್ ಅಭಿನಯದ ಈ ಚಿತ್ರದ ಅರ್ಥಗರ್ಭಿತ ಹಾಡನ್ನು ಪೋಸ್ಟ್ ಮಾಡುವ ಮೂಲಕ ಶೋಭಿತಾ ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ.  

ಇದಕ್ಕೂ ಮೊದಲು ಶೋಭಿತಾ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದರು. ಇದೇ ವೇಳೆ ತಮ್ಮ ಫಸ್ಟ್ ಡೇ, ಫಸ್ಟ್ ಶೋ ಚಿತ್ರದ ಕುರಿತು ಮಾಹಿತಿ ನೀಡಿದ್ದರು. ಕಿರುತೆರೆಯಿಂದ ದೂರವಾಗಿದ್ದರೂ ಶೋಭಿತಾ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ತಮ್ಮ ನಗುಮುಖದ ಫೋಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಆಪ್ತರ ಜೊತೆಗಿನ ಸಂತಸ ಕ್ಷಣಗಳನ್ನು ಶೋಭಿತಾ ಪೋಸ್ಟ್ ಮಾಡಿದ್ದಾರೆ. ಆದರೆ ಬದುಕು ಅಂತ್ಯಗೊಳಿಸುವಂತ ಕಾರಣ ಏನಿತ್ತು ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

 

 

ಹಾಸನ ಮೂಲದ ಶೋಭಿತಾ ಶಿವಣ್ಣ ಕಳೆದ ವರ್ಷ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ಶೋಭಿತಾ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಶೋಭಿತಾ ಪೋಷಕರು ಹಾಗೂ ಕುಟುಂಬ್ಥರು ಆಘಾತಕ್ಕೊಳಗಾಗಿದ್ದಾರೆ. ಶೋಭಿತಾ ಕುಟುಂಬಸ್ಥರು ಹೈದರಾಬಾದ್‌ಗೆ ತೆರಳಿದ್ದಾರೆ.

ಮದುವೆ ಬಳಿಕ ಶೋಭಿತಾ ಶಿವಣ್ಣ ನಟನೆಯಿಂದ ದೂರ ಉಳಿದಿದ್ದರು. ಉತ್ತಮ ಪಾತ್ರದ ಕಾರಣ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಇತ್ತ ಶೋಭಿತಾ ಸಾವಿನ ಕುರಿತು ಹೈದರಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಶೋಭಿತಾ ಮದುವೆ ಬಳಿಕ ಬದುಕಿನಲ್ಲಿ ಹಲವು ಸಂಕಷ್ಟ ಎದುರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇಷ್ಟೇ ಅಲ್ಲ ಶೋಭಿತಾ ದಾಂಪತ್ಯ ಜೀವನ ತೃಪ್ತಿದಾಯಕವಾಗಿರಲಿಲ್ಲ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಯಾವುದೇ ಸ್ಪಷ್ಟ ಕಾರಣಗಳು ಲಭ್ಯವಾಗಿಲ್ಲ.  ಡಿಪ್ರೆಶನ್ ಒಳಗಾಗಿದ್ದರು ಅನ್ನೋದು ಶೋಭಿತಾ ಶಿವಣ್ಣ ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸೂಚನೆಗಳು ಸಿಗುತ್ತಿದೆ. ಡಿಪ್ರೆಶನ್ ಕುರಿತು ಚಿತ್ರದ ಹಾಡನ್ನೇ ಪೋಸ್ಟ್ ಮಾಡಿರುವುದು ಕೆಲ ಸೂಚನೆ ನೀಡಿದೆ. 

Latest Videos
Follow Us:
Download App:
  • android
  • ios