ಕಿರುತೆರೆ ಮತ್ತು ಹಿರಿತೆರೆ ನಟಿ ಹಾಗೂ ನಿರೂಪಕಿ ಕಾವ್ಯಾ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೂ ಕೂದಲು ದಾನ ಮಾಡಿದ್ದ ಕಾವ್ಯಾ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ನಟಿಸಿದ್ದ ನಟಿ, ಹಾಗೂ ನಿರೂಪಕಿ ಕಾವ್ಯಾ ಶಾಸ್ತ್ರಿ (Kavya Shastry) ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೆಚ್ಚಾಗಿ ಅವರು ರೀಲ್ಸ್ ಮೂಲಕ ನಮ್ಮ ಆಚರಣೆ, ಸಂಸ್ಕೃತಿ ಸೇರಿ, ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಾರೆ. ಇವರ ಜನ ಜಾಗೃತಿ ವಿಡಿಯೋಗಳ ಹಲವು ಜನರನ್ನು ತಲುಪಿ, ಅವರಿಗೆ ಅದರಿಂದ ಲಾಭವಾಗಿದ್ದೂ ಇದೆ. ಇದೀಗ ನಟಿ ಒಂದು ದಾನವನ್ನು ಮಾಡುವ ಮೂಲಕ ಜನರಿಗೆ ಪ್ರೇರಣೆಯಾಗಿದ್ದಾರೆ.
ರಾಣಾ ದಗ್ಗುಭಾಟಿ ಜೊತೆ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ… ಫ್ಯಾನ್ ಆಗ್ಬಿಟ್ಟೆ ಎಂದ ನಟಿ
ನಟಿ ಕಾವ್ಯಾ ಶಾಸ್ತ್ರೀ ಇತ್ತೀಚೆಗೆ ಕ್ಯಾನ್ಸರ್ ರೋಗಿಗಳ (Cancer Patients) ಆರೈಕೆಗಾಗಿ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ತಮ್ಮ ಅಭಿಮಾನಿಗಳು ಸೇರಿ ಹಲವರಿಗೆ ಮಾದರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದನ್ನು ಹೆಚ್ಚಿನ ಜನ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಕೂದಲು ಕತ್ತರಿಸುವ ಸಮಯದಲ್ಲಿ ಅದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ನೀಡುವುದು. ಇದರಿಂದ ಅದೆಷ್ಟೋ ಜನ ಕ್ಯಾನ್ಸರ್ ರೋಗಿಗಳಿಗೆ ಉಪಕಾರವೂ ಆಗಿದೆ. ಅದೇ ರೀತಿ ಇದೀಗ ನಟಿ ಕಾವ್ಯಾ ಶಾಸ್ತ್ರಿ ತಮ್ಮ ಕೂದಲನ್ನು (hair donate) ಕ್ಯಾನ್ಸರ್ ರೋಗಿಗಳಿಗೆ ದಾನ ನೀಡಿದ್ದಾರೆ. ಅವರು ಕೂದಲು ದಾನ ಮಾಡೋದು ಮೊದಲ ಬಾರಿ ಅಲ್ಲ. ನಾಲ್ಕು ವರ್ಷದ ಹಿಂದೆ ಸಹ ನಟಿ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ನೀಡಿದ್ದರು. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
ನಿದ್ರೆಯಲ್ಲಿ ಜರ್ಕ್ ಅಥವಾ ಬೆಚ್ಚಿ ಬೀಳುವವರಿಗೆ ಪರಿಹಾರ ಕೊಟ್ಟ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ
ಇನ್’ಸ್ಟಾಗ್ರಾಂನಲ್ಲಿ ವಿಡಿಯೋ (Instagram video) ಶೇರ್ ಮಾಡಿರುವ ಕಾವ್ಯಾ ಶಾಸ್ತ್ರಿ, ತಾವು ನಾಲ್ಕು ವರ್ಷಗಳ ಬಳಿಕ ಈ ಕೆಲಸ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಕೂದಲು ಕೊಡೋದಕ್ಕಾಗಿಯೇ ಅವರು ನಾಲ್ಕು ವರ್ಷದಿಂದ ಕೂದಲು ಬೆಳೆಸಿದ್ದು, ಇದೀಗ ಅದನ್ನು ಕತ್ತರಿಸಿದ್ದು, ಕ್ಯಾನ್ಸರ್ ರೋಗಿಗಳಿಗೆ ನನ್ನ ಕಡೆಯಿಂದ ಸಣ್ಣ ಗಿಫ್ಟ್ ಎಂದಿದ್ದಾರೆ. ಅಷ್ಟೇ ಅಲ್ಲ ಕೆಲವು ಸಂಘ ಸಂಸ್ಥೆಗಳು ನಾವು ಕೊಟ್ಟಂತಹ ಕೂದಲನ್ನು ವಿಗ್ ಮಾಡಿ, ಕ್ಯಾನ್ಸರ್ ರೋಗಿಗಳಿಗೆ ನೀಡುತ್ತಾರೆ. ಕೀಮೋಥೆರಪಿ, ಸಾಕಾಷ್ಟು ಚಿಕಿತ್ಸೆಗಳಿಗೆ ಒಳಗಾಗುವ ಕ್ಯಾನ್ಸರ್ ಪೇಷಂಟ್ ಗಳ ಕೂದಲು ಉದುರಿ ಹೋಗಿರುತ್ತೆ. ಅವರಿಗೆ ಸಮಾಜವನ್ನು ಎದುರಿಸೋಕೆ ಯಾವುದೇ ರೀತಿಯ ಆತ್ಮವಿಶ್ವಾಸ ಉಳಿದಿರೋದಿಲ್ಲ. ಜನ ನನ್ನನ್ನು ಗುರುತಿಸೋದಿಲ್ಲ, ಅಪಹಾಸ್ಯ ಮಾಡುತ್ತಾರೆ ಎಂದು ಯೋಚನೆ ಮಾಡೋರಿಗೆ ಚೈತನ್ಯ ನೀಡೋದಕ್ಕಾಗಿಯೇ ಈ ವಿಗ್ (wig for cancer patients) ಮಾಡಿ ಅವರಿಗೆ ನೀಡಲಾಗುತ್ತೆ. ನಾನು ನನ್ನ ಕೂದಲು ಮಾತ್ರ ಅಲ್ಲ, ಕಣ್ಣು, ಹೃದಯ ಸೇರಿ ಅಂಗಾಂಗಗಳ ದಾನ ಮಾಡೋದಕ್ಕೂ ಸಿದ್ಧಳಾಗಿದ್ದೇನೆ, ಅಷ್ಟೇ ಅಲ್ಲ ಕೂದಲು ಮತ್ತು ರಕ್ತವನ್ನು ಸಹ ದಾನ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ ಕಾವ್ಯಾ ಶಾಸ್ತ್ರಿ.
ಕಲ್ಲಂಗಡಿ ಹಣ್ಣಿನ ಡಾಕ್ಟರ್ ಆದ ನಟಿ ಕಾವ್ಯಾ ಶಾಸ್ತ್ರಿ; ದುಂಡಗಿರುವ ಹೆಣ್ಣು ಕಲ್ಲಂಗಡಿ ಭಾರಿ ಸ್ವೀಟ್ ಆಗಿರುತ್ತಂತೆ!
ಅಂದ ಹಾಗೆ ನಟಿ ಕಾವ್ಯಾ ಶಾಸ್ತ್ರಿ ಉದಯ ಮ್ಯೂಸಿಕ್ (Udaya Music) ವಾಹಿನಿಯಲ್ಲಿ ನಿರೂಪಕಿಯಾಗಿ ಕಿರುತೆರೆ ಎಂಟ್ರಿ ಕೊಟ್ಟರು, ಬಳಿಕ 'ಶುಭವಿವಾಹ' ಧಾರಾವಾಹಿ ಮಾತ್ರವಲ್ಲದೇ ಕನ್ನಡದಲ್ಲಿ ಲವ್ 360 ಹಾಗೂ ದುನಿಯಾ ವಿಜಯ್ ಜೊತೆ ಯುಗ ಸಿನಿಮಾದಲ್ಲೂ ನಟಿಸಿದ್ದರು. ಜೊತೆಗೆ ವಿವಿಧ ಅವಾರ್ಡ್ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡುತ್ತಾರೆ ಕಾವ್ಯಾ. ಅಷ್ಟೇ ಅಲ್ಲ. ಟ್ರಾವೆಲಿಂಗ್ ಕಡೆಗೆ ಹೆಚ್ಚಿನ ಒಲವು ತೋರಿರುವ ಈಕೆ, ಸದ್ಯ ಸ್ಪಿರೀಚುವಲ್ ಜರ್ನಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
