ಕಲ್ಲಂಗಡಿ ಹಣ್ಣಿನ ಡಾಕ್ಟರ್ ಆದ ನಟಿ ಕಾವ್ಯಾ ಶಾಸ್ತ್ರಿ; ದುಂಡಗಿರುವ ಹೆಣ್ಣು ಕಲ್ಲಂಗಡಿ ಭಾರಿ ಸ್ವೀಟ್ ಆಗಿರುತ್ತಂತೆ!

ಕನ್ನಡದ ಲವ್ 360 ಸಿನಿಮಾದ ನಟಿ ಕಾವ್ಯಾ ಶಾಸ್ತ್ರಿ ಈಗ ಕಲ್ಲಂಗಡಿ ಹಣ್ಣಿನ ಡಾಕ್ಟರ್ ಆಗಿದ್ದಾರೆ. ಉದ್ದಕ್ಕಿರುವ ಹೊಳೆಯುವ ಗಂಡು ಕಲ್ಲಂಗಡಿ ಬಿಟ್ಟು, ದುಂಡಗಿರುವ ಹೆಣ್ಣು ಕಲ್ಲಂಗಡಿ ಖರೀದಿಸಿ ತುಂಬಾ ಸ್ವೀಟ್ ಆಗಿರುತ್ತದೆ ಎಂದು ನಟಿ ಕಾವ್ಯಾ ಶಾಸ್ತ್ರಿ ಟಿಪ್ಸ್‌ ಕೊಟ್ಟಿದ್ದಾರೆ.

Actress Kavya shastry gave tips for buying watermelon round female watermelon is very sweet sat

ಬೆಂಗಳೂರು (ಏ.18): ಬೇಸಿಗೆ ಬಂತೆಂದರೆ ಸಾಕು ನಾವೆಲ್ಲರೂ ಕಲ್ಲಂಗಡಿ ಹಣ್ಣು, ಖರಬೂಜ ಸೇವನೆ ಹಾಗೂ ಎಳನೀರು ಕುಡಿಯುವುದು ಹೆಚ್ಚು. ಆದರೆ, ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಲು ನಟಿ ಕಾವ್ಯಾಶಾಸ್ತ್ರಿ ಅವರು ಕೆಲವೊಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ ಅದನ್ನು ಫಾಲೋ ಮಾಡಿ ಕಲ್ಲಂಗಡಿ ಖರೀದಿಸಿ ತಿಂದು ನೀವೇ ಅವರಿಗೆ ಕಾಮೆಂಟ್ ಕೂಡ ಮಾಡಬಹುದು.

ಹೌದು, ಕಲ್ಲಂಗಡಿ ಹಣ್ಣು ಈಗ ಮಾರುಕಟ್ಟೆಯಲ್ಲಿ ಖರೀದಿ ಮಾಡಬೇಕೆಂದರೆ ಪ್ರತಿ ಕೆ.ಜಿ.ಗೆ ಕನಿಷ್ಠ 25 ರೂ.ನಿಂದ ಗರಿಷ್ಠ 30 ರೂ.ಗೆ ಮಾರಾಟ ಆಗುತ್ತಿದೆ. ಆದರೆ, ಒಂದು ಇಡಿಯಾದ ಹಣ್ಣು ಖರೀದಿ ಮಾಡಬೇಕಾದರೆ ಕನಿಷ್ಠ 5 ಕೆ.ಜಿ. ಗಾತ್ರದ ಹಣ್ಣು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಚಿಕ್ಕ ಹಣ್ಣುಗಳನ್ನು ಖರೀದಿ ಮಾಡಿದರೂ ಅದು ಸಿಹಿಯಾಗಿರದೇ ನಾವು ಕೊಟ್ಟ ಹಣಕ್ಕೆ ನಷ್ಟ ಅನುಭವಿಸಬೇಕಾಗುತ್ತದೆ. ಹಲವರು ಸ್ವಲ್ಪ ಕಡಿಮೆ ಹಣಕ್ಕೆ ಕಲ್ಲಂಗಡಿ ಸಿಕ್ಕಿತೆಂದು ತಂದು ಕತ್ತರಿಸಿದಾಗ ಚೆನ್ನಾಗಿರದೇ ಹಣ್ಣು ಮಾರಿದವನನ್ನು ಬೈಯುತ್ತಾ ತಿಂದದ್ದೂ ಸಾಕಷ್ಟು ಬಾರಿ ನಡೆದಿರುತ್ತದೆ. ಹೀಗಾಗಿ, ನಟಿ ಕಾವ್ಯಾ ಶಾಸ್ತ್ರಿ ಹೇಳಿದಂತೆ ನೀವು ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಿದರೆ ನೀವು ಕೊಟ್ಟ ಹಣಕ್ಕೆ ಗುಣಮಟ್ಟದ ಹಾಗೂ ಸಿಹಿಯಾದ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ನಿರ್ದೇಶಕರು- ನಿರ್ಮಾಪಕರು ಕರೆಯುತ್ತಾರೆ, ಲಾಡ್ಜ್‌ ರೂಮ್‌ ನೋಡಿ ಹೆದರಿಬಿಟ್ಟಿ: ಗಿಚ್ಚಿ ಗಿಲಿಗಿಲಿ ಸುಶ್ಮಿತಾ

ನಟಿ ಕಾವ್ಯಾಶಾಸ್ತ್ರಿ ಕೊಡುವ ಟಿಪ್ಸ್‌ಗಳು ಇಲ್ಲಿವೆ ನೋಡಿ..

  • ಯಾವಾಗಲೂ ಉದ್ದನೆಯ ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಬಾರದು. ಯಾಕೆಂದರೆ ಅದು ಗಂಡು ಕಲ್ಲಂಗಡಿ ಆಗಿದ್ದು, ಹೆಚ್ಚು ಸಿಹಿ ಇರುವುದಿಲ್ಲ.
  • ದುಂಡಗಿರುವ ಕಲ್ಲಂಗಡಿ ಹಣ್ಣು ಖರೀದಿ ಮಾಡಬೇಕು. ಇದು ಹೆಣ್ಣು ಕಲ್ಲಂಗಡಿ ಆಗಿದ್ದು, ತಿನ್ನುವುದಕ್ಕೆ ಹೆಚ್ಚು ಸಿಹಿಯಾಗಿರುತ್ತದೆ.
  • ಕಲ್ಲಂಗಡಿ ಹಣ್ಣಿನ ತೊಟ್ಟಿನ ಭಾಗ ಪೂರ್ತಿಯಾಗಿ ಒಣಗಿದ್ದರೆ ಅದನ್ನು ಖರೀದಿ ಮಾಡಬೇಕು. ಹಸಿರು ಬಣ್ಣದಲ್ಲಿದ್ದರೆ ಖರೀದಿ ಬೇಡ.
  • ಕಲ್ಲಂಗಡಿ ಹಣ್ಣಿನ ಮೇಲೆ ವೆಬ್‌ ಕಲೆಯ ತರಹ ಕಲೆಗಳು ಹೆಚ್ಚಾಗಿದ್ದರೆ ಅದನ್ನು ಕಣ್ಣು ಮುಚ್ಚಿಕೊಂಡು ತೆಗೆದುಕೊಳ್ಳಬಹುದು.
  • ಕಲ್ಲಂಗಡಿ ಹಣ್ಣು ಕಲರ್ ಡಲ್ ಆಗಿದ್ದರೆ ತೆಗೆದುಕೊಳ್ಳಿ. ಹೆಚ್ಚು ಹೊಳೆಯುತ್ತಿದ್ದರೆ ತೆಗೆದುಕೊಳ್ಳಬೇಡಿ.
  • ಕಲ್ಲಂಗಡಿ ಹಣ್ಣಿನ ಮೇಲೆ ಒಂದು ಭಾಗದಲ್ಲಿ ಬಿಳಿಯ ಮಚ್ಚೆ ಕಾಣಿಸುತ್ತದೆ. ಆ ಬಿಳಿ ಮಚ್ಚೆ ಜಾಗದಲ್ಲಿ ಆರೆಂಜ್ ಬಣ್ಣ ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಖರೀದಿ ಮಾಡಬಹುದು.

ಕಲ್ಲಂಗಡಿಯನ್ನು ಹಣ್ಣು ಮಾಡುವುದಕ್ಕಾಗಿ, ಸಿಹಿ ಮಾಡುವುದಕ್ಕೆ ಹಾಗೂ ಬಣ್ಣವನ್ನು ಹೆಚ್ಚು ಮಾಡುವುದಕ್ಕಾಗಿ ಸಾಕಷ್ಟು ರಸಾಯನಿಕ ವಸ್ತುಗಳನ್ನು ಸಿಂಪಡನೆ ಮಾಡಲಾಗುತ್ತದೆ. ಕಲ್ಲಂಗಡಿ ಹಣ್ಣಿನ ಮೇಲೆ ಕಾಣುವ ಬೂದು ಬಣ್ಣವೇ ಕೆಲಮಿಕಲ್ ಸಿಂಪಡಣೆ ಅಥವಾ ಇಂಜೆಕ್ಟ್ ಮಾಡಿದ್ದರ ಪರಿಣಾಮವಾಗಿದೆ. ಆದ್ದರಿಂದ ನೀವು ಯಾವಾಗಲೂ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ತೊಳೆಯದೇ ತಿನ್ನಬಾರದು. ಒಂದು ವೇಳೆ ತೊಳೆಯದೇ ತಿಂದರೆ ಸಿಪ್ಪಿಯನ್ನು ಹಿಡಿದುಕೊಂಡು ತಿನ್ನುವ ನಿಮಗೆ ಮೇಲ್ಭಾಗದ ರಸಾಯನಿಕ ಹಣ್ಣಿಗೂ ಅಂಟಿಕೊಂಡು ಹೊಟ್ಟೆ ಸೇರುತ್ತದೆ. ಇದರಿಂದ ಜ್ವರ, ತಲೆನೋವು, ಚರ್ಮದ ತುರಿಕೆ, ಚರ್ಮದ ಅಲರ್ಜಿ ಕೂಡ ಕಂಡುಬರಬಹುದು.

ಇದೆಂಥಾ ಅನುಮಾನ! ತನಿಷಾ ಕುಪ್ಪಂಡ ಫಸ್ಟ್ ಲವ್ ಸ್ಟೋರಿ ಕೇಳಿದ್ರೆ 'ಲಕ್ಷ್ಮೀ ನಿವಾಸ'ದ ಜಯಂತ್ ನೆನಪಾಗುತ್ತೆ!

ಕಲ್ಲಂಗಡಿ ಹಣ್ಣನ್ನು ಹೆಚ್ಚು ಸಿಹಿಯಾಗಿಸಲು ಹಾಗೂ ಪಿಂಕ್ ಮಾಡುವುದಕ್ಕೆಯೂ ರಸಾಯನಿಕ ಬಣ್ಣವನ್ನು ಬಳಕೆ ಮಾಡಲಾಗುತ್ತದೆ. ಅದನ್ನು ಪತ್ತೆ ಮಾಡಲು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಒಂದು ಬಿಳಿ ಬಟ್ಟೆಯನ್ನು ಅದರ ಮೇಲೆ ಅದ್ದಿದಾಗ ಪಿಂಕ್ ಕಲರ್ ಬಟ್ಟೆಗೆ ಅಂಟಿಕೊಂಡರೆ ಅದಕ್ಕೆ ರಾಸಾಯನಿಕ ವಸ್ತು ಇಂಜೆಕ್ಟ್‌ ಮಾಡಿದ್ದಾರೆ ಎಂದರ್ಥ. ಆಗ ಅಂತಹ ಹಣ್ಣನ್ನು ತಿನ್ನಬಾರದು. ಇದರಿಂದ ಥೈರಾಯ್ಡ್ ಕೂಡ ಬರಬಹುದು ಎಂದು ನಟಿ ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios