Asianet Suvarna News Asianet Suvarna News

ಇಲ್ಲಿ ಕೆಲಸದವರನ್ನು ಇಟ್ಕೊಳ್ಳೋದು ಸುಲಭ, ಫಾರಿನ್ ಜೀವನ ಅಂದ್ಕೊಂಡಷ್ಟು ಸುಲಭವಲ್ಲ: ಅರ್ಚನಾ

ಮಗಳ ನಾಮಕರಣವನ್ನು ಬೆಂಗಳೂರಿನಲ್ಲಿ ಮಾಡಿದ ಅರ್ಚನಾ- ವಿಘ್ನೇಶ್ ಶರ್ಮಾ. ಫಾರಿನ್ ಜೀವನ ಹೇಗಿದೆ?

Kannada actress Archana Lakshminarasimhaswamy talks about Life in different country vcs
Author
First Published Apr 29, 2024, 11:05 AM IST

ಕನ್ನಡ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಮತ್ತು ನಟ ವಿಘ್ನೇಶ್ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ವಿದೇಶದಲ್ಲಿ ನೆಲೆಸಿದ್ದಾರೆ. ತಮ್ಮ ಮುದ್ದು ಮಹಾಲಕ್ಷ್ಮಿಯ ನಾಮಕರಣವನ್ನು ತಮ್ಮ ಊರಿನಲ್ಲಿ ಮಾಡಬೇಕು ಎಂದು ಮೂರು- ನಾಲ್ಕು ವಾರಗಳ ಕಾಲ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಫಾರಿನ್ ಜೀವನ ಹೇಗಿದೆ ಎಂದು ಹಂಚಿಕೊಂಡಿದ್ದಾರೆ.

ಬೆಂಗಳೂರಿಗೆ ಬಂದಿದ್ದು ಮಗಳ ನಾಮಕರಣಕ್ಕೆಂದು ತುಂಬಾ ಖುಷಿಯಾಗುತ್ತಿದೆ. ಬಂದಾಗಿನಿಂದಲೂ ನಾನು ಮಸಾಲ ಪೂರಿ, ಚುರ್ಮುರಿ, ಗೋಬಿ ಮಂಚೂರಿ...ಚೆನ್ನಾಗಿ ತಿಂದಿದ್ದೀನಿ. ವರ್ಷಗಳಿಂದ ಇಂಡಸ್ಟ್ರಿಯಿಂದ ದೂರ ಇದ್ದೀನಿ ಆದರೂ ಮಗಳ ನಾಮಕರಣಕ್ಕೆ ಬಂದಿದಕ್ಕೆ ಖುಷಿ ಇದೆ. ಈಗ ಎಲ್ಲರೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಟನೆಯಿಂದ ದೂರ ಉಳಿದಿರುವುದಕ್ಕೆ ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೀನಿ, ಇಂಡಿಯಾದಲ್ಲಿ ಇದ್ರೆ ಖಂಡಿತಾ ನಟಿಸುತ್ತಿದ್ದೆ. ಅಪ್‌ ಆಂಡ್ ಡೌನ್ ಮಾಡಿ ಸಿನಿಮಾ ಸೀರಿಯಲ್ ಮಾಡಬಹುದು ಎಂದು ಗಂಡ ಆಯ್ಕ ಕೊಟ್ಟಿದ್ದಾರೆ ಆದರೂ ನಾನೇ ನಿರ್ಧಾರ ತೆಗೆದುಕೊಂಡು ಅಲ್ಲಿ ಇರುವೆ ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅರ್ಚನಾ. 

6 ತಿಂಗಳ ಕಾಲ ವಿದೇಶದಲ್ಲಿ ಬಾಣಂತನ ಮಾಡಿಸಿಕೊಂಡ ಕಿರುತೆರೆ ನಟಿ ಅರ್ಚನಾ; ತಾಯಿಗೆ ಭಾವುಕ ಬೀಳ್ಕೊಡುಗೆ

ವಿದೇಶದಲ್ಲಿ ನೆಲಸಬೇಕು ಅಂತ ಹೇಳಿದಾಗ ಸ್ವಲ್ಪ ಬೇಸರ ಆಯ್ತು. ಫ್ಯಾಮಿಲಿಗೆ ನಾನು ತುಂಬಾನೇ ಕ್ಲೋಸ್ ಆಗಿರುವ ಕಾರಣ ಬೆಳಗ್ಗೆ ಅಮ್ಮನ ಜೊತೆ ಫೋನ್‌ನಲ್ಲಿ ಮಾತನಾಡಿದ ಮೇಲೆ ಕೆಲಸ ಶುರು ಮಾಡುವೆ ಆಮೇಲೆ ಅಣ್ಣ ಅತ್ತಿಗೆ ಜೊತೆ ಮಾತನಾಡುವೆ...ಪದೇ ಪದೇ ಯಾಕೆ ಫೋನ್ ಮಾಡ್ತೀಯಾ ಅಂತ ಅಮ್ಮ ಕೇಳ್ತಾರೆ. ಏನೂ ಮಾಡಲಾಗದು ನಮಗೂ ಒಂದು ಜೀವನ ಮತ್ತು ಜವಾಬ್ದಾರಿ ಇದೆ...ಹೀಗಾಗಿ ಮತ್ತೆ ಅಲ್ಲಿಗೆ ಪ್ರಯಾಣ ಮಾಡಬೇಕು. ಈಗ ಅಭ್ಯಾಸ ಆಗಿದೆ ಆದರೂ ಮುಂದೆ ಒಂದು ದಿನ ಭಾರತಕ್ಕೆ ಬರುವ ಪ್ಲ್ಯಾನ್ ಇದೆ ಎಂದು ಅರ್ಚನಾ ಹೇಳಿದ್ದಾರೆ. 

ಗಂಡಾ ಹೆಣ್ಣಾ? ಸೀಮಂತದ ದಿನವೇ ಮಗುವಿನ ಲಿಂಗ ರಿವೀಲ್ ಮಾಡಿದ ಕಿರುತೆರೆ ನಟಿ ಅರ್ಚನಾ!

ಇಂಡಿಯಾದಲ್ಲಿ ಮನೆ ಸಹಾಯಕ್ಕೆಂದು ಕೆಲಸದವರನ್ನು ಅಯ್ಕೆ ಮಾಡಿಕೊಳ್ಳಬಹುದು ಆದರೆ ವಿಶೇಷದಲ್ಲಿ ದುಬಾರಿಯಾಗಿರುತ್ತದೆ. ವಿದೇಶಕ್ಕೆ ಹೋದ ಮೇಲೆ ನಾನೇ ಅಡುಗೆ ಮಾಡ್ತೀನಿ, ನಾನೇ ಮನೆ ಕೆಲಸ ಮಾಡ್ತೀನಿ.....ಒಂದು ರೀತಿ ಇಂಡಿಪೆಂಡೆಂಟ್‌ ಆಗಿ ಜೀವನ ಮಾಡುತ್ತಿದ್ದೀವಿ. ದೂರ ಹೋದ ಮೇಲೆ ಫ್ಯಾಮಿಲಿ ಕನೆಕ್ಟ್‌ ಬಗ್ಗೆ ಭಯ ಆಗುತ್ತಿದೆ. ನನ್ನ ಮಗಳು ಒಬ್ಬಳೇ ಇರುವುದರಿಂದ ಅಜ್ಜಿ ತಾತ ಅಪ್ಪ ಅಮ್ಮ ಬಾಂಡ್ ಮರೆತು ಬಿಡುತ್ತಾಳೆಂದು ಭಯ ಆಗುತ್ತದೆ. ಇದನ್ನು ಮ್ಯಾನೇಜ್ ಮಾಡುವುದು ಕಷ್ಟ ಅದರೂ ಒಂದು ಬಿಗ್ ಚಾಲೆಂಜ್ ಎಂದಿದ್ದಾರೆ ಅರ್ಚನಾ. 

Latest Videos
Follow Us:
Download App:
  • android
  • ios