Asianet Suvarna News Asianet Suvarna News

Jolly ಡೇ: ಅಗ್ನಿಸಾಕ್ಷಿ ವೈಷ್ಣವಿ ಗೌಡ, ನಟಿ ಅಮ್ಯೂಲ ಲಂಚ್ ಔಟಿಂಗ್

ಹಲವು ದಿನಗಳ ನಂತರ ಸ್ನೇಹಿತರ ಜೊತೆ ಲಂಚ್ ಡೇ Lunch Day ಫೋಟೋ ಹಂಚಿಕೊಂಡ ಸ್ಯಾಂಡಲ್‌ವುಡ್‌, ಕನ್ನಡ ಕಿರುತೆರೆ ಗೊಂಬೆಗಳು....

Kannada actress Amulya lunch date with bigg boss Vaishnavi Gowda vcs
Author
Bangalore, First Published Oct 16, 2021, 3:58 PM IST
  • Facebook
  • Twitter
  • Whatsapp

ಅಗ್ನಿಸಾಕ್ಷಿ (Agnisakshi) ಮೂಲಕ ವೀಕ್ಷಕರ ಮನೆ ಮಗಳಾದ ಬಿಗ್ ಬಾಸ್ ಸೀಸನ್ 8ರ ಗುಳಿ ಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi Gowda) ಸಂದರ್ಶನ, ಯುಟ್ಯೂಬ್ ಚಾನೆಲ್ ಶೂಟಿಂಗ್ ಅಂತೆಲ್ಲಾ ತುಂಬಾನೇ ಬ್ಯುಸಿಯಾಗಿದ್ದಾರೆ. ಹಲವು ದಿನಗಳ ನಂತರ ಆಪ್ತ ಸ್ನೇಹಿತರ ಜೊತೆ ಎಂಜಾಯ್ ಮಾಡಿ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ವೈಷ್ಣವಿಗೆ ಕಾಲೇಜ್‌ ದಿನಗಳಿಂದಲೂ ಸ್ಯಾಂಡಲ್‌ವುಡ್‌ ಕ್ವೀನ್ ಅಮೂಲ್ಯ (Amulya) ಆಪ್ತ ಸ್ನೇಹಿತೆ. ಇಬ್ಬರೂ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಒಟ್ಟಿಗೇ ಊಟ ಮಾಡಿದ್ದಾರೆ. 'Since Forever' ಎಂದು ಬರೆದುಕೊಂಡ ಅಮೂಲ್ಯ ಮತ್ತೊಬ್ಬ ಗೆಳತಿ ಶೆಟ್ಟಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.  ತಾವು ಸೇವಿಸಿರುವ ವೆರೈಟಿ ಊಟಗಳ (Foods) ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

ವೈರಲ್ ವಿಡಿಯೋ: ಫಾರ್ಮ್‌ಹೌಸ್‌ ಮಾವಿನ ಮರ ಹತ್ತಿದ ನಟಿ ಅಮೂಲ್ಯ !

ವೈಟ್‌ ಮ್ಯಾಕ್ಸಿ (White Maxi) ಧರಿಸಿ ಏಂಜಲ್‌ ರೀತಿ ಅಮೂಲ್ಯ ಕಾಣಿಸಿಕೊಂಡರೆ, ಬ್ಲ್ಯಾಕ್ ಸ್ಕರ್ಟ್‌ನಲ್ಲಿ (Black and Black) ವೈಷ್ಣವಿ ಕಂಗೊಳ್ಳಿಸುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಅಮೂಲ್ಯ ಸಿನಿಮಾಗಳಲ್ಲಿ ನಟಿಸಿಲ್ಲ, ಒಂದೊಳ್ಳೆ ಸ್ಕ್ರಿಪ್ಟ್ ಹುಡುಕುತ್ತಿರುವುದಾಗಿ ನಾಲ್ಕು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಅದಲ್ಲದೇ ಅಮೂಲ್ಯ ತಾಯಿ ಆಗುತ್ತಿದ್ದಾರೆ (Pregnant) ಎಂದು  ಆಗಾಗ ಅಲ್ಲಿ ಇಲ್ಲಿ ಗುಸು ಗುಸು ಕೇಳಿ ಬರುತ್ತಿವೆ.  ಒಮ್ಮೆ ಮಾವಿನ ಕಾಯಿ ಕೀಳುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಕ್ಕೆ, ನೆಟ್ಟಿಗರು ಅಮೂಲ್ಯ ತಾಯಿಯಾಗುತ್ತಿದ್ದಾರೆಂದ್ ಭಾವಿಸಿದ್ದರು. ಕಳೆದ ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆ ವೇಳೆ ದರ್ಶನ್ ಜೊತೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಮತಯಾಚಿಸಿ, ರಾಜಕೀಯದಲ್ಲಿಯೂ ಸಕ್ರಿಯವಾಗಿರಲು ಯತ್ನಿಸಿದರು. ರಾಜಕೀಯ ಹಿನ್ನೆಲೆಯುಳ್ಳ ಜಗದೀಶ್ ಅವರನ್ನು ವರಿಸಿದ ಅಮೂಲ್ಯ ಮುಂದೆ ರಾಜಕಾರಣಕ್ಕೂ ಕಾಲಿಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು!

ವೈಷ್ಣವಿ ಸದಾ ಲೈಮ್‌ ಲೈಟ್‌ನಲ್ಲಿರುತ್ತಾರೆ. ತಮ್ಮದೇ ಯುಟ್ಯೂಬ್ ಚಾನೆಲ್ ಲಾಂಚ್ ಮಾಡಿದ ನಂತರ ನಮ್ಮ ಹೇರ್ ಕೇರ್ (Hair care), ವಾಚ್ ಕಲೆಕ್ಷನ್ (Watch Collection), ಬ್ಯಾಗ್‌ನಲ್ಲಿ ಏನಿದೆ, ತಮ್ಮ ಕ್ರಿಸ್ಟ್‌ ಕಲೆಕ್ಷನ್ (Crystal collection) ಮತ್ತು ಸಣ್ಣಗಾಗಲು ಮಾಡಬೇಕಾದ ಯೋಗಗಳನ್ನು (Yoga) ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಿದ್ದಾರೆ. 

ವೈಷ್ಣವಿ ಬಿಗ್ ಬಾಸ್‌ನಲ್ಲಿದ್ದಾಗಲೂ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ವೋಟ್ ಕೇಳಿ ಕೊಂಡಿದ್ದರು. ತಮ್ಮ ಆಪ್ತ ಸ್ನೇಹಿತೆ ಅದ್ಭುತವಾಗಿ ಆಟ ಆಡುತ್ತಿದ್ದಾಳೆ. ಅವರಿಗೆ ವೋಟ್ (Vote) ಮಾಡಿ ಎಂದಿದ್ದರು.  ಬಿಬಿ (Bigg Boss) ಎರಡನೇ ಇನ್ನಿಂಗ್ಸ್ ಆರಂಭವಾಗಲು ಕೆಲವು ದಿನಗಳಿತ್ತು, ಆ ಗ್ಯಾಪ್‌ನಲ್ಲಿಯೇ ಅಮೂಲ್ಯ ಮತ್ತು ವೈಷ್ಣವಿ ತಮ್ಮ ಗುಂಪಿನಲ್ಲಿದ್ದ ಮತ್ತೊಂದು ಸ್ನೇಹಿತೆಯ ಬೇಬಿ ಶವರ್ (Baby Shower) ಆಯೋಜಿಸಿದ್ದರು. ಆಗಲ್ಲೂ ಇದ್ಯಾರಿಗೆ ಶವರ್ ಎಂದು ನೆಟ್ಟಿಗರು ಕಾಲೆಳೆದಿದ್ದರು. ಸದ್ಯ ವೈಷ್ಣವಿ ಕೈಯಲ್ಲಿ ಯಾವ ಪ್ರಾಜೆಕ್ಟ್‌ ಇದೆಯೋ ಗೊತ್ತಿಲ್ಲ ಆದರೆ ಫೋಟೋ ಶೂಟ್‌, ಪ್ರಮೋಷನ್‌ (Promotion) ಅಂತ ಬ್ಯೂಸಿಗಿರುವುದು ಸತ್ಯ.

ಒಟ್ಟಿನಲ್ಲಿ ಸ್ಯಾಂಡಲ್‌ವುಡ್ ಹಾಗೂ ಕನ್ನಡ ಕಿರುತೆರೆಯ ಕೆಲವು ನಟಿಯರು ಗುಂಪು ಆಗಾಗ ಔಟಿಂಗ್ ಹೋಗಿ ಮಜಾ ಮಾಡುತ್ತಲೇ ಇರುತ್ತಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಾವು ಸ್ನೇಹಕ್ಕೂ ಟೈಮ್ ಕೊಡುತ್ತೇವೆ ಎನ್ನುವುದನ್ನು ತೋರಿಸಿರುತ್ತಾರೆ.

 

 
 
 
 
 
 
 
 
 
 
 
 
 
 
 

A post shared by Amulya (@nimmaamulya)

Follow Us:
Download App:
  • android
  • ios