ಕಿರುತೆರೆಯಿಂದ ಓಟಿಟಿ ಹಾರಿದ ಅಮೂಲ್ಯ ಗೌಡ. ಧಾರಾವಾಹಿಯಲ್ಲಿ ಕಾಣಿಸುತ್ತಿಲ್ಲ ಎಂದು ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ. ಹಾಗಿದ್ರೆ ಏನ್ ಮಾಡ್ತಿದ್ದಾರೆ? 

'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡ ನಟಿ ಅಮೂಲ್ಯ ಗೌಡ ಕೆಲವು ತಿಂಗಳುಗಳಿಂದ ಎಲ್ಲಿಯೂ ಕಾಣಿಸುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸುಂದರಿ ಈಗ ಏನು ಮಾಡುತ್ತಿದ್ದಾರೆ ಎಂದು ಫಾಲೋವರ್ಸ್‌ ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಓಟಿಟಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. 

ಅಮೂಲ್ಯ ಮಾತು:

'ನನ್ನರಸಿ ರಾಧೆ ಧಾರಾವಾಹಿಯ ಕೊನೆ ಕ್ಷಣದಲ್ಲಿ ತಂಡಕ್ಕೆ ನಾನು ಸೇರಿದ್ದು ಆದರೂ ವೀಕ್ಷಕರು ತುಂಬಾ ಪ್ರೀತಿ ಕೊಟ್ಟಿದ್ದಾರೆ. ಕಡಿಮೆ ಅವಧಿಯಲ್ಲಿ ಆನ್‌ಸ್ಕ್ರೀನ್‌ ಐಶ್ವರ್ಯ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ನನ್ನರಸಿ ರಾಧೆ ಧಾರಾವಾಹಿ ಮುಕ್ತಾಯವಾಗಿ ಸುಮಾರು 4 ತಿಂಗಳು ಕಳೆದಿದೆ ಆದರೂ ಜನರು ನನ್ನನ್ನು ನೋಡಿದಾಗ ಗುರುತಿಸುತ್ತಾರೆ. ಆನ್‌ಸ್ಕ್ರೀನ್‌ ಪಾತ್ರಕ್ಕೆ ಜನರು ತುಂಬಾ ಬೇಗನೆ ಕನೆಕ್ಟ್‌ ಆಗುತ್ತಾರೆ ಅನ್ನೋದು ಖುಷಿ ವಿಚಾರ. ಆನ್‌ಸ್ಕೀನ್‌ ಪಾತ್ರ ಜನರಿಗೆ ಇಷ್ಟ ಆಗುವುದು ಅದರ ಮೂಲಕ ನಮ್ಮನ್ನು ಗುರುತಿಸಿವುದು ಖುಷಿ ಕೊಡುತ್ತದೆ' ಎಂದು ಅಮೂಲ್ಯ ಗೌಡ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ಎರಡು ವರ್ಷಗಳ ನಂತರ ನನ್ನರಸಿ ರಾಧೆ ಧಾರಾವಾಹಿ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದು. ಒಳ್ಳೆ ಅವಕಾಶ ಮತ್ತು ಹೆಸರು ಮಾಡಲು ಕಾಯುತ್ತಿರುವಾಗ ನನಗೆ ಸಿಕ್ಕಿದ್ದು ಐಶ್ವರ್ಯ ಪಾತ್ರ. ಅಭಿನಯಕ್ಕೆ ಅದ್ಭುತ ಅವಕಾವಿದ್ದ ಕಾರಣ ಮಿಸ್ ಮಾಡಲು ನನಗೆ ಇಷ್ಟವಿರಲಿಲ್ಲ ಹೀಗಾಗಿ ಪಾತ್ರ ಒಪ್ಪಿಕೊಂಡೆ. ನನ್ನ ವೃತ್ತಿ ಜೀವನದಲ್ಲಿ ಯಾವ ಪಾತ್ರವನ್ನು ನನಗೆ ರಿಜೆಕ್ಟ್‌ ಮಾಡಲು ಇಷ್ಟವಿಲ್ಲ. ಅಶ್ವಿನಿ ಕ್ಯಾರೆಕ್ಟರ್‌ ತುಂಬಾನೇ ಇಷ್ಟವಾಯ್ತು. ಒಂದು ಪ್ರಯತ್ನ ಮಾಡಲು ಆಸೆ ಇತ್ತು ಏಕೆಂದರೆ ನನ್ನ ಆಕ್ಟಿಂಗ್ ವೃತ್ತಿ ಜೀವನಕ್ಕೆ ಸಹಾಯ ಮಾಡುತ್ತದೆ.' ಎಂದು ಹೇಳಿದ್ದಾರೆ. 

'ಧಾರಾವಾಹಿ ಮುಗಿಸಿ ನಾನು ಈ ಎಲ್ಲಾದರೂ ಕಾಣಿಸಿಕೊಂಡರೂ ಜನರು ನನ್ನನ್ನು ಅಶ್ಚಿನಿ ಎಂದು ಗುರುತಿಸುತ್ತಾರೆ. ಪಾತ್ರ ಡಿಮ್ಯಾಂಡ್ ಮಾಡಿದ ರೀತಿ ಅಭಿನಯಿಸಿರುವ ಎಂದು ಜನರು ಮಾತನಾಡುತ್ತಾರೆ. ಯಾರೊಬ್ಬರೂ ನೆಗೆಟಿವ್ ಆಗಿ ಕಾಮೆಂಟ್ ಮಾಡಿಲ್ಲ, ಈಕೆಯಿಂದು ಒಂದು ಕುಟುಂಬ ಹಾಳಾಗಿದೆ ಎಂದು ಹೇಳಿಲ್ಲ ಅದೇ ಖುಷಿ ನನಗೆ. ಇದುವರೆಗೂ ಮನಸ್ಸಿಗೆ ನೋವಾಗುವಂತ ನೆಗೆಟಿವ್ ಕಾಮೆಂಟ್ ಯಾರೂ ಮಾಡಿಲ್ಲ. ಹೀಗಾಗಿ ಈ ಪಾತ್ರ ನನ್ನ ಜೀವನದಲ್ಲಿ ತುಂಬಾನೇ ಸ್ಪೆಷಲ್' ಎಂದಿದ್ದಾರೆ.

ತಂಗಿ ಸಿಕ್ಕಿದ ಖುಷಿಯಲ್ಲಿ ಅಗಸ್ತ್ಯ; ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇವರೇ ನೋಡಿ

'ನನ್ನರಸಿ ರಾಧೆ ಧಾರಾವಾಹಿ ಮುಗಿದ ನಂತರ ಮುಂದೆ ಏನು ಅನ್ನೋ ಪ್ರಶ್ನೆ ಇತ್ತು. ಧಾರಾವಾಹಿ ಮುಗಿಯುತ್ತಿರುವ ವಿಚಾರ ಕೇಳಿ ಕೊಂಡ ಬೇಸರವಾಗಿತ್ತು. ಆದರೆ ಒಂದ ಬಾಗಿಲು ಮುಚ್ಚಿದ್ದರೆ ಮತ್ತೊಂದು ಅವಕಾಶ ತೆರೆಯುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಆಗ ನನಗೆ ಸಿಕ್ಕಿದ್ದು ಇದೇ ಓಟಿಟಿ ಪ್ರಾಜೆಕ್ಟ್‌. ಈ ಸಿನಿಮಾದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವೆ. ನಾನ್‌ ಸ್ಟಾಪ್ ಸಿನಿಮಾ ಚಿತ್ರೀಕರಣ ಮಾಡುತ್ತಿರುವೆ. ಒಂದೊಳ್ಳೆ ಅನುಭವ ಇದು. ಈ ಸಿನಿಮಾದಲ್ಲಿ ಚಿತ್ರರಂಗದ ದಿಗ್ಗಜರಿದ್ದಾರೆ. ಖಂಡಿತಾ ಸಿನಿಮಾ ಅದ್ಭುತವಾಗಿ ಮೂಡಿ ಬರಲಿದೆ' ಎಂದು ಅಮೂಲ್ಯ ಹೇಳಿದ್ದಾರೆ.