ಕನ್ನಡ ಕಿರುತೆರೆ ಜನಪ್ರಿಯ ನಟ ವಿನಯ್ ಗೌಡ ಈ ಲಾಕ್‌ಡೌನ್‌ ಸಮಯವನ್ನು ತಮ್ಮ ಹುಟ್ಟೂರಿನಲ್ಲಿ ಕುಟುಂಬಸ್ಥರ ಜೊತೆ  ಕಳೆಯುತ್ತಿದ್ದಾರೆ. ಪತ್ನಿ ಅಕ್ಷತಾ, ಪುತ್ರ ರಿಷಿ ಜೊತೆ ಚಿಕ್ಕಮಗಳೂರಿನ ಬೆಟ್ಟದ ಮನೆ ಪ್ರಕೃತಿ ಸ್ಥಳಕ್ಕೆ ಭೇಟಿ ನೀಡಿದ ವಿಡಿಯೋ ಹಾಗೂ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ವಿನಯ್ ಪುತ್ರನ ಜೊತೆ ಮಾಡಿರುವ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಅಪ್ಪ-ಮಗ ಅಂದ್ರೆ ಹೀಗೆ ಇರಬೇಕು ಎಂದೆ ಕಾಮೆಂಟ್ ಮಾಡುತ್ತಿದ್ದಾರೆ. ಧಾರಾವಾಹಿ ಹಾಗೂ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ. ನದಿಯಲ್ಲಿ ಮೀನುಗಳನ್ನು ಹಿಡಿಯುತ್ತಾ ಜಾಲಿ ಟೈಂ ಕಳೆಯುತ್ತಿದ್ದಾರೆ. 

ಕೊರೋನಾ ಪಾಸಿಟಿವ್‌ ಎಂದು ಧಾರಾವಾಹಿಯಿಂದ ಹೊರ ನಡೆದ ನಟ ವಿನಯ್ ಗೌಡ! 

ಕೆಲವು ತಿಂಗಳ ಹಿಂದೆ ಕುಟುಂಬಸ್ಥರಿಗೆ ಕೊರೋನಾ ಸೋಂಕು ತಗುಲಿದ ಕಾರಣ ವಿನಯ್ ಕನ್ನಡ ಐತಿಹಾಸಿಕ ಧಾರಾವಾಹಿ ಶ್ರೀ ಯಡಿಯೂರು ಸಿದ್ದಲಿಂಗೇಶ್ವರದಿಂದ ಹೊರ ನಡೆದಿದ್ದಾರೆ.  ಆದರೆ ತೆಲುಗು ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿವೊಂದರಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.