'ಹೆಂಡ್ತಿಗೆ ಹೊಡೆದ್ರೂ ಜೈ, ಕೊಲೆ ಮಾಡಿದ್ರೂ ಸೈ..' ದರ್ಶನ್ ಫ್ಯಾನ್ಸ್‌ಗೆ ಬುದ್ದಿ ಹೇಳೋರು ಯಾರು?
darshan thoogudeepa Fans ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ಅಭಿಮಾನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಿದ್ದಾರೆ. ಹಾಗಂತ ದರ್ಶನ್ ಪಾಲಿಗೆ ವಿವಾದಗಳು ಹೊಸದೇನಲ್ಲ. ಇನ್ನು ದರ್ಶನ್ ಏನೇ ಮಾಡಿದ್ರೂ, ಆತ ಮಾಡಿದ್ದೇ ಸರಿ ಎನ್ನುವ
ಬೆಂಗಳೂರು (ಜೂ.11): ಹೆಂಡ್ತಿಗೆ ಹಿಗ್ಗಾಮುಗ್ಗಾ ಹೊಡ್ದು ಜೈಲು ಸೇರಿದ... ಅಭಿಮಾನಿಗಳು 'ನಮ್ಮಣ್ಣ.. ನಮ್ಮಣ್ಣ.. ಜೈ ಜೈ..' ಅಂತಾ ಕೂಗಿದ್ರು. ಕುಡಿದು ರಂಪ ರಾದ್ಧಾಂತ ಮಾಡಿದ್ರು... 'ನಮ್ಮಣ್ಣ ಏನ್ ಮಾಡಿದ್ರೂ ಸೂಪರ್, ಅಷ್ಟಕ್ಕೂ ಯಾರ್ ಕೊಲೆನೂ ಮಾಡಿಲ್ವಲ್ಲ..' ಅಂದ್ರು ಅಭಿಮಾನಿಗಳು. ಈಗ ಅವರ ನೆಚ್ಚಿನ ನಾಯಕ ಕೊಲೆ ಅರೋಪದಲ್ಲಿ ಪೊಲೀಸ್ ಕಸ್ಟಡಿಗೆ ಸೇರಿದ್ದಾನೆ.. ಹಾಗಿದ್ರೂ ಆತನ ಅಭಿಮಾನಿಗಳು, 'ತಪ್ಪು ಮಾಡಿದ್ದಕ್ಕೆ ನಮ್ಮಣ್ಣ ಶಿಕ್ಷೆ ಕೊಟ್ಟಿದ್ದಾರಷ್ಟೇ..' ಅಂತಾ ಹೇಳ್ತಿದ್ದಾರೆ. ಇದು ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆರಳಿರುವ ನಟನ ಮುಂದಿನ ಜೀವನದ ಬಗ್ಗೆ ಪ್ರಶ್ನಾರ್ಥಕ ಚಿನ್ಹೆಗಳು ಎದ್ದಿವೆ. ಯೆಸ್ ದರ್ಶನ್ ಮಾಡೊರೋದು ದೊಡ್ಡ ಅಪರಾಧ. ಹಾಗಂತ ಆತ ಈಗ್ಲೇ ಜೈಲುವಾಸಕ್ಕೆ ಹೋಗ್ತಾನಾ ಅಂದ್ರೆ ಇಲ್ಲ. ದುಡ್ಡಿರುವ ಮಂದಿ ಕೇಸ್‌ಅನ್ನು ಹೇಗೆ ಬೇಕಾದ್ರೂ ತಿರುಗಿಸಿವ ಶಕ್ತಿ ಇರುವ ಇಂಥ ವ್ಯಕ್ತಿಗಳನ್ನು ಜೈಲು ಪಾಲು ಮಾಡೋದು ಸುಲಭವೂ ಅಲ್ಲ. ಆದರೆ, ಇಲ್ಲಿರುವ ಪ್ರಶ್ನೆ ಏನೆಂದರೆ, ಆತನಿಗಿರುವ ಹುಚ್ಚು ಅಭಿಮಾನಿಗಳ ಬಗ್ಗೆ.
ಅಭಿಮಾನ ಒಳ್ಳೆಯದು, ಸಿನಿಮಾ ತಾರೆಯರಿಗೆ ಅಭಿಮಾನಿಗಳಿಲ್ಲದೆ ಜೀವನವೇ ಇಲ್ಲ. ಆದರೆ, ತನ್ನ ಹಿಂದೆ ಅಭಿಮಾನಿಗಳಿದ್ದಾರೆ ಎನ್ನುವ ಕಾರಣಕ್ಕೆ ಮಾಡಬಾರದನ್ನೆಲ್ಲಾ ಮಾಡೋಕೆ ಇಳಿದ್ರೆ, ಇಂಥ ಕೇಸ್‌ಗಳಾಗುತ್ತಿದೆ. ಇಷ್ಟೆಲ್ಲಾ ಆಗಿದ್ದರೂ ದರ್ಶನ್ ಅಭಿಮಾನಿಗಳು ಮಾತ್ರ ತಮ್ಮ ಬಾಸ್, ಚಿನ್ನ ರನ್ನ ಅನ್ನೋಕೆ ಶುರು ಮಾಡಿದ್ದಾರೆ. ಅದಕ್ಕೆ ಮರ್ಡರ್ ಕೇಸ್ ವರದಿಯಾದ ಬಳಿಕ ಬಂದಿರುವ ಅವರ ಅಭಿಮಾನಿಗಳ ಕಾಮೆಂಟ್ ಸಾಕ್ಷಿ.
'ನಮ್ಮ ಬಾಸ್ ಸುಮ್ಮನೆ ಕೊಲೆ ಮಾಡಿರೋದಿಲ್ಲ. ಅದಕ್ಕೆ ಕಾರಣ ಇರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೇ. ನೀವು ನಮ್ ಬಾಸ್ ದು ಏನೂ ಕಿತ್ತುಕೊಳ್ಳೋಕೆ ಆಗಲ್ಲ..' ಎಂದು ನಾಗರಾಜ್ ದಚ್ಚು ಅವರು ಪೋಸ್ಟ್ ಮಾಡಿದ್ದಾರೆ.
ಇನ್ನು ಕೊಪ್ಪಳ ಮೂಲದ ಅಭಿಮಾನಿಯೊಬ್ಬ, 'ನಮ್ಮ ಬಾಸ್ ಯಾರಿಗೂ ಕಮ್ಮಿ ಇಲ್ಲ. ಕೊಲೆಯ ಪ್ರಕರಣದಲ್ಲಿ ದೊರಕಿದ ನಮ್ಮ ಬಾಸ್ ಇಲ್ಲಿಯವರೆಗೂ ಯಾವ ಹೀರೋನೂ ಕೊಲೆ ಕೇಸ್‌ಅಲ್ಲಿ ಅರೆಸ್ಟ್ ಆಗಿಲ್ಲ. ನಮ್ಮ ಬಾಸ್ ಮೊದಲು. ಜೈ ಡಿ ಬಾಸ್, ಜೈ ಡಿ ಬಾಸ್. ನಮ್ಮ ಬಾಸ್ ಏನೇ ಮಾಡಿದರೂ ನಮ್ಮ ಹೆಮ್ಮೆ. ನಮ್ಮ ಬಾಸ್ ಕನ್ನಡ ಚಿತ್ರರಂಗದ ಆಸ್ತಿ' ಎಂದು ಬರೆದುಕೊಂಡಿದ್ದಾರೆ.
ಇನ್ನು ದರ್ಶನ್ ಅವರನ್ನ ಪೊಲೀಸರು ಬಂಧಿಸಿ ಪೊಲೀಸ್ ಸ್ಟೇಷನ್‌ಗೆ ಹಾಗೂ ಕೋರ್ಟ್‌ಗೆ ಕರೆದುಕೊಂಡು ಬರುತ್ತಿದ್ದರೂ, ಅವರ ಫ್ಯಾನ್ಸ್ ಮಾತ್ರ ನಟನ ಹೊಸ ಚಿತ್ರ ಯಾವುದೋ ರಿಲೀಸ್ ಆಗ್ತಿದೆ ಎನ್ನುವಂತೆ ಶಿಳ್ಳೆ ಹಾಕಿ ಸಂಭ್ರಮಿಸಿದ್ದರು. ತಮ್ಮ ನಟ ಒಬ್ಬ ಅಮಾಯಕನ ಪ್ರಾಣ ತೆಗೆಯುವಲ್ಲಿ ಪಾತ್ರ ವಹಿಸಿದ್ದಾನೆ ಎನ್ನುವ ಸಣ್ಣ ಹಿಂಜರಿಕೆ ಕೂಡ ಅವರ ಮುಖದಲ್ಲಿ ಕಂಡಿರಲಿಲ್ಲ. ಇನ್ನು ದರ್ಶನ್ ಅವರ ಬಾಡಿಗಾರ್ಡ್‌ಗಳು ಕೂಡ ನಮ್ಮಣ್ಣ ಅಮಾಯಕ, ಅವರನ್ನ ಬಿಟ್ಟುಬಿಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Darshan Arrest: ಜಡ್ಜ್ ಮುಂದೆ ಕಣ್ಣೀರಿಟ್ಟ ದರ್ಶನ್, ಪವಿತ್ರಾ ಗೌಡ!
ಯೆಸ್ ದರ್ಶನ್ ಒಳ್ಳೆಯ ಕೆಲಸ ಮಾಡಿಲ್ಲ ಎಂದಲ್ಲ. ಆದರೆ, ಒಳ್ಳೆಯ ಕೆಲಸ ಮಾಡೋದು, ಕೆಟ್ಟ ಕೆಲಸಕ್ಕೆ ಸರ್ಟಿಫಿಕೇಟ್ ಆಗಿ ಬಳಸಿಕೊಳ್ಳಬಾರದು ಅನ್ನೋದು ಎಲ್ಲರ ಆಶಯ. ಈ ಹಿಂದೆ ಮಾಧ್ಯಮದವರನ್ನೇ ಬಾಯಿಗೆ ಬಂದ ಹಾಗೆ ಬೈದಿದ್ದ ನಟ ದರ್ಶನ್, ವರ್ಷದಿಂದ ವರ್ಷಕ್ಕೆ ತಮ್ಮ ರೇಂಜ್‌ಅನ್ನು ಕುಗ್ಗಿಸಿಕೊಳ್ಳುತ್ತಿದ್ದಾರೆ.
ಯುವ ರಾಜ್‌ಕುಮಾರ್-ಸಪ್ತಮಿ ಗೌಡ ರೆಡ್‌ಹ್ಯಾಂಡ್ ಆಗಿ ಹೋಟೆಲ್ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ