ರೋಡಲ್ಲಿ ಕಿರುಚಾಡಿಕೊಂಡು ಓಡಾಡಿದರೆ ಕಲ್ಲು ಹೊಡೀತಾರೆ ಜನರು: ವಿನಯ್ ಗೌಡ
ಸೋಷಿಯಲ್ ಮೀಡಿಯಾದಿಂದ ಮಾನಸಿಕ ನೆಮ್ಮದಿ ಎಷ್ಟು ಹಾಳಾಗುತ್ತಿದೆ ಎಂದು ವಿವರಿಸಿದ ವಿನಯ್ ಗೌಡ.
ಕನ್ನಡ ಕಿರುತೆರೆಯ ಮಹಾದೇವ ವಿನಯ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ ನಂತರ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ. ವಿನಯ್ ಡಿಫರೆಂಟ್ ಆಲೋಚನೆಗಳನ್ನು ಮೆಚ್ಚಿಕೊಂಡಿದ್ದಾರೆ. ರಿಯಾಲಿಟಿ ಶೋ ಮುಗಿದ ಮೇಲೆ ಮಾನಸಿಕ ನೆಮ್ಮದಿ ಹೇಗಿದೆ, ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಎಷ್ಟು ಪರಿಣಾಮ ಬೀರುತ್ತದೆ ಎಂದು ವಿನಯ್ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಹೊರ ಬಂದ್ಮೇಲೆ ಹೆಣ್ಣು ಮಕ್ಕಳು ಗಂಡು ಮಕ್ಕಳು ಅನ್ನೋ ವ್ಯತ್ಯಾಸ ಇದೆ ಎಂದು ತಿಳಿದು ಬಂತು. ಚಿಕ್ಕ ವಯಸ್ಸಿನಿಂದ ನಾನು ಹಾಗೆ ಬೆಳೆದು ಬಂದಿಲ್ಲ ನನಗೆ ಎಲ್ಲರೂ ಒಂದೆ. ಬಿಗ್ ಬಾಸ್ ಒಂದು ಶೋ ಅದರಲ್ಲಿ ಆ ವರ್ಷ ಹೇಗಿರುತ್ತಿವೆ ಅದೇ ವ್ಯಕ್ತಿತ್ವ...ಲೈಫ್ ಲಾಂಗ್ ಹಾಗೆ ಇರ್ತೀವಿ ಅನ್ನೋದು ಸುಳ್ಳು. ನಿನಗೆ ಇಷ್ಟೋಂದು ಅಗ್ರೆಷನ್‌ನಾ ಅಥವಾ ಕೋಪನಾ ಎಂದು ಹೊರಗಡೆ ಅದೆಷ್ಟೋ ಮಂದಿ ಆಶ್ಚರ್ಯದಿಂದ ಕೇಳುತ್ತಿದ್ದರು ಆದರೆ ಎಲ್ಲೂ ತೋರಿಸಿಕೊಳ್ಳಲು ಅವಕಾಶ ಇರಲಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ಕೋಪ ಬರಲು ಕಾರಣವಿತ್ತು ಕೋಪ ಬರಿಸುವಂತ ವ್ಯಕ್ತಿಗಳು ಇದ್ದರು. ಹೊರಗಡೆ ನಾನು ಆ ರೀತಿ ಕೋಪ ಮಾಡಿದರೆ ರೋಡಲ್ಲಿ ಕಿರುಚಾಡಿಕೊಂಡು ಓಡಾಡಿದರೆ ಕಲ್ಲು ಹೊಡೆಯುತ್ತಾರೆ ಜನರು ಎಂದು ರಾಪಿಡ್ ರಶ್ಮಿ ಯುಟ್ಯೂಬ್ ಸಂದರ್ಶನದಲ್ಲಿ ವಿನಯ್ ಮಾತನಾಡಿದ್ದಾರೆ.
ಶಿರಡಿ ಸಾಯಿ ಬಾಬ ಬಳಿ ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬರ್ತಾರೆ: ನಂಬಿಕೆಗಳ ಬಗ್ಗೆ ಇಂದ್ರಜಿತ್ ಲಂಕೇಶ್
ನನಗೆ 43 ವರ್ಷ...ನಾನು ಸ್ಕೂಲ್‌ನಲ್ಲಿ ಇದ್ದಾಗ ಡಿಪ್ರೆಶನ್ ಅನ್ನೋದು ಇರಲಿಲ್ಲ. ಆದರೆ ಈಗ ಡಿಪ್ರೆಶನ್ ಅನ್ನೋ ತುಂಬಾ ಕಾಮನ್ ಆಗಿಬಿಟ್ಟಿದೆ. ನಮ್ಮ ಸುತ್ತ ಮುತ್ತ ಇರುವ ಜನರಿಂದ ಬರುವ ಪ್ರೆಶರ್ ಡಿಪ್ರೆಶನ್‌ಗೆ ಜಾರುವಂತೆ ಮಾಡುತ್ತಿದೆ. ಈಗಿನ ಜನರೇಷನ್‌ನಲ್ಲಿ ಹೆಣ್ಣು ಮಕ್ಕಳು ವೀಕ್ ಅಥವಾ ಗಂಡು ಮಕ್ಕಳು ವೀಕ್ ಅಂತ ಹೇಳಲು ಆಗಲ್ಲ....ಗಂಡು ಮಕ್ಕಳು ಮಾಡುವ ಪ್ರತಿಯೊಂದು ಕೆಲಸವನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ ಎಂದು ವಿನಯ್ ಹೇಳಿದ್ದಾರೆ.
ಬೇಗ ಮದ್ವೆ ಆಗಿ ಸಿನಿಮಾ ಬಿಡ್ಬೇಕು ಅಂದುಕೊಂಡಿದ್ದೆ ಆದರೆ.....: ಆಶಿಕಾ ರಂಗನಾಥ್ ಶಾಕಿಂಗ್ ಹೇಳಿಕೆ ವೈರಲ್
ಈಗ ಅನೇಕರು ಹಣ ಕೊಟ್ಟು ಪ್ರಮೋಷನ್ ಮಾಡುತ್ತಿದ್ದಾರೆ. ಆ ಪ್ರಮೋಷನ್‌ನಲ್ಲಿ ಆ ವ್ಯಕ್ತಿಯನ್ನು ಮೇಲೆ ತರವ ಕೆಲಸ ಮಾಡಬೇಕು ಅದನ್ನು ಬಿಟ್ಟು ಅಕ್ಕ ಪಕ್ಕದವರು ಮಾಡುತ್ತಿರುವ ತಪ್ಪುಗಳನ್ನು ಎತ್ತಬಾರದು. ಬಿಗ್ ಬಾಸ್ ಮುಗಿದ 15 ದಿನಗಳವರೆಗೂ ಆ ವಾಯ್ಸ್ ಇತ್ತು..ಈಗ ಹಣ ಹೋಗಿಲ್ಲ ಅನ್ನೋ ಕಾರಣಕ್ಕೆ ಆ ಪೇಜ್‌ಗಳು ತುಂಬಾನೇ ಸೈಲೆಂಟ್ ಆಗಿಬಿಟ್ಟಿದೆ. ಫೇಕ್ ಪ್ರೊಫೈಲ್ ಫೇಕ್ ಫ್ಯಾನ್ಸ್ ಸರಿ ಅಲ್ಲ. 10 ಜನ ಏನಾದರೂ ಹೇಳಿಬಿಟ್ಟರೆ 11ನೇ ವ್ಯಕ್ತಿ ಅದನ್ನು ನಂಬುತ್ತಾರೆ. ನನಗೆ ಸಣ್ಣ ಗುಂಪಿನ ಫ್ಯಾನ್ಸ್ ಇರುವುದು...ನನ್ನ ಆಲೋಚನೆಗಳು ನನ್ನನ್ನು ಅರ್ಥ ಮಾಡಿಕೊಂಡಿರುವವರು ಮಾತ್ರ ನನಗೆ ಫ್ಯಾನ್ಸ್ ಎಂದಿದ್ದಾರೆ ವಿನಯ್.