ಶಿರಡಿ ಸಾಯಿ ಬಾಬ ಬಳಿ ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬರ್ತಾರೆ: ನಂಬಿಕೆಗಳ ಬಗ್ಗೆ ಇಂದ್ರಜಿತ್ ಲಂಕೇಶ್
ದೇವರಲ್ಲಿ ನಂಬಿಕೆ ಇದ್ಯಾ ಎಂದು ರ್ಯಾಪಿಡ್ ರಶ್ಮಿ ಪ್ರಶ್ನೆ ಮಾಡಿದಾಗ ಇಂದ್ರಜಿತ್ ಲಂಕೇಶ್ ಕೊಟ್ಟ ಉತ್ತರವಿದು...
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮೊದಲ ಸಲ ತಮ್ಮ ಮಗನನ್ನು ಸಿನಿಮಾ ಪ್ರಪಂಚಕ್ಕೆ ಪರಿಚಯಿಸಿಕೊಡುತ್ತಿದ್ದಾರೆ.
ಖಂಡಿತ ನಾನು ದೇವರನ್ನು ನಂಬುತ್ತೀನಿ..ಅಲ್ಲಿ ಒಬ್ಬ ಇದ್ದಾನೆ ಎಲ್ಲರನ್ನು ಕಂಟ್ರೋಲ್ ಮಾಡ್ತಾರೆ..ಪ್ರತಿಯೊಬ್ಬರಿಗೂ ನರೇಷನ್ ಮಾಡ್ತಿದ್ದಾನೆ.
ನಾನು ಲೀವಿಂಗ್ ಗಾಡ್‌ಗಳ ಮೇಲೆ ಹೆಚ್ಚಿಗೆ ನಂಬಿಕೆ ಇದೆ. ಶಿರಡಿ ಸಾಯಿಬಾಬ ಮತ್ತು ಸಿದ್ದಗಂಗಾ ಸ್ವಾಮೀಜಿ ಅವರಲ್ಲಿ ದೇವರನ್ನು ಖಂಡಿರುವವನು ನಾನು.
ಸಿದ್ಧ ಗಂಗಾ ಸ್ವಾಮಿಗಳು ಹಲವರಿಗೆ ಒಳ್ಳೆಯದನ್ನು ಮಾಡಿದ್ದಾರೆ. ಶಿರಡಿ ಸಾಯಿ ಬಾಬ ಅತ್ಯಂತ ಸೆಕ್ಯೂಲರ್ ದೇವರು. ಆತನ ಬಳಿ ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ಗಳು ಬರ್ತಾರೆ.
ಏನೋ ಶಕ್ತಿ ಇದೆ ಅದರಿಂದ ಒಳ್ಳೆಯದಾಗುತ್ತಿದೆ ಎಂದು ನಂಬುವವನು ನಾನು. ನಾನು ಒಳ್ಳೆಯದನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂದು ನಂಬಿರುವವನ್ನು ನಾನು. ಕರ್ಮವನ್ನು ನಂಬುತ್ತೀನಿ.
ನಾನು ಎಂದೂ ಜೀವನನ್ನು ಪ್ರಶ್ನೆ ಮಾಡಿಲ್ಲ ಮಾಡುವ ಪರಿಸ್ಥಿತಿ ಬಂದಿಲ್ಲ. ಏಕೆಂದರೆ ನಾವು ಪರಿಜ್ಞಾನ ಇಟ್ಕೊಂಡು ಕೆಲಸ ಮಾಡ್ತೀನಿ. ಒಳ್ಳೆಯದು ಆದಾಗ ಖುಷಿ ಪಟ್ಟಿದ್ದೀನಿ.