ನಟಿಯರು ಹೂಂ ಅಂದ್ರೆ ಮಂಚಕ್ಕೂ ಕರೀತಾರೆ ಮತ್ತು... ಸಿನಿ ಇಂಡಸ್ಟ್ರಿಯ ಅನುಭವ ಹೀಗೆ ಹೇಳೋದಾ ನಟಿ ಕಾಮ್ಯಾ?
ಸಿನಿಮಾ ನಟಿಯರು ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಭಯಾನಕ ಘಟನೆಗಳನ್ನು ವಿವರಿಸುತ್ತಿದ್ದರೆ, ಇತ್ತ ಕಿರುತೆರೆ ನಟಿ ಕಾಮ್ಯಾ ಪಂಜಾಬಿ ಹೇಳ್ತಿರೋದೇ ಬೇರೆ. ಅವರು ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಮಲಯಾಳಂ ಮನರಂಜನಾ ಉದ್ಯಮದಲ್ಲಿನ ಕಾಸ್ಟಿಂಗ್ ಕೌಚ್, ಲೈಂಗಿಕ ದೌರ್ಜನ್ಯದ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಇದು ಮಾಲಿವುಡ್ ಮಾತ್ರವಲ್ಲದೇ ಸಂಪೂರ್ಣ ಸಿನಿ ಇಂಡಸ್ಟ್ರಿಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿನ ಪುರುಷರು ತಮ್ಮನ್ನು ಹೇಗೆ ಬಳಸಿಕೊಂಡರು, ಬಳಸಿಕೊಳ್ಳಲು ಟ್ರೈ ಮಾಡಿದರು, ಲೈಂಗಿಕ ಆಸೆ ವ್ಯಕ್ತಪಡಿಸಿದರು, ಮಂಚಕ್ಕೆ ಕರೆದರು, ಮೈ-ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು... ಹೀಗೆ ನಟಿಯರ ದಂಡೇ ತಮಗಾಗಿರುವ ಅನ್ಯಾಯದ ಕುರಿತು ನಟಿಯರು ಹೇಮಾ ಸಮಿತಿಯ ಮುಂದೆ ದಾಖಲಿಸಿದ್ದಾರೆ. ಈ ಪೈಕಿ ಹಲವರು ತಮಗೆ ದೌರ್ಜನ್ಯ ಮಾಡಿದವರ ಹೆಸರುಗಳನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಅಂಥವರು ಇದಾಗಲೇ ತಲೆದಂಡ ಕೂಡ ಅನುಭವಿಸಿದ್ದಾರೆ.
ಇದರ ನಡುವೆಯೇ, ಇದೀಗ ಖ್ಯಾತ ನಟಿ ಕಾಮ್ಯಾ ಪಂಜಾಬಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಅಷ್ಟಕ್ಕೂ ನಟಿ ಕಾಮ್ಯಾ ಕಿರುತೆರೆ ಇಂಡಸ್ಟ್ರಿಯ ಬಗ್ಗೆ ಮಾತನಾಡುತ್ತಾ, ಅದರ ಬಗ್ಗೆ ಪಾಸಿಟಿವ್ ಉತ್ತರ ಕೊಟ್ಟಿದ್ದಾರೆ. ಕಿರುತೆರೆ ಉದ್ಯಮದಲ್ಲಿ ಲೈಂಗಿಕ ದೌರ್ಜನ್ಯ ನಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಲಯಾಳಂ ಮನರಂಜನಾ ಉದ್ಯಮದಲ್ಲಿ ದುಷ್ಕೃತ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ಕೊಟ್ಟಿದ್ದಾರೆ. ಆದರೆ ಸಿನಿ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಹೇಳಿಕೆ ನೀಡಿರುವ ಅವರು, ನಟಿಯರು ಬಯಸಿದರೆ ಮಾತ್ರ ಇಂಥದ್ದೆಲ್ಲಾ ಮಾಡುವ ಧೈರ್ಯ ಅವರಿಗೆ ಬರುತ್ತದೆ ಎನ್ನುವ ಮೂಲಕ, ತಮಗೆ ಅವಕಾಶ ದಕ್ಕಿಸಿಕೊಳ್ಳಲು ನಟಿಯರು ಮುಂದಾದರೆ ಮಾತ್ರ ಇವೆಲ್ಲಾ ಸಾಧ್ಯ ಎಂಬರ್ಥದಲ್ಲಿ ಮಾತನಾಡಿದ್ದಾರೆ!
ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ... ಆಮೇಲೆ... ಕಹಿ ಅನುಭವ ಬಿಚ್ಚಿಟ್ಟ ಅನಿಮಲ್ ನಟ!
ಒಳ್ಳೆಯ ಪಾತ್ರ ನೀಡುವುದಾಗಿ ಮಂಚಕ್ಕೆ ಕರೆಯುವ ಸ್ವಭಾವ ಕಿರುತೆರೆಯಲ್ಲಿ ಇಲ್ಲ. ಸಿನಿ ಉದ್ಯಮದಲ್ಲಿ ಹಲವರಿಗೆ ಈ ರೀತಿಯ ಅನುಭವಗಳು ಆಗಿವೆ. ಕೆಲವು ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿ ಇರುವವರು ಇಂಥ ಕೆಟ್ಟ ಮನೋಭಾವವನ್ನು ಹೊಂದಿರುವುದಿಲ್ಲ ಎಂದೇನೂ ಅಲ್ಲ. ಹುಡುಗಿಯರ ಹುಚ್ಚು ಇರುವ ಹಲವರನ್ನು ನಾನು ಸಿನಿ ಇಂಡಸ್ಟ್ರಿಯಲ್ಲಿ ಕೂಡ ಕಂಡಿದ್ದೇನೆ. ಆದರೆ ನನಗನಿಸುವ ಮಟ್ಟಿಗೆ ಅವರು ಯಾರನ್ನೂ ಒತ್ತಾಯಿಸುವುದಿಲ್ಲ. ನಟಿಯರು ಅನುಮತಿ ಕೊಟ್ಟರಷ್ಟೇ ಮುಂದೆ ಹೋಗುತ್ತಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕಿರುತೆರೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವ ನಟಿ, ಕಿರುತೆರೆಯು ಶುದ್ಧವಾಗಿದೆ. ಇದು ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಇಲ್ಲಿ ಯಾವುದೇ ರೀತಿಯ ಕೊಳಕು ಇಲ್ಲ, ಯಾವುದೇ ಕಾಸ್ಟಿಂಗ್ ಕೌಚ್ ಇಲ್ಲ. ಈ ಹಿಂದೆ ಇಲ್ಲಿಯೂ ಕೆಲವು ಘಟನೆಗಳ ಬಗ್ಗೆ ನಾನು ಕೇಳಿದ್ದು ಇದೆ. ಹಿಂದೆ ಏನಾಗಿತ್ತು ಎನ್ನುವುದು ನನಗೆ ತಿಳಿದಿಲ್ಲ, ಆದರೆ ಈಗ ಅದು ತುಂಬಾ ಸ್ವಚ್ಛವಾಗಿದೆ. ಟೆಲಿವಿಷನ್ ಉದ್ಯಮವು ಸುರಕ್ಷಿತವಾಗಿದೆ ಎಂದಿದ್ದಾರೆ.
ನನ್ನ ಸೈಜ್ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!