ಇಂದು (ಏ.2) ಮುಖ್ಯಮಂತ್ರಿ ಚಂದ್ರು ಅಭಿನಯದ ಮುಖ್ಯಮಂತ್ರಿ, ಏ.3ರಂದು ಜನಪ್ರಿಯ ಸಂಸಾರಿಕ ನಾಟಕ ಮೈಸೂರು ಮಲ್ಲಿಗೆ, ಏ.4ಕ್ಕೆ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದಲ್ಲಿ ಅಭಿನಯಿಸುವ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಕಾಣಲಿದೆ.

ಸೇತೂರಾಂಗೆ ಜೀವಮಾನ ರಂಗ ಗೌರವ ಪ್ರಶಸ್ತಿ 

ಈ ನಾಟಕೋತ್ಸವದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಮುಖ್ಯಮಂತ್ರಿ ಚಂದ್ರು, ‘ಮುಖ್ಯಮಂತ್ರಿ ನಾಟಕ ಪ್ರದರ್ಶನ ಆರಂಭವಾದದ್ದು 1980ರಲ್ಲಿ. ಈವರೆಗೆ ಸುಮಾರು 14 ಜನ ಕರ್ನಾಟಕದ ಮುಖ್ಯಮಂತ್ರಿಗಳು ಈ ನಾಟಕ ವೀಕ್ಷಿಸಿದ್ದಾರೆ. ಎಲ್ಲಾ ಸಂದರ್ಭಕ್ಕೂ ಈ ನಾಟಕ ಕನೆಕ್ಟ್ ಆಗುತ್ತೆ. ಹೊಸ ನಾಟಕ ‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ನಾವು ಕಾಣಬಯಸುವ ಉದಾತ್ತ ನಾಯಕ ಮುಖ್ಯಮಂತ್ರಿಯಾಗುವುದರ ಕಲ್ಪನೆಗೆ ನೀರೆರೆಯಲಾಗಿದೆ. ಹಿರಿಯ ನಾಟಕಕಾರ ಕೆವೈ ನಾರಾಯಣ ಸ್ವಾಮಿ ಈ ನಾಟಕದ ರಚನಕಾರರು’ ಎಂದರು.

ರಂಗಭೂಮಿಯೇ ವರವಾಯ್ತು ಅಂತಾರೆ `ವರಲಕ್ಷ್ಮೀ' ಮಾಲಿನಿ ಪಿ. ರಾವ್ 

‘ಭ್ರಷ್ಟಾಚಾರ, ಹಗೆತನ, ಸ್ವಾರ್ಥಗಳಿಂದ ತುಂಬಿದ ಇಂದಿನ ರಾಜಕಾರಣದಲ್ಲಿಸ್ವಲ್ಪ ಮಟ್ಟಿನ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ನಾಟಕ ರೂಪಿಸಲಾಗಿದೆ. ಪ್ರೇಕ್ಷಕರನ್ನು ಮನರಂಜಿಸುತ್ತಲೇ ಮನೋಚಿಂತನೆಗೆ ಹಚ್ಚುವ ಪ್ರಯತ್ನ ಇದಾಗಿದೆ’ ಎಂದೂ ಮುಖ್ಯಮಂತ್ರಿ ಚಂದ್ರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಬಿ ವಿ ರಾಜಾರಾಂ ಉಪಸ್ಥಿತರಿದ್ದರು.