ಚುನಾವಣೆ ಮುಗಿದ ಬೆನ್ನಲ್ಲೇ ರಾಜಕೀಯ ನಾಯಕನ ಪೋಸ್ಟ್‌ ಹಂಚಿಕೊಂಡ ನಟಿ ಜ್ಯೋತಿ ರೈ!

Jyothi rai Image ನಟಿ ಜ್ಯೋತಿ ರೈ ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಅಶ್ಲೀಲ ವಿಡಿಯೋ ವೈರಲ್‌ ಆದ ಬಳಿಕ ಅವರು ಹೆಚ್ಚಾಗಿ ಯಾವುದೇ ಪೋಸ್ಟ್‌ ಹಂಚಿಕೊಳಳುತ್ತಿರಲಲ್ಲ.

Jyothi rai Shares Pawan Kalyan Photo and Happy over Election success san

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ  ಅಶ್ಲೀಲ ವಿಡಿಯೋ ವೈರಲ್‌ ಆದ ಬಲಿಕ ಕಿರುತೆರೆ ನಟಿ ಜ್ಯೋತಿ ರೈ ಸುಮ್ಮನಾಗಿದ್ದರು. ಅವರು ಹೆಚ್ಚಿನ ಫೋಟೋಗಳಾಗಿ ಸ್ಟೇಟಸ್‌ಗಳಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆ ಬಳಿಕ ಈ ವಿಡಿಯೋ ತಮ್ಮದಲ್ಲ ಎಂದು ಸೈಬರ್ ಕ್ರೈಮ್‌ಗೆ ದೂರು ಕೂಡ ನೀಡಿದ್ದರು. ಇನ್ನೂ ಕೆಲವರು ಅದು ಜ್ಯೋತಿ ರೈ ಅವರದ್ದೇ ವಿಡಿಯೋ ಎಂದು ಹೇಳುತ್ತಿದ್ದರು. ಆದರೆ,ಈ ಪ್ರಕರಣದ ಬಳಿಕ ಕುಗ್ಗಿಹೋದಂತಾಗಿದ್ದ ಜ್ಯೋತಿ ರೈ ಮತ್ತೆ ಪುಟಿದೆದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ಆಕ್ಟೀವ್‌ ಆಗಿದ್ದಾರೆ. ಕರ್ನಾಟಕದಲ್ಲಿ ಇರುವುದಕ್ಕಿಂತ ಹೆಚ್ಚಿನ ಅಭಿಮಾನಿಗಳು ಜ್ಯೋತಿ ರೈಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿದ್ದಾರೆ. ತೆಲುಗು ಸಿನಿಮಾ ರಂಗದೊಂದಿಗೆ ಕಿರುತೆರೆಯಲ್ಲೂ ಅವರು ಸಖತ್‌ ಫೇಮಸ್‌ ಆಗಿದ್ದಾರೆ. ಆದರೆ, ರಾಜಕೀಯ ವಿಚಾರಗಳಿಂದ ಅಂತರವನ್ನೇ ಕಾಯ್ದುಕೊಳ್ಳುತ್ತಿದ್ದ ಜ್ಯೋತಿ ರೈ, ಇತ್ತೀಚೆಗೆ ಮುಕ್ತಾಯವಾದ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಕುರಿತಾದ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಹೌದು, ಆಂಧ್ರಪ್ರದೇಶ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತೆಲುಗು ಸಿನಿಮಾರಂಗದ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷ ಅದ್ಭುತ ನಿರ್ವಹಣೆ ತೋರಿದೆ.  ವಿಧಾನಸಭೆಯಲ್ಲಿ ತಾನು ಸ್ಪರ್ಧೆ ಮಾಡಿದ್ದ ಎಲ್ಲಾ 21 ಕ್ಷೇತ್ರಗಳನ್ನೂ ಜನಸೇನಾ ಪಕ್ಷದ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲಿಯೇ ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಪವನ್‌ ಕಲ್ಯಾಣ್‌ ಅವರ ಫೋಟೋವನ್ನು ಜ್ಯೋತಿ ರೈ ಹಂಚಿಕೊಂಡಿದ್ದಾರೆ.

'ಪವನ್‌ ಕಲ್ಯಾಣ್‌ ಹಾಗೂ ಜನಸೇನಾ ಪಕ್ಷಕ್ಕೆ ಅಭಿನಂದನೆಗಳು. 2024ರ ಚುನಾವಣೆಯಲ್ಲಿ ನಿಮ್ಮದು ಅತ್ಯಂತ ಸ್ಪೂರ್ತಿದಾಯಕ ಯಶಸ್ಸು.  ನೀವು ನಿಜವಾದ ನಾಯಕ ಎಂದು ಅವರು ಪವನ್‌ ಕಲ್ಯಾಣ್‌ ಅವರ ಚಿತ್ರದೊಂದಿಗೆ ಪೋಸ್ಟ್‌ ಮಾಡಿದ್ದಾರೆ. ಜ್ಯೋತಿ ರೈ ಕನ್ನಡ ಕಿರುತೆರೆ ನಟಿಯಾಗಿದ್ದು, ಅವರು 20 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ಸ್ಟಾರ್ ಮಾದಲ್ಲಿ ಪ್ರಸಾರವಾಗುವ ಗುಪ್ಪೆದಂಥ ಮನಸು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ತೆರೆಯ ಮೇಲೆ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ, ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಬಿಚ್ಚಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ಪೋಟೋಗಳನ್ನು ಹಂಚಿಕೊಂಡಿದ್ದ. ಸಣ್ಣ ವಿಡಿಯೋಗಳನ್ನು ಹಂಚಿಕೊಂಡಿದ್ದ ಆತ ನನ್ನಲ್ಲಿ ಪೂರ್ತಿ ವಿಡಿಯೋ ಇದೆ, ಯೂಟ್ಯೂಬ್‌ನಲ್ಲಿ 1 ಸಾವಿರ ಸಬ್‌ಸ್ಕ್ರೈಬರ್‌ ಆದ ಬಳಿಕ ಪೂರ್ಣ ವಿಡಿಯೋ ಹಂಚಿಕೊಳ್ಳುವುದಾಗಿ ತಿಳಿಸಿದ್ದ. ದುರಾದೃಷ್ಟವಶಾತ್‌, ಈತನ ಬೆದರಿಕೆ ಜ್ಯೋತಿ ರೈ ಬಗ್ಗಿರಲಿಲ್ಲ. ಇದರ ಬೆನ್ನಲ್ಲಿಯೇ ಆಕೆಯದ್ದು ಎನ್ನಲಾದ ಕೆಲವು ವಿಡಿಯೋ ಹಾಗೂ ಫೋಟೋಗಳನ್ನು ಕಂಚಿಕೊಂಡಿದ್ದ. ತನಿಖೆಯ ಬಳಿಕ ಕೆಲವು ಎಐ ಟೆಕ್ನಾಲಜಿಯನ್ನು ಬಳಸಿಕೊಂಡು ಆಕೆಯ ನಕಲಿ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ ಎನ್ನಲಾಗಿತ್ತು. ಜ್ಯೋತಿ ರೈ, ಈ ವಿಚಾರದಲ್ಲಿ ಸೈಬರ್‌ ಕ್ರೈಮ್‌ಗೆ ದೂರು ಕೂಡ ದಾಖಲು ಮಾಡಿದ್ದರು.

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

ಆಕೆಯ ನಕಲಿ ಚಿತ್ರಗಳುಸ ಸೋಶಿಯಲ್‌ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್‌ ಆಗಿತ್ತು. ಇದು ಆಕೆಯ ಅಭಿಮಾನಿಗಳಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡುವ ಮೂಲಕ ಅವರ ವೀಡಿಯೊಗಳನ್ನು ಸೋರಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿತ್ತು.

ಅಶ್ಲೀಲ ವೀಡಿಯೋ ವೈರಲ್ ಆದ ಬೆನ್ನಲ್ಲೇ Partner ಜೊತೆ ಕೂಲ್ ಪೋಟೋ ಶೇರ್ ಮಾಡ್ಕೊಂಡ ಜ್ಯೋತಿ ರೈ!

Jyothi rai Shares Pawan Kalyan Photo and Happy over Election success san

Latest Videos
Follow Us:
Download App:
  • android
  • ios