Asianet Suvarna News Asianet Suvarna News

ಅಶ್ಲೀಲ ವೀಡಿಯೋ ವೈರಲ್ ಆದ ಬೆನ್ನಲ್ಲೇ Partner ಜೊತೆ ಕೂಲ್ ಪೋಟೋ ಶೇರ್ ಮಾಡ್ಕೊಂಡ ಜ್ಯೋತಿ ರೈ!


ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋ ಬುಧವಾರ ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲಿಯೇ ನಟಿ ಇಂದು ಸಂಗಾತಿ ಜೊತೆ ಕೂಲ್‌ ಪೋಟೋ ಹಂಚಿಕೊಂಡಿದ್ದಾರೆ.
 

Jyothi Rai aka jyothi poorvaj Shares Cool Photo With Husband Suku Purvaj after Private Pics Drama san
Author
First Published May 9, 2024, 6:23 PM IST

ಪ್ರಖ್ಯಾತ ಕಿರುತೆರೆ ನಟಿ ಹಾಗೂ ಗ್ಲಾಮರ್‌ ಡಾಲ್‌ ಆಗಿಯೇ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಬುಧವಾರ ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಟ್ವಿಟರ್‌, ಫೇಸ್‌ಬುಕ್‌ ಅಲ್ಲದೆ, ಇನ್ಸ್‌ಟಾಗ್ರಾಮ್‌, ವಾಟ್ಸಾಪ್‌ಗಳಲ್ಲಿ ಭರ್ಜರಿಯಾಗಿ ವಿಡಿಯೋ ಹರಿದಾಡುತ್ತಿದೆ. ಇದರ ನಡುವೆ ಜ್ಯೋತಿ ರೈ ಇದು ನಕಲಿ ವಿಡಿಯೋ ಎಂದು ಹೇಳಿದ್ದಲ್ಲದೆ, ತಮ್ಮ ನಗ್ನ ಚಿತ್ರವನ್ನು ನಕಲಿ ಸೃಷ್ಟಿ ಮಾಡಿ ಹಂಚಿಕೆ ಮಾಡಿದವರ ವಿರುದ್ಧ ಸೈಬರ್‌ ಕ್ರೈಮ್‌ಗೆ  ದೂರು ದಾಖಲು ಮಾಡಿದ್ದರು.  ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನಟಿ ತಮ್ಮ ಸಂಗಾತಿಯೊಂದಿಗಿನ ಕೂಲ್‌ ಚಿತ್ರವನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗೆ ಅವರು ಯಾವುದೇ ಶೀರ್ಷಿಕೆ ಕೂಡ ನೀಡಿಲ್ಲ. ವೆಂಕಟ ಸುರೇಶ್‌ ಕುಮಾರ್‌ ಪೂರ್ವಜ್‌ ಅವರೊಂದಿಗೆ ಇತ್ತೀಚೆಗೆ ಜ್ಯೋತಿ ರೈ ವಿವಾಹವಾಗಿದ್ದಾರೆ ಎಂದು ಹೇಳಲಾಗಿದ್ದರೂ, ಅದು ಖಚಿತವಾಗಿಲ್ಲ. ಸ್ವತಃ ಸುಕ್ಕು ಪೂರ್ವಜ್‌ ಅವರು ತೆಗೆದುಕೊಂಡ ಸೆಲ್ಫಿ ಚಿತ್ರವನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರೂ ಕೂಡ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನ ಸ್ಟೋರೀಸ್‌ನಲ್ಲಿ ಇದೇ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಲವ್‌ ಇಮೋಜಿಯನ್ನು ಹಾಕಿಕೊಂಡಿದ್ದಾರೆ. ಅದರೊಂದಿಗೆ ಈ ಅಶ್ಲೀಲ ವಿಡಿಯೋ ಕೇಸ್‌ ತಮ್ಮ ವೈಯಕ್ತಿಕ ಜೀವನದ ಮೇಲೆ ಯಾವ ರೀತಿಯಲ್ಲೂ ಪರಿಣಾಮ ಬೀರಿಲ್ಲ ಎಂದು ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಇನ್ನು ಜ್ಯೋತಿ ರೈ ಅವರದ್ದು ಎನ್ನಲಾದ ವೈರಲ್‌ ಖಾಸಗಿ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದು ಮಾತ್ರವಲ್ಲದೆ ಬೇಸರವನ್ನೂ ವ್ಯಕ್ತಪಡಿಸಿದ್ದರು. ಜ್ಯೋತಿ ರೈ ಅವರ ಇಂಟಿಮೇಟ್‌ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮವಾಗವೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿರುವ ಹೆಚ್ಚಿನ ಮಂದಿ ಈ ಕೇಸ್‌ನಲ್ಲಿ ಅತ್ಯಂತ ತ್ವರಿತವಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಕನ್ನಡ ಟಿವಿ ಸೀರಿಯಲ್‌ನಲ್ಲಿ ಜನಪ್ರಿಯ ನಟಿಯಾಗಿರುವ ಜ್ಯೋತಿ ರೈ, ಬಂದೆ ಬರುತಾವ ಕಾಲ ಸೇರಿದಂತೆ 20ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರೊಂದಿಗೆ ಕನ್ನಡದಲ್ಲಿ ಸೀತಾರಾಮ ಕಲ್ಯಾಣ, ಗಂದಧ ಗುಡಿ, 99 ಹಾಗೂ ದಿಯಾ ವರ್ಣಪಟಲದಂಥ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಂತೆ ತೆಲುಗು ಸೀರಿಯಲ್‌ಗಳಲ್ಲೂ ಅವರು ಜನಪ್ರಿಯರಾಗಿದ್ದು ಅವರು ನಟಿಸಿರುವ ಗುಪ್ಪೆದ್ದಂತಾ ಮನಸು ಸೀರಿಯಲ್‌ನಲ್ಲಿ ಜಗತಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಧಾರವಾಹಿಗಳಲ್ಲಿ ಸೀರೆಯುಟ್ಟು ನಾಯಕನ ತಾಯಿಯ ಪಾತ್ರವನ್ನು ಅವರು ನಿರ್ವಹಿಸಿದರೂ, ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ತಮ್ಮ ಹಾಟ್‌ ಅವತಾರವನ್ನ ತೋರಿಸ್ತಿದ್ರು. ಇದು ಅವರ ಅಭಿಮಾನಿಗಳು ಒಮ್ಮೊಮ್ಮೆ ಶಾಕ್‌ ನೀಡುತ್ತಿತ್ತು. ಸೀರೆಗೂ ಸೈ, ಹಾಟ್‌ ಡ್ರೆಸ್‌ಗೂ ಸೈ ಎನ್ನುವುದನ್ನು ಅವರು ಈ ಮೂಲಕ ತೋರಿಸುತ್ತಿದ್ದರು.

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

ಇನ್ನು ಸುಕ್ಕು ಪೂರ್ವಜ್‌ ಜೊತೆ ರಿಲೇಷನ್‌ಷಿಪ್‌ನಲ್ಲಿದ್ದ ಜ್ಯೋತಿ ರೈ, ಇತ್ತೀಚೆಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಇದರ ಅಧಿಕೃತ ಮಾಹಿತಿ ಇಲ್ಲ. ತಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ವಿವಾಹವಾಗುವುದಾಗಿ ತಿಳಿಸಿದ್ದಾರೆ. ಇದು ಜ್ಯೋತಿ ರೈ ಅವರಿಗೆ ಎರಡನೇ ವಿವಾಹ ಎನಿಸಲಿದೆ. ಮೊದಲ ಪತಿಯಿಂದ ಜ್ಯೋತಿ ರೈ ಅವರಿಗೆ ಒಬ್ಬ ಪುತ್ರನಿದ್ದಾನೆ.

ಕನ್ನಡ ಕಿರುತೆರೆ ಸ್ಟಾರ್ ನಟಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Latest Videos
Follow Us:
Download App:
  • android
  • ios