ಕಾರ್‌ನಲ್ಲಿ ಗಂಡನೊಂದಿಗೆ ಜ್ಯೋತಿ ರೈ ಕ್ಯೂಟ್ ರೊಮ್ಯಾಂಟಿಕ್ ಸಂಭಾಷಣೆ
ಪತಿಯ ಹೃದಯದ ಮಾತಿ ಸ್ಪಂದಿಸಿರುವ ಜ್ಯೋತಿ ರೈ, ಓ ಖಂಡಿತವಾಗಿಯೂ ಲಿಫ್ಟ್ ಮಾಡುತ್ತೇನೆ. ಆದ್ರೆ ಒಂದು ಪ್ರೀತಿಯ ವಾರ್ನಿಂಗ್. ನನ್ನ ಸರಿಯಾದ ಡ್ರೈವಿಂಗ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ.
ಬೆಂಗಳೂರು: ಕಿರುತೆರೆ ನಟಿ ಜ್ಯೋತಿ ರೈ (Actress Jyorthi Rai) ಸೋಶಿಯಲ್ ಮೀಡಿಯಾದಲ್ಲಿ ಪತಿ ವೆಂಕಟ್ ಸುರೇಶ್ ಕುಮಾರ್ (Venkata Suresh Kumar Kuppili) ಕ್ಯೂಟ್ ಸಂಭಾಷಣೆ ನಡೆಸಿದ್ದಾರೆ. ಇವರಿಬ್ಬರ ಕ್ಯೂಟ್ ಸಂಭಾಷಣೆಗೆ ಅಭಿಮಾನಿಗಳು ಹಾರ್ಟ್ ಎಮೋಜಿ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಾನಾ ಕಾರಣಗಳಿಂದ ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ರೈ ನಕಾರಾತ್ಮಕವಾಗಿ ಟ್ರೋಲ್ ಆಗಿದ್ದರು. ಈ ಎಲ್ಲಾ ಟ್ರೋಲ್‌ಗಳನ್ನು ಧೈರ್ಯವಾಗಿ ಎದುರಿಸುವ ಮೂಲಕ ಪ್ರಬುದ್ಧ ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದರು. ಸೀರಿಯಲ್ ಶೂಟಿಂಗ್ ಜೊತೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೂ ಜ್ಯೋತಿ ರೈ ಆಕ್ಟಿವ್ ಆಗಿದ್ದಾರೆ.
ಕೆಲ ಗಂಟೆಗಳ ಹಿಂದೆ ಜ್ಯೋತಿ ರೈ ಇನ್‌ಸ್ಟಾಗ್ರಾಂನಲ್ಲಿ ಕಾರ್ ಡ್ರೈವ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗೆ ಪತಿ ವೆಂಕಟ್ ಸುರೇಶ್ ಕುಮಾರ್ ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಜ್ಯೋತಿ ರೈ ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಫೋಟೋಗೆ, ಆಕೆ ಮೌನವಾಗಿದ್ದಾಗ, ಅವಳ ನಡವಳಿಕೆ ಮತ್ತು ಭಾವ ಹೆಚ್ಚು ಮಾತನಾಡುತ್ತದೆ. ಕನಸುಗಳತ್ತ ಆಕೆಯ ಪಯಣ ಎಂದು ಬರೆದು ಎಂದು ಹಾರುತ್ತಿರುವ ಚಿಟ್ಟೆಯ ಎಮೋಜಿ ಹಾಕಿಕೊಂಡಿದ್ದಾರೆ.
ಪತ್ನಿಯ ಹೃದಯಕ್ಕೆ ಲಿಫ್ಟ್ ಕೇಳಿದ ಗಂಡ
ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ವೆಂಕಟ್ ಸುರೇಶ್ ಕುಮಾರ್, ಮನಸ್ಸು ಲಿಫ್ಟ್ ತೆಗೆದುಕೋ ಎಂದು ನಿಮಗೆ ಲಿಫ್ಟ್ ನೀಡುವ ಮನಸ್ಸು ಇದೆಯೇ? ಹೃದಯ ಬಡಿತ ಹೆಚ್ಚಿಸುವಂತಹ ನಿಮ್ಮ ಡ್ರೈವಿಂಗ್ ಬಗ್ಗೆ ಹೆಚ್ಚು ವಿಷಯಗಳನ್ನು ಕೇಳಿದ್ದೇನೆ ಎಂದು ಬರೆದು ರೆಡ್ ಹಾರ್ಟ್ ಎಮೋಜಿ ಹಾಕಿ ಪರೋಕ್ಷವಾಗಿ ಪತ್ನಿಯ ಹೃದಯಕ್ಕೆ ಲಿಫ್ಟ್ ಕೇಳುವ ಮೂಲಕ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಇದು ರಿಯಲ್, ವೈರಲ್ ಮಾಡೋ ಧೈರ್ಯ ನಿಮ್ಮಲಿದ್ಯಾ? ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿ ರೈ ಚಾಲೆಂಜ್!
ಪತಿಯ ಹೃದಯದ ಮಾತಿ ಸ್ಪಂದಿಸಿರುವ ಜ್ಯೋತಿ ರೈ, ಓ ಖಂಡಿತವಾಗಿಯೂ ಲಿಫ್ಟ್ ಮಾಡುತ್ತೇನೆ. ಆದ್ರೆ ಒಂದು ಪ್ರೀತಿಯ ವಾರ್ನಿಂಗ್. ನನ್ನ ಸರಿಯಾದ ಡ್ರೈವಿಂಗ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ.
ಫೋಟೋಗಳಿಗೆ ಅಭಿಮಾನಿಗಳಿಂದಲೂ ಪ್ರತಿಕ್ರಿಯೆ
ಇನ್ನು ಇದೇ ಫೋಟೋಗಳಿಗೆ ಅಭಿಮಾನಿಗಳು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ ಚೆನ್ನಾಗಿದ್ದು, ಫೋಟೋದಲ್ಲಿ ಸುಂದರವಾಗಿ ಬಂದಿವೆ. ಬಾಲಿವುಡ್ ನಟಿಯರಿಗಿಂತ ನೀವು ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ನಟಿ ಅಂದವನ್ನು ಹಾಡಿ ಹೊಗಳಿದ್ದಾರೆ. ನೀವು ಭೂಮಿ ಮೇಲಿನ ಅಪ್ಸರೆ, ಇದು ನನ್ನ ಕನಸಿನ ಕಾರ್ ಅಂತಲೂ ಕೆಲವರು ಕಮೆಂಟ್ ಮಾಡಿದ್ದಾರೆ.
ಅಶ್ಲೀಲ ವಿಡಿಯೋ ಲೀಕ್ ಆದ ಬೆನ್ನಲ್ಲೇ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ನಟಿ ಜ್ಯೋತಿ ರೈ
ತೆಲುಗು ವೆಬ್ ಸೀರೀಸ್ ಗಳಲ್ಲಿ (Web series) ಬ್ಯುಸಿಯಾಗಿರುವ ನಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ, ಶಾರ್ಟ್ ಡ್ರೆಸ್, ಬೋಲ್ಡ್ ಪೋಸ್ ನೀಡಿರೋ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಪಡ್ಡೆ ಹುಡುಗರಿಗೆ ಕಚಕುಳಿ ಇಡುತ್ತಲೇ ಇರುತ್ತಾರೆ. ಇವರ ಫೋಟೋಗಳಿಗೆ ಹೊಗಳಿಕೆ ಬರೋದಕ್ಕಿಂತ ಜಾಸ್ತಿ, ಕೆಟ್ಟ ಕಾಮೆಂಟ್ ಗಳು ಬರುತ್ತವೆ