ಕಿರುತೆರೆ ಡಿಂಪಲ್‌ ಕುಟುಂಬ ವಿಜಯ್ ಸೂರ್ಯ ಹಾಗೂ ಪತ್ನಿ ಚೈತ್ರಾ  ಪುತ್ರನ ಮೊದಲ ಹುಟ್ಟುಹಬ್ಬವನ್ನು ದುಬೈನ್‌ನಲ್ಲಿ ಆಚರಿಸುತ್ತಿದ್ದಾರೆ. ಜನವರಿ 1ರಂದು ನ್ಯೂ ಇಯರ್‌ ಮತ್ತು ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಧಾರಾಣಿ, ವಿಜಯ್‌ ಸೂರ್ಯ! 

ಲಾಕ್‌ಡೌನ್‌ ನಂತರ ಮೊದಲ ಬಾರಿ ಕುಟುಂಬದ ಜೊತೆ ವಿಜಯ್ ದುಬೈಗೆ ಪ್ರಯಾಣಿಸಿದ್ದಾರೆ.  ಕುಟುಂಬದ ಜೊತೆ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ. ' ಹ್ಯಾಪಿ ಬರ್ತಡೇ ಸಿಂಬಾ' ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ವಿದೇಶದಲ್ಲಿ ನ್ಯೂ ಇಯರ್‌ಗೆ ಆಕಾಶ ದೀಪಗಳನ್ನು ಹೊಡೆಯಲಾಗುತ್ತದೆ ಅದನ್ನು ವೀಕ್ಷಿಸುತ್ತಲೇ ಪುತ್ರನಿಗೆ ಕೇಕ್ ಕಟ್ ಮಾಡಿಸಿದ್ದಾರೆ. 

2019 ಫೆಬ್ರವರಿಯಲ್ಲಿ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಂಪಲ್ ಜೋಡಿ ಜನವರಿ 2020, 1ರಂದು ಪುತ್ರನನ್ನು ಬರ ಮಾಡಿಕೊಂಡರು. Sohan ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಫ್ಯಾನ್ ಪೇಜ್‌ಗಳಿವೆ. ತಂದೆಯಷ್ಟೇ ಅಭಿಮಾನಿಗಳನ್ನು ಪುಟ್ಟ ವಯಸ್ಸಿನಲ್ಲಿ ಸೋಹಾನ್ ಪಡೆದುಕೊಂಡಿದ್ದಾರೆ.

ಅಗ್ನಿಸಾಕ್ಷಿ ವಿಜಯ್ ಸೂರ್ಯ 'ಡಿಂಪಲ್' ಪುತ್ರನ ಫೋಟೋ ನೋಡಿ!