Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸೆಟ್ಟಲ್ಲೇ ಮೀಟ್ ಆಗಿ ಲವ್‌ನಲ್ಲಿ ಬಿದ್ದ ಖ್ಯಾತ ಜೋಡಿಗಳು: ಸೀ'ರಿಯಲ್' ಲವ್‌ ಸ್ಟೋರಿ

ಸೆಟ್ಟಲ್ಲೇ ಮೀಟ್ ಆಗಿ ಲವ್‌ನಲ್ಲಿ ಬಿದ್ದ ಖ್ಯಾತ ಜೋಡಿಗಳು: ಸೀ'ರಿಯಲ್' ಲವ್‌ ಸ್ಟೋರಿ

ಜನರು ಅತ್ಯಂತ ಅಸಾಮಾನ್ಯ ಸ್ಥಳಗಳಲ್ಲಿ ತಮ್ಮ ಲವ್ ಆಫ್ ಲೈಫ್ ನ್ನು ಕಂಡು ಕೊಳ್ಳುತ್ತಾರೆ. ಟಿವಿ ತಾರೆಯರಿಗೆ, ಇದು ಹೆಚ್ಚಾಗಿ ಅವರ ಕಾರ್ಯಕ್ರಮಗಳ ಸೆಟ್ ನಲ್ಲಿ ಲವ್ ಆಗೋದನ್ನು ನಾವು ನೋಡಿರಬಹುದು. ಕನ್ನಡ ಕಿರುತೆರೆಯಲ್ಲೂ ಅಂತಹ ಸುಮಾರು ಜೋಡಿಗಳಿವೆ. ತಮ್ಮ ಸಹ ನಟರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿರುವ ಜೋಡಿಗಳ ಬಗ್ಗೆ ತಿಳಿಯಲು ಇದನ್ನ ಪೂರ್ತಿಯಾಗಿ ಓದಿ…

Suvarna News | Updated : Jan 21 2023, 12:25 PM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
18
ಸಾಗರ್ ಪುರಾಣಿಕ್ -ದೀಪಾ ಜಗದೀಶ್ (Sagar Puranik and Deepa Jagadeesh)

ಸಾಗರ್ ಪುರಾಣಿಕ್ -ದೀಪಾ ಜಗದೀಶ್ (Sagar Puranik and Deepa Jagadeesh)

ಸಾಗರ್ ಅವರ ಹೋಮ್ ಬ್ಯಾನರ್ ನಿರ್ಮಿಸಿದ ದೈನಂದಿನ ಧಾರಾವಾಹಿ ಮಹಾಸತಿಯ ಸೆಟ್ ಗಳಲ್ಲಿ ಈ ಜೋಡಿ ಪರಸ್ಪರ ಭೇಟಿಯಾಯಿತು. ಬಳಿಕ ಇಬ್ಬರು ಸ್ನೇಹಿತರಾದರು, ಇದಾಗಿ ಸುಮಾರು ಹತ್ತು ವರ್ಷದ ಬಳಿಕ ಸಾಗರ್ ಮತ್ತು ದೀಪಾ ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿ ಕಳೆದ ವರ್ಷ ಮದುವೆಯಾದರು.

28
ಐಶ್ವರ್ಯ ಸಾಲಿಮಠ್ - ವಿನಯ್ ಯುಜೆ (Aishwarya Salimath and Vinay UJ)

ಐಶ್ವರ್ಯ ಸಾಲಿಮಠ್ - ವಿನಯ್ ಯುಜೆ (Aishwarya Salimath and Vinay UJ)

ಐಶ್ವರ್ಯಾ ಮತ್ತು ವಿನಯ್ ಅವರ ಸ್ನೇಹವು ಅವರ ನಟನಾ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ದೈನಂದಿನ ಸೀರಿಯಲ್ ನಲ್ಲಿ ಒಟ್ಟಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡ ಟೈಮಲ್ಲಿ ಆರಂಭವಾಯಿತಂತೆ. ಆದಾಗ್ಯೂ, ಸ್ನೇಹಿತರಾಗಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವರ್ಷಗಳ ನಂತರ, ಅವರು ಅಂತಿಮವಾಗಿ ಮದುವೆಯಾದರು.

38
ಗೋವಿಂದೆ ಗೌಡ - ದಿವ್ಯಶ್ರೀ (Govinde gowda Divyashree)

ಗೋವಿಂದೆ ಗೌಡ - ದಿವ್ಯಶ್ರೀ (Govinde gowda Divyashree)

ಹೆಣ್ಣು ಮಗುವಿನ ಹೆಮ್ಮೆಯ ಪೋಷಕರಾದ ಗೋವಿಂದೇಗೌಡ ಮತ್ತು ದಿವ್ಯಶ್ರೀ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ನಲ್ಲಿ ಸ್ಪರ್ಧಿಗಳಾಗಿ ಪರಸ್ಪರ ಭೇಟಿಯಾದರು. ಅಲ್ಲೇ, ಅವರ ಸ್ನೇಹವು ಪ್ರೀತಿಯಾಗಿ ಅರಳಿತು. ಪ್ರೇಮಿಗಳು 2019ರಲ್ಲಿ ಶೃಂಗೇರಿಯಲ್ಲಿ ವಿವಾಹವಾದರು ಮತ್ತು ಈಗ ಮುದ್ದಾದ ಮಗುವಿನ ಪೋಷಕರಾಗಿದ್ದಾರೆ.

48
Asianet Image

ರಘು -ಅಮೃತಾ (Raghu - Amrutha)
 'ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಸೀರಿಯಲ್ ಲೀಡ್ ಜೋಡಿಗಳಾದ ರಘು ಮತ್ತು ಅಮೃತ ಪ್ರೀತಿಯಲ್ಲಿ ಬಿದ್ದಿರಂತೆ. ಆನ್-ಸ್ಕ್ರೀನ್ ಜೋಡಿ ತಮ್ಮ ಸಂಬಂಧವನ್ನು ಮುಂದಕ್ಕೆ ತೆಗೆದುಕೊಂಡು 2019 ರಲ್ಲಿ ವಿವಾಹವಾದರು. ವಿವಾಹವು ಬ್ರಾಹ್ಮಣ-ಗೌಡ ಆಚರಣೆಗಳನ್ನು ಹೊಂದಿತ್ತು.

58
ಚಂದನ್ ಕುಮಾರ್ - ಕವಿತಾ ಗೌಡ (Kavitha Gowda -Chandan Kumar)

ಚಂದನ್ ಕುಮಾರ್ - ಕವಿತಾ ಗೌಡ (Kavitha Gowda -Chandan Kumar)

ಈ ರೂಮರ್ ಸೆಲೆಬ್ರಿಟಿ ಕಪಲ್ಸ್ ತಮ್ಮ ಸಂಬಂಧದ ಬಗ್ಗೆ ಎಷ್ಟೇ ಗಾಸಿಪ್ ಕೇಳಿ ಬಂದರೂ ಅದರ ಬಗ್ಗೆ ಒಂದೇ ಮಾತು ಆಡಿರಲಿಲ್ಲ. ಕೊನೆಗೆ ತಾವು ಎಂಗೇಜ್ ಆಗುತ್ತಿರುವುದಾಗಿ ಹೇಳಿ ಸಿಹಿ ಸುದ್ದಿ ಕೊಟ್ಟಿದ್ದರು. ಇವರು ಲಾಕ್ ಡೌನ್ ಸಂದರ್ಭ ಮದುವೆಯಾದರು. ಈ ಜೋಡಿ ಲಕ್ಷ್ಮಿ ಬಾರಮ್ಮ ಎಂಬ ಮೆಗಾ ಧಾರಾವಾಹಿಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿತ್ತು.

68
ದೀಪಿಕಾ - ಆಕರ್ಷ್ (Deepika - Akarsh)

ದೀಪಿಕಾ - ಆಕರ್ಷ್ (Deepika - Akarsh)

ಜನಪ್ರಿಯ ದೈನಂದಿನ ಧಾರಾವಾಹಿ 'ಕುಲವಧು' ನಲ್ಲಿ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ದೀಪಿಕಾ ಮತ್ತು ಆಕರ್ಷ್ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಆದಾಗ್ಯೂ, ಅವರು ತಮ್ಮ ನಿಶ್ಚಿತಾರ್ಥದ ಸಮಯದಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು, ಬಳಿಕ ಮದ್ವೆಯಾಗಿ, ಈಗ ಸಂತೋಷವಾದ ವೈವಾಹಿಕ ಜೀವನ ನಡೆಸುತ್ತಿದ್ದಾರೆ.

78
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ( Chandan shetty niveditha gowda)

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ( Chandan shetty niveditha gowda)

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಪರಸ್ಪರ ಭೇಟಿಯಾದರು. ಅಂತಿಮವಾಗಿ, ಸ್ನೇಹವು ಪ್ರೀತಿಯಾಗಿ ಅರಳಿತು ಮತ್ತು ಪ್ರೇಮಿಗಳು ಫೆಬ್ರವರಿ 26, 2020 ರಂದು ಮೈಸೂರಿನಲ್ಲಿ ವಿವಾಹವಾದರು.

88
ರೂಪ ಪ್ರಭಾಕರ್ - ಪ್ರಶಾಂತ್ (Roopa Prabhakar - Prashanth)

ರೂಪ ಪ್ರಭಾಕರ್ - ಪ್ರಶಾಂತ್ (Roopa Prabhakar - Prashanth)

ಸಿಲ್ಲಿ ಲಲ್ಲಿಯಲ್ಲಿ ಅವರು ಅಕ್ಕ ತಮ್ಮ ಪಾತ್ರವನ್ನು ನಿರ್ವಹಿಸಿದ್ದರು, ಆದರೆ ಸಿರಿಯಲ್ ನಡೆಯುತ್ತಿರುವಾಗಲೇ ಇಬ್ರೂ ಲವ್ವಲ್ಲಿ ಬಿದ್ರಂತೆ. ರೂಪಾ ಮತ್ತು ಪ್ರಶಾಂತ್ ಮದುವೆಯಾಗಿ ಬಹಳ ಸಮಯವಾಗಿದೆ. ಇವರಿಗೆ ಆಲಾಪ್ ಎಂಬ ಮಗನಿದ್ದಾನೆ, ಅವನು ಬಾಲ ಕಲಾವಿದನಾಗಿ ಮನರಂಜನಾ ಉದ್ಯಮಕ್ಕೆ ಪ್ರವೇಶಿಸುತ್ತಿದ್ದಾನೆ.

Suvarna News
About the Author
Suvarna News
ಕನ್ನಡ ಧಾರಾವಾಹಿ
 
Recommended Stories
Top Stories