Asianet Suvarna News Asianet Suvarna News

'ನನ್ನಮ್ಮ ಸೂಪರ್ ಸ್ಟಾರ್-2' ಶೋನಿಂದ ಹೊರ ನಡೆದ ನಿರಂಜನ್ ದೇಶಪಾಂಡೆ; ಹೊಸ ಆಂಕರ್ ಎಂಟ್ರಿ

ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 2ನಿಂದ ನಿರಂಜನ್ ದೇಶಪಾಂಡೆ ಹೊರನಡೆದಿದ್ದಾರೆ. ಹೊಸ ಆಂಕರ್ ಎಂಟ್ರಿ ಕೊಟ್ಟಿದ್ದಾರೆ.  

Janvi Rayala on hosting Nannamma Superstar 2 sgk
Author
First Published Jan 16, 2023, 12:21 PM IST

'ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2' ರಿಯಾಲಿಟಿ ಶೋ ಕನ್ನಡ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿದೆ. ಮೊದಲ ಸೀಸಸ್ ಸೂಪರ್ ಹಿಟ್ ಆದ ಬಳಿಕ 2ನೇ ಸೀಸನ್ ಪ್ರಾರಂಭವಾಗಿದ್ದು ಇದು ಕೂಡ ಪ್ರೇಕ್ಷಕರ ಹೃದಯ ಗೆದ್ದಿದೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2ನಲ್ಲಿ ಇದೀಗ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಶೋ ಅನ್ನು ಹೋಸ್ಟ್ ಮಾಡುತ್ತಿದ್ದ ನಿರಂಜನ್ ದೇಶಪಾಂಡೆ ಹೊರ ನಡೆದಿದ್ದಾರೆ. ಸೀಸನ್ 2 ಪ್ರಾರಂಭವಾದಾಗಿಂದ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ನಿರಂಜನ್ ಇದೀಗ ಶೋನಿಂದ ಹೊರಹೋಗಿದ್ದಾರೆ. ನಿರಂಜನ್ ಜಾಗಕ್ಕೆ ಹೊಸ ಆಂಕರ್ ಎಂಟ್ರಿ ಕೊಟ್ಟಿದ್ದಾರೆ.

 Janvi Rayala on hosting Nannamma Superstar 2 sgk

ನನ್ನಮ್ಮ ಸೂಪರ್ ಸ್ಟಾರ್-2ಗೆ ಎಂಟ್ರಿ ಕೊಟ್ಟ ಹೊಸ ನಿರೂಪಕಿ ಮತ್ಯಾರು ಅಲ್ಲ ರಾಜಾ ರಾಣಿ-2 ನಡೆಸಿಕೊಟ್ಟಿದ್ದ ಜಾನ್ವಿ ರಾಯಲ. ಹೌದು ರಾಜಾ ರಾಣಿ-2 ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಜಾನ್ವಿ ಇದೀಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್-2 ತಾಯಿ ಮತ್ತು ಮಕ್ಕಳ ಬಾಂಧವ್ಯದ ಬಗ್ಗೆ ಇರುವ ಶೋ ಆಗಿದೆ. ಇಲ್ಲಿ ಮಕ್ಕಳನ್ನು ಹ್ಯಾಂಡಲ್ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ಈ ಬಗ್ಗೆ ಜಾನ್ವಿ ಮಾತನಾಡಿದ್ದಾರೆ. ಇ ಟೈಮ್ಸ್ ಜೊತೆ ಮಾತನಾಡಿದ ನಟಿ ಜಾನ್ವಿ,  'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 2 ಅನ್ನು ಹೋಸ್ಟ್ ಮಾಡುವುದು ನಿಜಕ್ಕೂ ದೊಡ್ಡ ಜವಾಬ್ದಾರಿಯಾಗಿದೆ. ಅದರಲ್ಲೂ ನಿರಂಜನ್ ದೇಶಪಾಂಡೆ ಅವರಂತಹ ಯಶಸ್ವಿ ಹೋಸ್ಟ್ ಜಾಗಕ್ಕೆ ಹೋಗಿದ್ದು ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಅವರು ನಿರೂಪಕರಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ನಾನು ತಾಯಿ-ಮಗು ರಿಯಾಲಿಟಿ ಶೋನಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೀನಿ' ಎಂದು ಹೇಳಿದ್ದಾರೆ. 

ಕಪ್ಪಾಗಿರುವುದಕ್ಕೆ ಅವಮಾನ ಎದುರಿಸಿರುವೆ, ಮಧ್ಯೆರಾತ್ರಿ ಅಮ್ಮ ಅಳುತ್ತಿದ್ದಳು: ಲಕ್ಷಣ ಭಾವುಕ ಕ್ಷಣ

ನಿರಂಜನ್ ದೇಶಪಾಂಡೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಜಾನ್ವಿ ಹೇಳಿದರು ಯಾವುದೇ ಸಲಹೆ ಕೇಳಿದರೂ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದ್ದಾರೆ. ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ಸೆಟ್ ಸೇರಿರುವ ಜಾನ್ವಿ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.  

'ಮಕ್ಕಳೊಂದಿಗೆ ಶೂಟ್ ಮಾಡುವುದು ಖುಷಿಯಾಗುತ್ತದೆ. ಇದು ಕಲಿಕೆಯ ಪ್ರಕ್ರಿಯೆಯಂತಿದೆ. ಅದರಲ್ಲೂ ಈಗಿನ ಮಕ್ಕಳಿಗೆ ತುಂಬಾ ಎನರ್ಜಿಯಿಂದ ತುಂಬಿರುತ್ತಾರೆ ಮತ್ತು ಪ್ರತಿ ಹೊಸದನ್ನು ಕಲಿಯಲು ಉತ್ಸುಕರಾಗಿದ್ದಾರೆ. ಆದ್ದರಿಂದ, ನನಗೆ ಮಕ್ಕಳ ಶಕ್ತಿಯನ್ನು ಹೊಂದಿಸುವುದು ಬಹಳ ದೊಡ್ಡ ಸವಾಲಾಗಿದೆ. ನಾನು ಈಗಾಗಲೇ ರಿಯಾಲಿಟಿ ಶೋನ ಮುಂಬರುವ ಸಂಚಿಕೆಗಳಿಗಾಗಿ ಚಿತ್ರೀಕರಣ ಮಾಡಿದ್ದೇನೆ' ಎಂದು ಹೇಳಿದ್ದಾರೆ.

ಕಿರುತೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿ; ಮುಕ್ತಾಯವಾಗುತ್ತಿದೆ 'ಕನ್ನಡತಿ' ಧಾರಾವಾಹಿ

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 ಸೂಪರ್ ಹಿಟ್ ಆದ ಬಳಿಕ ಸೀಸನ್ 2 ಮೂಲಕ ಮತ್ತೆ ಪಾವಾಸ್ ಆಗಿದೆ. ಈ ಶೋನಲ್ಲಿ ಜಡ್ಡ್ ಆಗಿ ಸೃಜನ್ ಲೋಕೇಶ್, ತಾರಾ ಮತ್ತು ಅನುಪ್ರಭಾಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಸೀಸನ್ ಅನ್ನು ಅನುಪಮಾ ಗೌಡ ನಡೆಸಿಕೊಟ್ಟಿದ್ದರು. ಸೀಸನ್-2 ನಿರಂಜನ್ ದೇಶಪಾಂಡೆ ಅವರಿಂದ ಪ್ರಾರಂಭವಾಗಿತ್ತು. ಇದೀಗ ನಿರಂಜನ್ ಜಾಗಕ್ಕೆ ಜಾನ್ವಿ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ನಿರಂಜನ್ ದಿಢೀರ್ ಶೋ ಬಿಟ್ಟು ಹೋಗಿರುವುದು ಅಚ್ಚರಿ ಮೂಡಿಸಿದೆ. ಆದರೆ ನಿರಂಜನ್ ನಮ್ಮಮ್ಮ ಸೂಪರ್ ಸ್ಟಾರ್ ಶೋನಿಂದ ಗಿಚ್ಚಿ ಗಿಲಿಗಿಲಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಜಾನ್ವಿ ನಿರೂಪಣೆ ಶೈಲಿ ಹೇಗಿರಲಿದೆ, ಪ್ರೇಕ್ಷಕರ ಹೃದಯ ಗೆಲ್ತಾರಾ ಎಂದು ಕಾದು ನೋಡಬೇಕಿದೆ. 
 

Follow Us:
Download App:
  • android
  • ios