ಜೀ ಕನ್ನಡಲ್ಲಿ ಶೀಘ್ರದಲ್ಲಿ ಶುರುವಾಗಲಿದೆ ಹೊಚ್ಚ ಹೊಸ ಧಾರಾವಾಹಿ ‘ಜಗದ್ದಾತ್ರೀ’. ಈಗಾಗಲೇ ಧಾರಾವಾಹಿಯ ಪ್ರೊಮೊ ಬಿಡುಗಡೆಯಾಗಿದ್ದು, ನಾಯಕಿಯ ಮುಖವನ್ನು ರಿವೀಲ್ ಮಾಡದೇ ಇದ್ದರೂ, ಜನ ಇದು ಮೋಕ್ಷಿತಾ ಪೈ ಎಂದಿದ್ದಾರೆ. ಹಾಗಿದ್ರೆ ಮುಕ್ತಾಯವಾಗ್ತಿರೋ ಧಾರಾವಾಹಿ ಯಾವುದು?
ಶೀಘ್ರದಲ್ಲಿ ಬರ್ತಿದ್ದಾಳೆ ‘ಜಗದ್ದಾತ್ರೀ’
ಜೀ ಕನ್ನಡ ವಾಹಿನಿಯು ಹೊಸ ಹೊಸ ಕಥೆಗಳನ್ನು ನೀಡೋದ್ರಲ್ಲಿ ಸದಾ ಮುಂದು. ಶೀಘ್ರದಲ್ಲಿ ‘ಜಗದ್ದಾತ್ರೀ’ ಸೀರಿಯಲ್ ಪ್ರಸಾರವಾಗಲಿದ್ದು. ಇದೀಗ ವಾಹಿನಿಯೂ ಪವರ್ ಫುಲ್ ಪ್ರೊಮೋ ರಿಲೀಸ್ ಮಾಡಿದೆ. ಪ್ರೊಮೋ ಸಿಕ್ಕಾಪಟ್ಟೆ ಮೆಚ್ಚುಗೆಯನ್ನು ಕೂಡ ಪಡೆದಿದೆ. ಅಷ್ಟಕ್ಕೂ ಈ ಹೊಚ್ಚ ಹೊಸ ಧಾರಾವಾಹಿ ಮೂಲಕ ಜೀ ಕನ್ನಡ ವಾಹಿನಿಗೆ ಮತ್ತೆ ಕಂ ಬ್ಯಾಕ್ ಮಾಡುತ್ತಿರುವವರು ಯಾರು? ಯಾವಾಗ ಸೀರಿಯಲ್ ಶುರುವಾಗಲಿದೆ. ಹಾಗಿದ್ರೆ ಯಾವ ಸೀರಿಯಲ್ ಮುಕ್ತಾಯವಾಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.
‘ಜಗದ್ದಾತ್ರೀ’ಯಾಗಿ ಎಂಟ್ರಿ ಕೊಡಲಿರುವ ಮೋಕ್ಷಿತಾ ಪೈ
‘ಜಗದ್ದಾತ್ರೀ’ ಧಾರಾವಾಹಿ ಮೂಲಕ ಪಾರು ಸೀರಿಯಲ್ ಖ್ಯಾತಿಯ ನಟಿ ಮೋಕ್ಷಿತಾ ಪೈ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ‘ಜಗದ್ದಾತ್ರೀ’ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದ್ರೆ, ವಾಯ್ಸ್ ಕೇಳಿ, ಇದು ಮೋಕ್ಷಿತಾ ಪೈ ಎಂದು ಜನ ಕನ್ಫರ್ಮ್ ಆಗಿದ್ದಾರೆ. ಫೈನಲೀ ಮೋಕ್ಷಿತಾ ವಾಯ್ಸ್ ಕೇಳಿ ಖುಷಿ ಆಗಿದೆ. ಶೀಘ್ರದಲ್ಲಿ ತೆರೆ ಮೇಲೆ ಮೋಕ್ಷಿತಾರನ್ನು ಕಾಣಲು ಬಯಸುತ್ತೇವೆ ಎಂದಿದ್ದಾರೆ.ನಮ್ಮ ಜೀ ಮನೆಮಗಳು!! ಪಾರು ನಾ ಮತ್ತೆ ಜಗಧಾತ್ರಿ ಆಗಿ ನೋಡೋದಕ್ಕೆ ಕಾಯ್ತಾ ಇದ್ದೇವೆ ನಾವು ಎಂದು ಸಹ ಹೇಳಿ ಸಂಭ್ರಮಿಸುತ್ತಿದ್ದಾರೆ ಮೋಕ್ಷಿತಾ ಪೈ ಅಭಿಮಾನಿಗಳು. ಅಂದ ಹಾಗೆ ಮೋಕ್ಷಿತಾ ಪೈ ಪಾರು ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರ ಮನೆಯ ಕೆಲಸದವಳಾಗಿ, ಬಳಿಕ ಮನೆಯ ಸೊಸೆ ಪಾರು ಆಗಿ ಮೋಕ್ಷಿತಾ ಪೈ ನಟಿಸಿದ್ದರು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಮೋಕ್ಷಿತಾ ಪೈ ಪಾತ್ರಗಳನ್ನು ಜನ ಇಷ್ಟಪಟ್ಟಿದ್ದರು. ಪಾರು ಸೀರಿಯಲ್ ಮುಗಿಯುತ್ತಿದ್ದಂತೆ ಮೋಕ್ಷಿತಾ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದರು. ಅಲ್ಲೂ ಸಹ ತಮ್ಮ ಸಿಂಪ್ಲಿಸಿಟಿಯಿಂದಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಜಗದ್ಧಾತಿ ಕಥೆ ಏನು?
ಈಗಷ್ಟೆ ಬಿಡುಗಡೆಯಾದ ಪ್ರೊಮೋದಲ್ಲಿ ತೋರಿಸಿದಂತೆ, ಅಡುಗೆ ಮನೆಯಲ್ಲಿ ಜಗದ್ಧಾತ್ರಿ ಇರುತ್ತಾಳೆ. ಜಗದ್ಧಾತಿ ಒಂದು ಲೋಟ ಕಾಫಿಮಾಡಿ ಕೊಡಮ್ಮ ಎನ್ನುವ ಹಿನ್ನೆಲೆ ವಾಯ್ಸ್ ಬರುತ್ತೆ. ಆವಾಗ ಜಗಧಾತ್ರಿ ಹಾ ಅಜ್ಜಿ ಎನ್ನುತ್ತಾ ಕಾಫಿ ಮಾಡುತ್ತಾಳೆ. ಅಷ್ಟರಲ್ಲಿ ಆಕೆಗೆ ಕಾಲ್ ಬರುತ್ತೆ, ಕಿಡ್ನಾಪರ್ ತಪ್ಪಿಸಿ ಕೊಂಡಿದ್ದಾರೆ ಎನ್ನುವ ಸುದ್ದಿಯು ಬರುತ್ತೆ. ಹೌಸ್ ವೈಫ್ ನಂತಿರುವ ಜಗದ್ಧಾತ್ರಿ, ಅಕ್ಕಿ ಡಬ್ಬಿಯಿಂದ ಗನ್ ಕೈಗೆತ್ತಿಕೊಂಡು, ಗನ್ ಲೋಡ್ ಮಾಡಿಕೊಂಡು, ಅಜ್ಜಿ ನಾನು ಮಾರ್ಕೆಟ್ ಹೋಗಿ ತರಕಾರಿ ತೆಗೆದುಕೊಂಡು ಬರ್ತೀನಿ ಎನ್ನುತ್ತಾ ಹೋಗುತ್ತಾಳೆ. ಮತ್ತೊಂದೆಡೆ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಕಿಡ್ನಾಪರ್ ಪಲಾಯನ ಮಾಡುತ್ತಿದ್ದರೆ, ದೂರದಲ್ಲಿ ಬಿಲ್ಡಿಂಗ್ ಮೇಲೆ ನಿಂತಿರುವ ಜಗದ್ದಾತ್ರಿ ಪಿಸ್ತೂಲ್ ನಿಂದ ಆತನ ಕಾಲಿಗೆ ಶೂಟ್ ಮಾಡಿ, ಮಗುವನ್ನು ರಕ್ಷಿಸುತ್ತಾಳೆ. ಇದು ಅಂಡರ್ ಕವರ್ ನಲ್ಲಿರುವ ಗೃಹಿಣೆಯ ಕಥೆಯಾಗಿದೆ. ಧಾರಾವಾಹಿ ಯಾವಾಗ ಶುರುವಾಗಲಿದೆ ಎನ್ನುವುದನ್ನು ಸೀರಿಯಲ್ ತಂಡ ಇನ್ನೂ ರಿವೀಲ್ ಮಾಡಿಲ್ಲ.
ಯಾವ ಧಾರಾವಾಹಿ ಮುಗಿಯುತ್ತೆ?
ಅಂದ ಹಾಗೆ ಜಗದ್ಧಾತ್ರಿ ಸೀರಿಯಲ್ ಪ್ರಸಾರವಾಗಬೇಕಾದರೆ ಒಂದು ಸೀರಿಯಲ್ ಮುಕ್ತಾಯ ಕಾಣಲೇಬೇಕು. ಮಾಹಿತಿಯ ಪ್ರಕಾರ ‘ಅಮೃತಧಾರೆ’ ಧಾರಾವಾಹಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಧಾರಾವಾಹಿ ನೋಡಿದರೂ ಕೂಡ, ಅಲ್ಲಿ ಜೆಡಿ ಸಂಪೂರ್ಣವಾಗಿ ನಾಶವಾಗುತ್ತಿದ್ದಾನೆ, ಅವನ ಬೇಬಿ ಅವನಿಗೆ ಮೋಸ ಮಾಡಿ ಓಡಿ ಹೋಗಿದ್ದು ಆಗಿದೆ. ಗೌತಮ್ ದಿವಾನ್ ಮತ್ತೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಆಗಿದೆ. ಹಾಗಾಗಿ ಸೀರಿಯಲ್ ಮುಗಿಯೋದು ಪಕ್ಕಾ ಎನ್ನಲಾಗುತ್ತಿದೆ.


