ಸುದೀಪ್​ ಇಲ್ಲದ ಬಿಗ್​ಬಾಸ್​ ಊಹಿಸಿಕೊಳ್ಳೋದೂ ಕಷ್ಟ ಎನ್ನುತ್ತಲೇ ವಿಶೇಷ ವಿಡಿಯೋ ರಿಲೀಸ್!

ಕಿಚ್ಚ ಸುದೀಪ್​ ಇಲ್ಲದ ಬಿಗ್​ಬಾಸ್​ ಊಹಿಸಿಕೊಳ್ಳೋದೂ ಕಷ್ಟ ಎನ್ನುತ್ತಲೇ ಕಲರ್ಸ್ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್​ ಮಾಡಿದೆ.
 

it is difficult to imagine Bigg Boss without Kiccha Sudeep special video released suc

2013ರಿಂದ ಶುರುವಾದ ಕನ್ನಡದ ಬಿಗ್​ಬಾಸ್​​ 10 ಸೀಸನ್​ಗಳನ್ನು ಮುಗಿಸಿದೆ. ಈ 10 ವರ್ಷಗಳಲ್ಲಿ ಎಲ್ಲಾ ಸೀಸನ್​ಗಳನ್ನೂ ನಡೆಸಿಕೊಟ್ಟಿರುವ ಕೀರ್ತಿ ಕಿಚ್ಚ ಸುದೀಪ್​ ಅವರಿಗೆ ಸಲ್ಲುತ್ತದೆ. ಈ 10 ಸೀಸನ್​ಗಳು ಹಲವಾರು ಬದಲಾವಣೆಗಳನ್ನು ಕಂಡಿವೆ. ಸ್ಪರ್ಧಿಗಳಂತೂ ಬದಲಾಗುವುದು ಮಾಮೂಲು. ಅದರ ಜೊತೆಗೆ ಸ್ಥಳ ಬದಲಾಗಿದೆ, ಮನೆ ಬದಲಾಗಿದೆ, ತಂತ್ರಜ್ಞರು, ನಿರ್ದೇಶಕರು, ಪ್ರಸಾರಕರೂ ಬದಲಾಗಿದ್ದಾರೆ. ಬೇರೆ ಬೇರೆ ವಾಹಿನಿಗಳಲ್ಲಿ ಬಿಗ್​ಬಾಸ್​ ಪ್ರಸಾರ ಕಂಡಿದೆ. ಆದರೆ ಬದಲಾಗದೇ ಇರುವುದು ಕಾರ್ಯಕ್ರಮ ನಿರೂಪಕ ಸುದೀಪ್​ ಅವರು ಮಾತ್ರ. ಸುದೀಪ್​ ಇಲ್ಲದ ಬಿಗ್​ಬಾಸ್​ ಊಹಿಸಿಕೊಳ್ಳುವುದೂ ಕಷ್ಟ ಎಂದು ಇದಾಗಲೇ ಬಿಗ್​ಬಾಸ್​ ಪ್ರೇಮಿಗಳು, ಸುದೀಪ್​ ಅಭಿಮಾನಿಗಳು ಸಾಕಷ್ಟು ಬಾರಿ ಹೇಳಿದ್ದುಂಟು.

ಇದೀಗ ಇದನ್ನೇ ಹೇಳುವ ಮೂಲಕ ಸುದೀಪ್​ ಅವರಿಗೆ ವಿಶೇಷ ವಿಡಿಯೋದ ಮೂಲಕ ನಮನ ಸಲ್ಲಿಸಿದೆ ಕಲರ್ಸ್​ ಕನ್ನಡ ವಾಹಿನಿ. ಮುಂಚಿನ ಸೀಸನ್​ಗಳಲ್ಲಿ ಸುದೀಪ್​ ಅವರು ಇರುವುದಿಲ್ಲ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಕೆಲವರು ಸುದ್ದಿಗಳನ್ನೂ ಹರಡುತ್ತಿದ್ದಾರೆ. ಇದು ಗಾಳಿಸುದ್ದಿ ಮಾತ್ರ. ಯಾವುದೇ ಅಧಿಕೃತ ಮಾಹಿತಿಗಳೂ ಬಂದಿಲ್ಲ. ಇದರ ನಡುವೆಯೇ ಕಲರ್ಸ್​ ಕನ್ನಡ ವಾಹಿನಿಯಿಂದ ಕಿಚ್ಚ ಅವರಿಗೆ ವಿಶೇಷ ಗೌರವ ಸಲ್ಲಿಸುವ ವಿಡಿಯೋ ರಿಲೀಸ್​ ಮಾಡಲಾಗಿದೆ.

ಡ್ರೋನ್​ ಪ್ರತಾಪ್​ಗೆ ಹುಷಾರು ತಪ್ಪಿದ್ದೇಕೆ? ಬಿಗ್​ಬಾಸ್​ ಮನೆಯಲ್ಲಿ ಹೇಳಿದ್ದೇನು, ಈಗ ಹೇಳ್ತಿರೋದೇನು?

ಬಿಗ್​ಬಾಸ್​ ಕನ್ನಡ 2013ರಲ್ಲಿ ಶುರುವಾದಾಗ ಸೆನ್ಸೇಷನ್​ ಕ್ರಿಯೇಟ್​ ಆಗಿತ್ತು. ಕನ್ನಡದ ಇತಿಹಾಸದಲ್ಲಿ ಹೊಸ ಚರಿತ್ರೆಗೆ ನಾಂದಿ ಹಾಡಲಾಗಿತ್ತು.  ಒಂದು ದಶಕದ ಮೈಲಿಗಲ್ಲು ಸಾಧಿಸಿರುವ ಶ್ರೇಯಸ್ಸು  ಬಾದ್​ಶಾಹ್​ ಸುದೀಪ್ ಅವರಿಗೆ ಸಲ್ಲುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.  ಬಿಗ್​ಬಾಸ್​ ಹಲವು ಬದಲಾವಣೆ ಕಂಡಿದೆ. ಸ್ಥಳ, ಸ್ಪರ್ಧಿಗಳು, ಮನೆ, ತಂತ್ರಜ್ಞರು, ನಿರ್ದೇಶಕರು ಕೊನೆಗೆ  ಪ್ರಸಾರಕರೂ ಬದಲಾಗಿದ್ದಾರೆ.  ಆದರೆ ಬದಲಾಗದೇ ಇರುವ ಶಾಶ್ವತ ಶಕ್ತಿ ನಮ್ಮೆಲ್ಲರ ಏಕಮೇವ ಅದ್ವೀತಿಯ ಸುದೀಪ್ ಎಂದು ಇದರಲ್ಲಿ ಹೇಳಲಾಗಿದೆ. ಬಿಗ್​ಬಾಸ್​ ದನಿಯಲ್ಲಿ ಈ ವಿಡಿಯೋ ರಿಲೀಸ್​ ಮಾಡಲಾಗಿದೆ​. ಪ್ರತಿವಾರ ತಪ್ಪು ತಿದ್ದುವ, ಪ್ರಬುದ್ಧ ಮಾತುಗಳಿಂದ  ಮಾರ್ಗದರ್ಶನ ನೀಡುವ  ಧೀಮಂತ ಕಿಚ್ಚ ಸುದೀಪ್​ ಅವರು. ಇವರು ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ನ್ಯಾಯವನ್ನು ಎತ್ತಿಹಿಡಿದಿದ್ದಾರೆ. ಸುದೀಪ್​ ಅವರು,  ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಇವರು ಸಾಟಿಯಿಲ್ಲದ ಸರದಾರ. ನೀವಿಲ್ಲದೇ ಬಿಗ್​ಬಾಸ್​ ಕನ್ನಡ ಊಹಿಸಲು ಸಾಧ್ಯವಿಲ್ಲ ಎಂದು ಇದರಲ್ಲಿ ಹೇಳಲಾಗಿದೆ.

ಬಿಗ್​ಬಾಸ್​ ನಡೆಸಿಕೊಡುವ ಸಮಯದಲ್ಲಿ ನಿಮ್ಮ ಘನತೆಗೆ ಕೆಲವರು  ಧಕ್ಕೆ ಉಂಟು ಮಾಡಿದ್ದಾರೆ. ನಿಮಗೆ ನೋವು ಉಂಟು ಮಾಡಿದ್ದಾರೆ. ಆದರೆ ನೀವು  ವಿಚಲಿತರಾಗದೇ, ಸಂಯಮ ಕಳೆದುಕೊಳ್ಳದೇ  ಘನತೆ ಎತ್ತಿ ಹಿಡಿದಿರುವಿರಿ. ನೀವಿತ್ತ  ಕೊಡುಗೆ, ನಿಷ್ಠೆ, ಪ್ರೀತಿ ವರ್ಣಿಸಲು ಸಾಲುವುದಿಲ್ಲ. ಮಾತುಗಳು ಸೋಲುತ್ತವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​  ಮಾಡಿದ್ದು, ಈ ಮಾತು ನಿಜ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಮ್ಮಲ್ಲಿ ಅಪಾರ ಅಭಿಮಾನವಿದೆ. ಆದರೆ ಬಿಗ್​ಬಾಸ್​ನಂಥ ಕಾರ್ಯಕ್ರಮಕ್ಕೆ ನೀವು ಹೋಗುವುದು ಸರಿಯಲ್ಲ ಎಂದೂ ಹೇಳುತ್ತಿದ್ದಾರೆ.  

ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

Latest Videos
Follow Us:
Download App:
  • android
  • ios