Asianet Suvarna News Asianet Suvarna News

ಡಿಸೆಂಬರ್ 5ರಂದು 'ತೇರಾ ಯಾರ್ ಹೂಂ ಮೈಂ' ನಟಿ ಸಯಂತನಿ ಘೋಷ್ ಮದುವೆ!

ಹುಟ್ಟೂರಿನಲ್ಲಿ ಫಿಟ್ನೆಸ್ ಫ್ರೀಕ್ ಅನುರಾಗ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ಸಯಂತನಿ.....

Indian television actress Sayantani Ghosh to tie the knot with Anugrah on December 5th vcs
Author
Bangalore, First Published Nov 14, 2021, 4:26 PM IST
  • Facebook
  • Twitter
  • Whatsapp

ಹಿಂದಿ ಜನಪ್ರಿಯ (Hindi daily soap) 'ತೇರಾ ಯಾರ್ ಹೂಂ ಮೈಂ' ಧಾರಾವಾಹಿ ಖ್ಯಾತಿಯ ಸಯಂತನಿ ಘೋಷ್ (Sayantani Ghosh) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ದಿನಾಂಕವನ್ನು ಅನೌನ್ಸ್ ಮಾಡುವ ಮೂಲಕ ತಮ್ಮ ಭಾವಿ ಪತಿಯನ್ನು ನೆಟ್ಟಿಗರಿಗೆ ಪರಿಚಯಿಸಿಕೊಟ್ಟಿದ್ದಾರೆ. ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುವ ಮದುವೆ ಇದಾಗಿದ್ದು ಸರಳ ಮದುವೆ ಎಂದಿದ್ದಾರೆ. 

ಸಯಂತನಿ ಅವರ ಹುಟ್ಟೂರು ಕೋಲ್ಕತ್ತಾದಲ್ಲಿ (Kolkata) ಮದುವೆಯಲ್ಲಿ ನಡೆಯಲಿದ್ದು, ಅನುಗ್ರಹ (Anugrah Tiwari) ಅವರ ಹುಟ್ಟೂರು ಜೈಪುರದಲ್ಲಿ (Jaipur) ಅದ್ಧೂರಿಯಾಗಿ ಆರತಕ್ಷತೆ (Reception) ಹಮ್ಮಿಕೊಂಡಿದ್ದಾರೆ. 'ಸಯಂತನಿ ಮತ್ತು ಅನುರಾಘ್  ಅವರಿಬ್ಬರು  ಸಿಂಪಲ್ ಮದುವೆ ಬೇಕು ಎಂದು ಹೇಳಿದ್ದಾರೆ. ಶೋ ಚಿತ್ರೀಕರಣ ಮಾಡುತ್ತಿರುವ ಸಯಂತನಿ ಅವರು ಒಂದು ವಾರಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ' ಎಂದು ಕೆಲವು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. 

ಪಡ್ಡೆ ಹುಡುಗರ ನಿದ್ರೆಗೆಡಿಸಿದ 'ಸರ್ಪಟ್ಟ' ಚಿತ್ರದ ನಾಯಕಿ ಸಂಚನಾ ನಟರಾಜನ್!

ಎಂಟು ವರ್ಷಗಳ ಕಾಲ ಸಯಂತನಿ ಮತ್ತು ಅನುಗ್ರಹ ಪ್ರೀತಿಸುತ್ತಿದ್ದರು. ಎಂಟನೇ ಲವ್ anniversary ದಿನದಂದು ಇಬ್ಬರು ತಮ್ಮ ಕೈ ಮೇಲೆ ಹೆಸರು ಟ್ಯಾಟೂ (Tatto) ಹಾಕಿಸಿಕೊಂಡಿದ್ದರು. 'ಟ್ಯಾಟೂ ಹಾಕಿಸಿಕೊಳ್ಳುವ ಪ್ಲಾನ್ ಬರಲು ಕಾರಣ ಏನು ಅಂದ್ರೆ ನಾವು ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯ ಬೇಡ ಎಂದು ನಿರ್ಧಾರ ಮಾಡಿದ್ವಿ ಹೀಗಾಗಿ ಬದಲಿಗೆ ಟ್ಯಾಟೂ ಆಯ್ಕೆ ಮಾಡಿಕೊಂಡೆವು. ಮೊದಲಿಗೆ ನಾನು ಕೈ ಮಧ್ಯ ಬೆರಳಿಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂತಿದ್ವಿ ಆದರೆ ಕೊರೋನಾ ಕಾಟದಿಂದ ಸ್ಯಾನಿಟೈಸರ್‌ (Sanitizer) ಹೆಚ್ಚು ಬಳಸಬೇಕು ಕೈಗೆ ತೊಂದರೆ ಆಗುತ್ತದೆ ಎಂದು ಬೇಡ ಎಂದರು. ಬ್ಯಾಂಡ್ ರೀತಿ ಮಾಡಿಸಿಕೊಂಡೆವು. ನನಗೆ ಇದು ಎರಡನೇ ಟ್ಯಾಟೂ ಆದರೆ ಅನುಗ್ರಹಗೆ ಮೊದಲ ಟ್ಯಾಟೂ' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 

'ನಾನು ಬಾಲ್ಯದಿಂದ ನನ್ನ ತಾಯಿಗೆ ಹೇಳುತ್ತಿದ್ದೆ ನನ್ನ ಮದುವೆ ಊಟದಲ್ಲಿ ಪಾನ್ (Paan) ಮತ್ತು ಐಸ್‌ ಕ್ರೀಮ್ (Ice cream) ಇರಲೇಬೇಕು. ನಾನು ಭಾಗಿಯಾಗುವ ಪ್ರತಿಯೊಂದು ಮದುವೆಯಲ್ಲೂ ತುಂಬಾ ಇಷ್ಟ ಪಟ್ಟು ತಿಂದು ಸವಿಯುತ್ತಿದ್ದೆ. ನನಗೆ ಸೀರೆ (Saree) ಅಂದ್ರೆ ತುಂಬಾನೇ ಇಷ್ಟ. ನನ್ನ ಮದುವೆ ಬಟ್ಟೆ ಬಗ್ಗೆ ಕನಸು ಕಾಣುತ್ತಿದ್ದವಳು ನಾನು. ಕೆಂಪು ಬಣ್ಣದ ಬನಾರಸ್‌ ಸೀರೆ, ಕೋಲ್ಡ್‌ ಕಣ್ಣು (Kohled eye) ಮತ್ತು ಸಿಂಧೂರ. ಇದು ನನ್ನ ಲುಕ್ ಆಗಿರಬೇಕು. ಕಳೆದ ವರ್ಷ ನನ್ನ ಅಜ್ಜಿ ತೀರಿಕೊಂಡರು. ಅವರು ಕೊಟ್ಟಿದ್ದ ಒಂದು ಸೀರೆಯನ್ನು ಯಾವುದಾದರೂ ಒಂದು ಸಂಭ್ರಮಕ್ಕೆ ಧರಿಸುವೆ' ಎಂದು ಖಾಸಗಿ ಸಂದರ್ಶನದಲ್ಲಿ ಸಯಂತನಿ ಹೇಳಿದ್ದಾರೆ.

 

Follow Us:
Download App:
  • android
  • ios