ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಯಂತ್‌ನನ್ನು ಜಾನು ನಿಯಂತ್ರಿಸುತ್ತಿದ್ದಾಳೆ. ಅಜ್ಜಿಯ ಆರೋಗ್ಯ ಸುಧಾರಿಸುತ್ತಿದ್ದಂತೆ, ಜಯಂತ್ ಆತಂಕಿತನಾಗಿದ್ದಾನೆ. ಜಾನು ಆತನಿಗೆ ಸಿಹಿ ತಿನ್ನಿಸಿ, ಮಾತಿನಿಂದ ನೋಯಿಸುತ್ತಿದ್ದಾಳೆ.

Jayanth and Janu: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯ ಜಯಂತ್ ಮತ್ತು ಜಾಹ್ನವಿ ಪಾತ್ರಗಳು ಜನರು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇಷ್ಟು ದಿನ ಸೈಕೋ ರೀತಿ ಜಯಂತ್‌ಗೆ ಚಿನ್ನುಮರಿ ಮೂಗುದಾರ ಹಾಕುತ್ತಿದ್ದಾಳೆ. ಅಜ್ಜಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ವಿಷಯ ತಿಳಿದು ವಿಚಲಿತನಾಗಿ ಲಕ್ಷ್ಮೀ ನಿವಾಸಕ್ಕೆ ಹೊರಟಿದ್ದ ಜಯಂತ್‌ನನ್ನು ತಡೆದು ಚಿನ್ನುಮರಿ ನಿಲ್ಲಿಸಿದ್ದಾಳೆ. ಜಾಣತನದಿಂದ ಆತನ ಮಾತನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಮನೆಯಲ್ಲಿರಿಸಿಕೊಂಡಿದ್ದಾಳೆ. ಅಜ್ಜಿಯ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿರುವ ವಿಷಯವನ್ನು ವೀಣಾ ಅತ್ತಿಗೆ ಕರೆ ಮಾಡಿ ತಿಳಿಸಿದ್ದರು. ಅಜ್ಜಿ ಎರಡ್ಮೂರು ಬಾರಿ ತನ್ನ ಹೆಸರು ಕನವರಿಸಿರುವ ವಿಷಯ ತಿಳಿಯುತ್ತಲೇ ಜಯಂತ್ ಆತಂಕಕ್ಕೊಳಗಾಗಿದ್ದನು. 

ಪ್ರೀತಿಯ ಮಡದಿ ಜಾನುಗೆ ಮಾತು ನೀಡಿದ್ದರಿಂದಲೇ ಮನೆಯಲ್ಲೇ ಬಂಧಿಯಾಗಿರೊ ಜಯಂತ್ ತನ್ನ ಎಲ್ಲಾ ಸತ್ಯ ಬಯಲಾಗುತ್ತೋ ಎಂಬ ಆತಂಕದಲ್ಲಿದ್ದಾನೆ. ಅಜ್ಜಿಯನ್ನು ನೋಡಲು ಹೋದ್ರೆ, ತನ್ನಿಂದಲೇ ಈ ರೀತಿ ಆಯ್ತು ಎಂಬ ವಿಷಯವನ್ನು ಹೇಳಬೇಕೆಂದು ಜಾನು ಕಂಡೀಷನ್ ಹಾಕಿದ್ದಾನೆ. ಮೊಬೈಲ್‌ನಲ್ಲಿ ಅಜ್ಜಿಯ ಚಲನವಲನ ನೋಡೋಣ ಅಂದ್ರೆ ಕೋಣೆಯಲ್ಲಿರಿಸಿದ್ದ ಕ್ಯಾಮೆರಾವನ್ನು ಜಾನು ನಾಶ ಮಾಡಿ ಬಂದಿದ್ದಾಳೆ. ಜಾನು ತವರಿನಲ್ಲಿ ಏನಾಗ್ತಿದೆ ಎಂದು ತಿಳಿದುಕೊಳ್ಳಲು ಜಯಂತ್ ಕಾತುರನಾಗಿದ್ದಾನೆ. 

ಇದನ್ನೂ ಓದಿ: ಕೊನೆಗೂ ಜಾನು ಬುದ್ಧಿವಂತೆ ಆದ್ಳು.. ಹೊಡಿರಿ ಚಪ್ಪಾಳೆ; ಒಂಟಿಯಾದ ಸೈಕೋ ಜಯಂತ್!

ಸಿಹಿ ಮಾಡಿದ ಜಾನು
ಅಜ್ಜಿಯ ಚೇತರಿಕೆ ವಿಷಯ ತಿಳಿದ ಜಾನು ಮನೆಯಲ್ಲಿ ಸಿಹಿ ತಯಾರಿಸಿದ್ದಾಳೆ. ಅಜ್ಜಿ ಆರೋಗ್ಯ ಸುಧಾರಣೆ ವಿಷಯ ಕೇಳಿ ಬಾಲ ಸುಟ್ಟ ಬೆಕ್ಕಿನಂತಾಗಿರುವ ಜಯಂತ್‌ಗೆ ತಿನ್ನಲು ನೀಡಿದ್ದಾಳೆ. ಈಗ್ಯಾಕೆ ಸಿಹಿ ಎಂದು ಕೇಳಿದ್ದಕ್ಕೆ, ಅಜ್ಜಿ ಹುಷಾರು ಆಗೋದು ನಿಮಗೆ ಇಷ್ಟವಿರಲಿಲ್ಲ ಅಲ್ಲವಾ ಎಂದು ಮೊಣಚು ಮಾತುಗಳಿಂದ ಜಯಂತ್‌ನ ಹೃದಯಕ್ಕೆ ತೀಕ್ಷ್ಣ ಬಾಣ ಬಿಟ್ಟಿದ್ದಾಳೆ. ಇಷ್ಟು ಮಾತ್ರವಲ್ಲದೇ ಅಕ್ಕ ಭಾವನಾಗೂ ಕರೆ ಮಾಡಿರುವ ಜಾನು, ಅಜ್ಜಿಯ ಆರೋಗ್ಯ ಚೇತರಿಕೆ ಕಾಣುತ್ತಿರುವ ಸಂತಸದ ವಿಷಯವನ್ನು ಹಂಚಿಕೊಂಡಿದ್ದಾಳೆ. 

ಈ ಸಂತಸದ ವಿಷಯ ತಿಳಿಯುತ್ತಲೇ ನಾನು ಹೋಗಿ ಅಜ್ಜಿಯನ್ನು ನೋಡಿಕೊಂಡು ಬರೋದಾಗಿ ಭಾವನಾ ಹೇಳಿದ್ದಾಳೆ. ಮನೆಯಲ್ಲಿ ಜಯಂತ್ ಇದಾರಾ ಎಂದು ಭಾವನಾ ಕೇಳುತ್ತಾಳೆ. ಇದಕ್ಕೆ, ಅಯ್ಯೋ.. ಅವರು ಎಲ್ಲಿಗೆ ಹೋಗ್ತಾರೆ ಅಕ್ಕ... ಅವರಿಗೆ ನನ್ನ ಪಕ್ಕ ಇರೋದು ಬಿಟ್ರೆ ಬೇರೆ ಏನು ಕೆಲಸ ಇದೆ. ಯಾವಾಗಲೂ ನನ್ನ ಜೊತೆಯಲ್ಲಿಯೇ ಇರುತ್ತಾರೆ. ಇವಾಗ ತಾನೇ ನಾನೇ ಸ್ವೀಟ್ ಮಾಡಿ ಅವರಿಗೆ ತಿನ್ನಿಸಿದೆ ಎಂದು ಹೇಳುತ್ತಾಳೆ. ಜಾನು ಮಾತಿನ ವರಸೆ ಭಾವನಾಗೆ ಅನುಮಾನ ಹುಟ್ಟಿಸಿದೆ. ಇತ್ತ ಜಾನು ಆಡುವ ಒಂದೊಂದು ಮಾತು ಜಯಂತ್‌ ಹೃದಯಕ್ಕೆ ಬೆಂಕಿಯ ಬಾಣ ಬಿಟ್ಟಂತೆ ಆಗಿದೆ.

ಇದನ್ನೂ ಓದಿ: ಚಿನ್ನುಮರಿ ಆಟಕ್ಕೆ ಜಯಂತ್ ಕಂಗಾಲು, ಸದ್ಯ ಈಗ್ಲಾದ್ರೂ ಜಾನ್ವಿಗೆ ಬುದ್ಧಿ ಬಂತೆಂದ ವೀಕ್ಷಕರು!