ಕುರುಡಿ ಆಟ ಶುರು ಮಾಡಿದ ಚಾರು; ಅಮ್ಮ ಮಗಳ ನಾಟಕದಲ್ಲಿ ರಾಮಚಾರಿ ಬಾಳು ಬರ್ಬಾದು ಎಂದ ನೆಟ್ಟಿಗರು
ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಮಾಡಿದ್ದ ಒಂದು ತಪ್ಪಿನಿಂದ ಚಾರುಲತಾ ದೃಷ್ಟಿ ಕಳೆದುಕೊಂಡಿದ್ದಾಳೆ. ಆಕೆಗೆ ಮರಳಿ ದೃಷ್ಟಿ ಬರಲ್ಲ ಅಂದುಕೊಳ್ಳುತ್ತಿರುವಾಗಲೇ ಮತ್ತೆ ದೃಷ್ಟಿ ಬಂದಿದೆ. ಆದರೆ ಆಕೆ ಕಣ್ಣಿದ್ದೂ ಕುರುಡಿಯಾಗುತ್ತಿದ್ದಾಳೆ. ಇದಕ್ಕೆ ಕಾರಣ ರಾಮಾಚಾರಿ ಮೇಲಿನ ಅವಳ ಪ್ರೀತಿ.
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಇದರಲ್ಲಿ ಕೆಲವು ಸಮಯದ ಹಿಂದೆ ಒಂದು ಹೈ ಡ್ರಾಮಾ ನಡೆದಿದೆ. ಸಾವಿನಂಚಿಗೆ ಸಿಲುಕಿ ಸತ್ತೇ ಹೋಗಿದ್ದಾಳೆ ಅಂದುಕೊಂಡಿದ್ದ ಚಾರುವನ್ನು ರಾಮಾಚಾರಿ ರಕ್ಷಿಸಿ ಕಾಪಾಡಿದ್ದ. ಅಲ್ಲಿವರೆಗೆ ರಾಮಾಚಾರಿಯ ಬದ್ಧ ದ್ವೇಷಿಯಾಗಿದ್ದ ಚಾರುವಿಗೆ ಆಗ ಚಾರು ಮೇಲೆ ಭಾವನೆ ಬದಲಾಗಿದೆ. ಆತನ ಮೇಲೆ ಪ್ರೀತಿಯಾಗಿದೆ. ಆದರೆ ಅಷ್ಟರಲ್ಲಾಗಲೇ ಕ್ಯಾನ್ಸರ್‌ಗೆ ತುತ್ತಾಗಿದ್ದ ಅತ್ತಿಗೆಗೆ ಚಿಕಿತ್ಸೆ ಕೊಡಿಸಲೆಂದು ರಾಮಾಚಾರಿ ಹಗಲಿರುಳು ಕಷ್ಟಪಟ್ಟು ಮಾಡಿದ್ದ ಪ್ರಾಜೆಕ್ಟ್ ಅನ್ನು ಚಾರು ಕದ್ದುಬಿಟ್ಟಿದ್ದಳು. ಆ ಪ್ರಾಜೆಕ್ಟ್ ನಲ್ಲಿ ಬಂದ ಹಣವನ್ನು ಬಿಂದಾಸ್ ಆಗಿ ಖರ್ಚು ಮಾಡಲು ಬಯಸಿದ್ದಳು. ಆಕೆಯಿಂದಲೇ ತನ್ನ ಅತ್ತಿಗೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವು ಪಟ್ಟ ರಾಮಾಚಾರಿಗೆ ಆಕೆಯ ಮೇಲೆ ಸಿಟ್ಟು ಬಂದಿತ್ತು. ಆದರೆ ಆಕೆಗೆ ಅಷ್ಟರಲ್ಲಾಗಲೇ ರಾಮಾಚಾರಿ ಮೇಲೆ ಪ್ರೀತಿ ಹುಟ್ಟಿತ್ತು. ಆಕೆ ತನ್ನನ್ನು ಪ್ರೀತಿಸುವಂತೆ ರಾಮಾಚಾರಿಗೆ ದುಂಬಾಲು ಬಿದ್ದಿರುವಾಗಲೇ ರಾಮಾಚಾರಿ ಆಕೆಯನ್ನು ತಳ್ಳಿದ್ದ. ಆಕೆ ಕೆಮಿಕಲ್ ಮೇಲೆ ಬಿದ್ದು ಅವಳ ಕಣ್ಣೇ ಹೋಗಿತ್ತು.
ತನ್ನಿಂದ ಚಾರು ಕಣ್ಣು ಹೋಯಿತು ಎಂದು ಪರಿತಪಿಸಿದ ರಾಮಾಚಾರಿ ಆಕೆಗೆ ಮರಳಿ ಕಣ್ಣು ಬರಿಸಲು ಇನ್ನಿಲ್ಲದಂತೆ ಒದ್ದಾಡಿದ್ದಾನೆ. ಏನೇನೋ ಚಿಕಿತ್ಸೆ ಕೊಡಿಸಿ ಹೋದ ಕಣ್ಣು ಮತ್ತೆ ಬರುವಂತೆ ಮಾಡಲು ಹೆಣಗುತ್ತಿದ್ದಾನೆ. ಆತನ ಒಂದು ಪ್ರಯತ್ನ ಆತನ ಮನೆಯವರಿಂದಲೇ ಹಾಳಾಯ್ತು. ಅದಕ್ಕಾಗಿ ಮನೆಯವರೆಲ್ಲರಿಂದ ದೂರ ಬಂದು ಒಂದು ಆಶ್ರಮದಲ್ಲಿ ಆಕೆಗೆ ಚಾರಿ ಚಿಕಿತ್ಸೆ ಕೊಡಿಸುತ್ತಿದ್ದಾನೆ. ಆ ಗುರುಗಳು ಮಾಡಿದ ಚಿಕಿತ್ಸೆಯಿಂದ ಚಾರುವಿಗೇನೋ ಕಣ್ಣುಗಳು ಮರಳಿ ಬಂದಿವೆ. ಆದರೆ ಇಲ್ಲೀವರೆಗೆ ಕಣ್ಣುಗಳಿಲ್ಲವೆಂದು ಕೊರಗುತ್ತಿದ್ದ ಚಾರುವಿಗೆ ಈಕ ತನ್ನ ಕಣ್ಣುಗಳೇ ಬೇಡವಾಗಿದೆ. ಕಣ್ಣಂತೆ ತನ್ನನ್ನು ಕಾಪಾಡುವ ರಾಮಾಚಾರಿಯೇ ತನ್ನ ಕಣ್ಣುಗಳಿಗಿಂತ ಮುಖ್ಯವಾಗಿದ್ದಾನೆ.
Lakshana serial : ನೀನೆಷ್ಟು ಒಳ್ಳೇವ್ಳು ಖಾಲಿಡಬ್ಬಿ, ನಾ ನಿನ್ನ ಹತ್ರಕ್ಕೂ ಬರಲ್ಲ ಕಣೇ ಅಂತಿದ್ದಾನೆ ಭೂಪತಿ!
ಇತ್ತ ಗುರುಗಳು ರಾಮಾಚಾರಿ ಚಾರುವನ್ನು ನೋಡಿಕೊಳ್ಳುತ್ತಿದ್ದ ರೀತಿ, ಆತ ಅವಳ ಮೇಲೆ ತೋರುತ್ತಿದ್ದ ಕಾಳಜಿ ಕಂಡು ಬೆರಗಾಗಿದ್ದಾರೆ. ಆತನಿಗೆ ಅವಳ ಮೇಲೆ ಪ್ರೀತಿ(Love) ಇದೆ ಎಂದೇ ಅವರು ನಂಬಿದ್ದಾರೆ. ಇತ್ತ ಚಾರುವೂ ಹಾಗೇ ನಂಬಿದ್ದಾಳೆ. ಆದರೆ ಗುರುಗಳು ಈ ಬಗ್ಗೆ ರಾಮಾಚಾರಿಗೆ ಕೇಳಿದಾಗ ಆತ ತನಗೆ ಚಾರುವಿನ ಬಗ್ಗೆ ಅಂಥಾ ಯಾವ ಭಾವನೆಗಳೂ ಇಲ್ಲ ಅನ್ನೋ ಮಾತನ್ನು ಹೇಳಿದ್ದಾನೆ. ಈ ಚಿಕಿತ್ಸೆ ನಂತರ ಚಾರುವಿಗೆ ಕಣ್ಣು ಬರುತ್ತದೆ. ಆಮೇಲೆ ಅವಳ್ಯಾರೋ, ತಾನ್ಯಾರೋ ಅನ್ನೋ ಮಾತುಗಳನ್ನು ಹೇಳಿದ್ದಾನೆ.
ಇದನ್ನು ಕೇಳಿ ಗುರುಗಳಿಗೆ ಅಚ್ಚರಿ ಆದರೆ ಚಾರುವಿಗೆ ಬಹಳ ನೋವಾಗಿದೆ(Pain). ಆಕೆ ರಾಮಾಚಾರಿಯನ್ನ ಈಗ ಅದೆಷ್ಟು ಪ್ರೀತಿಸುತ್ತಿದ್ದಾಳೆ ಅಂದರೆ ಆಕೆಗೆ ಅವನನ್ನು ಬಿಟ್ಟು ಬದುಕೋ ಶಕ್ತಿಯೇ ಇಲ್ಲ. ತನಗೀಗ ಕಣ್ಣು ಬಂದರೆ ರಾಮಾಚಾರಿ ದೂರವಾಗುತ್ತಾನೆ. ರಾಮಾಚಾರಿಯಿಂದ ದೂರವಾಗಿ ತನಗೆ ಬದುಕೋದಕ್ಕೆ ಅಸಾಧ್ಯ. ಅದರ ಬದಲಿಗೆ ಕಣ್ಣುಗಳೇ ಬಂದಿಲ್ಲ ಎಂದು ಸುಳ್ಳು ಹೇಳಿದರೆ ಆತ ತನ್ನ ಜೊತೆಗೇ ಇರುತ್ತಾನೆ. ಹೀಗಾಗಿ ತಾನು ಕಣ್ಣು ಬಂದರೂ ಬಂದಿಲ್ಲ ಅಂತ ಅವಳು ಸುಳ್ಳು ಹೇಳಿದ್ದಾಳೆ. ಅವಳ ಮಾತು ರಾಮಾಚಾರಿಗೆ, ಗುರುಗಳಿಗೆ ಆಘಾತ(Shock) ತಂದಿದೆ.
Jothe jotheyali: ಮತ್ತೆ ಜೊತೆಯಾದ್ರಾ ಅನಿರುದ್ಧ, ಮೇಘಾ ಶೆಟ್ಟಿ? ಕೇಕ್ ಹಿಂದಿನ ಗುಟ್ಟೇನು!
ಆದರೆ ಚಾರುವಿಗೆ ತನ್ನ ಪ್ರೀತಿಯೇ ಮುಖ್ಯವಾಗಿದೆ. ಜನರಿಗೆ ಮಾತ್ರ ಇದನ್ನು ನೋಡಿ ನೋಡಿ ಸಾಕಾಗಿದೆ. ಈ ಕಣ್ಣು ಪುರಾಣ ಒಮ್ಮೆ ಸ್ಟಾಪ್(Stop) ಮಾಡಿ ಅಂತ ಅವರು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ತಿದ್ದಾರೆ. ಮತ್ತೆ ಮತ್ತೆ ಸುಳ್ಳು ಪುರಾಣಗಳೇ ಮುಂದುವರಿಯುತ್ತಿವೆ. ಸ್ಟೋರಿ ಸರಿಯಾದ ದಾರಿಯಲ್ಲಿ ಹೋಗ್ತಿಲ್ಲ ಅಂತಿದ್ದಾರೆ ಜನ.