Jothe jotheyali: ಮತ್ತೆ ಜೊತೆಯಾದ್ರಾ ಅನಿರುದ್ಧ, ಮೇಘಾ ಶೆಟ್ಟಿ? ಕೇಕ್ ಹಿಂದಿನ ಗುಟ್ಟೇನು!

ಜೊತೆ ಜೊತೆಯಲಿ ಸೀರಿಯಲ್‌ನ ಒಂದು ಕಾಲದ ಫೇಮಸ್ ಜೋಡಿ ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ಕೇಕ್ ಕಟ್ ಮಾಡಿದ್ದಾರೆ. ಅನಿರುದ್ಧ ಜೊತೆ ಜೊತೆಯಲಿ ಸೀರಿಯಲ್‌ನಿಂದ ಆಚೆ ಹೋದ್ಮೇಲೆ ಟಿಆರ್ ಪಿ ಫುಲ್ ಇಳಿದಿತ್ತು. ಅದಕ್ಕಾಗಿ ಅವರನ್ನು ಮತ್ತೆ ಕರೆತರೋ ಪ್ಲಾನ್ ನಡೀತಿದ್ಯಾ?

Aniruddha and Megha Shetty, who were the popular couple of the serial Jothe Jotheyai, have met

ಜೊತೆ ಜೊತೆಯಲಿ ಸೀರಿಯಲ್ ಕೊನೆ ಮುಟ್ಟೋ ಹಾಗೆ ಕಾಣ್ತಿಲ್ಲ ಅನ್ನೋದು ಈ ಸೀರಿಯಲ್ ವೀಕ್ಷಕರ ಗೊಣಗಾಟ. ಹಿಂದೆ ಈ ಸೀರಿಯಲ್‌ನಲ್ಲಿ ದೊಡ್ಡ ಬದಲಾವಣೆ ಆಗಿತ್ತು. ಜೊತೆ ಜೊತೆಯಲಿ ಸೀರಿಯಲ್ ಟೀಮ್ ಹಾಗೂ ಅನಿರುದ್ಧ ನಡುವೆ ಭಿನ್ನಾಪ್ರಾಯ ಮೂಡಿಬಂದು ಅವರನ್ನು ಜೊತೆ ಜೊತೆಯಲಿ ಸೀರಿಯಲ್‌ನ ಆರ್ಯವರ್ಧನ್ ಪಾತ್ರದಿಂದ ಕೈ ಬಿಡಲಾಗಿತ್ತು. ಈ ಗೊಂದಲ ತಿಳಿ ಆಗಬಹುದು, ಗಲಾಟೆ ಎಲ್ಲ ಮುಗಿದು ಅನಿರುದ್ಧನೇ ಆ ಪಾತ್ರದಲ್ಲಿ ಮುಂದುವರಿಯಬಹುದು ಅನ್ನೋದು ಎಲ್ಲರ ನಿರೀಕ್ಷೆ ಆಗಿತ್ತು. ಏಕೆಂದರೆ ಆ ಪಾತ್ರಕ್ಕೆ ಅಂಥಾ ಸ್ಕೋಪ್ ಇತ್ತು. ಅಷ್ಟೇ ಅಲ್ಲ, ನಟ ಅನಿರುದ್ಧ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಆರ್ಯವರ್ಧನ್ ಪಾತ್ರದಿಂದಲೇ ಜನ ಅವರನ್ನು ಗುರುತಿಸುತ್ತಿದ್ದರು. ಹಾಗೆ ನೋಡಿದರೆ ಸಿನಿಮಾ ರಂಗದಲ್ಲಿ ಅನಿರುದ್ಧ ಹೇಳಿಕೊಳ್ಳುವಂಥಾ ಪಾತ್ರಗಳನ್ನೇನೂ ಮಾಡಿಲ್ಲ. ಆರಂಭದಲ್ಲಿ ಬಂದ ಕೆಲವು ಪಾತ್ರಗಳಷ್ಟೇ ಅವರಿಗೆ ಕೊಂಚ ಹೆಸರು ತಂದುಕೊಟ್ಟಿದ್ದವು. ಅನಿರುದ್ಧ ಅವರಿಗೆ ಮರುಜೀವ ನೀಡಿದ್ದು 'ಜೊತೆ ಜೊತೆಯಲಿ' ಸೀರಿಯಲ್‌ನ ಆರ್ಯವರ್ಧನ್ ಪಾತ್ರ. ಈ ಪಾತ್ರಕ್ಕಾಗಿ ಅವರ ಪೆಪ್ಪರ್ ಸಾಲ್ಟ್ ಲುಕ್ ಸಾಕಷ್ಟು ಫೇಮಸ್ ಆಗಿತ್ತು. ಜನ ಈ ಪಾತ್ರವನ್ನು ಆಸ್ಥೆಯಿಂದ ಫಾಲೋ ಮಾಡ್ತಿದ್ರು.

ಆದರೆ ದುರಾದೃಷ್ಟವಶಾತ್ ಅಭಿಮಾನಿಗಳ ನಿರೀಕ್ಷೆಯೆಲ್ಲ ಹುಸಿಯಾಗಿ ಅನಿರುದ್ಧ ಅವರನ್ನು ಈ ಪಾತ್ರದಿಂದ ಕೈ ಬಿಡಲಾಯ್ತು. ಒಂದು ಹಂತದ ಜನಪ್ರಿಯತೆ ನಂತರ ಕಲಾವಿದರು ಸುಮ್ಮ ಸುಮ್ಮನೇ ನಖರಾ ಮಾಡ್ತಾರೆ, ಸರಿಯಾಗಿ ಡೇಟ್ಸ್ ಕೊಡಲ್ಲ, ಸೀರಿಯಲ್ ಟೀಮ್ ಜೊತೆಗೆ ಸಹಕರಿಸೋದಿಲ್ಲ ಅನ್ನೋದು ಸೀರಿಯಲ್ ಸೆಟ್‌ಗಳಲ್ಲಿ ಕೇಳಿ ಬರುವ ಮಾತು. ಅನಿರುದ್ಧ ಅವರನ್ನು ಆ ಪಾತ್ರದಿಂದ ಕೈ ಬಿಟ್ಟಿದ್ದು ಕಿರಿಕ್ ಮಾಡೋ ಒಂದಿಷ್ಟು ಕಲಾವಿದರಿಗೆ ಪಾಠ ಆಗಲಿ ಅಂತಲೂ ಕೆಲವರು ಮಾತಾಡಿಕೊಂಡಿದ್ದರು. ಏನೇ ಆದರೂ ಒಬ್ಬ ನಟನ ಜನಪ್ರಿಯತೆಗೆ ಇನ್ನೊಬ್ಬರನ್ನು ರಿಪ್ಲೇಸ್ ಮಾಡಲಾಗದು ಅನ್ನೋದು ಈ ಪ್ರಕರಣದಿಂದ ಸಾಬೀತಾಯ್ತು. ಆಮೇಲೆ ಒಂದಿಷ್ಟು ಮೀಡಿಂಗ್ ನಂತರ ಆರೂರು ಜಗದೀಶ್ ಮತ್ತು ಅನಿರುದ್ಧ ಕ್ಯಾಮರ ಎದುರು ಜೊತೆಯಾಗಿ ಫೋಸ್ ಕೊಟ್ರು. ಅನಿರುದ್ಧ ಅವರೇ, ನಾವೆಲ್ಲ ಯಾವತ್ತಿದ್ದರೂ ಒಂದೇ, ಇಂಥಾ ಸಣ್ಣಪುಟ್ಟ ಜಗಳಗಳೆಲ್ಲ ನಡೀತಿರುತ್ತವೆ. ಒಂದು ಮನೆ ಅಂದಮೇಲೆ ಇದೆಲ್ಲ ಇದ್ದಿದ್ದೇ ಅಲ್ವಾ? ಅನ್ನೋ ಮಾತು ಹೇಳಿದರು. ವಿಧಿಯಿಲ್ಲದೇ ಆರೂರು ಜಗದೀಶ್ ಅವರೂ ಇದಕ್ಕೆ ತಲೆಯಾಡಿಸಿ ಕಷ್ಟಪಟ್ಟು ಮುಗುಳ್ನಕ್ಕರು.

ಕನ್ನಡತಿ ನಂತರ ಮತ್ತೊಂದು ಜನಪ್ರಿಯ ಸೀರಿಯಲ್ ಹಿಂದಿಗೆ ಡಬ್ ಆಗ್ತಿದೆ!

ಈಗ ಅನಿರುದ್ಧ ಮತ್ತು ಅವರ ಜೊತೆ ಈ ಸೀರಿಯಲ್‌ನಲ್ಲಿ ಅನು ಸಿರಿಮನೆಯಾಗಿ ನಟಿಸುತ್ತಿದ್ದ ಮೇಘಾ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮೇಘಾ ಶೆಟ್ಟಿ ಮತ್ತು ಅನಿರುದ್ಧ ಜೊತೆಗಿರುವ ಫೋಟೋ(Photo) ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗ್ತಿದೆ. ಮತ್ತೆ ಅವರಿಬ್ಬರೂ ಜೊತೆಯಾಗಿ ಈ ಸೀರಿಯಲ್‌ನಲ್ಲಿ ಆಕ್ಟ್ ಮಾಡ್ತಿದ್ದಾರ ಅನ್ನೋ ಪ್ರಶ್ನೆಯೂ ಬಂದಿದೆ. ಆದರೆ ನಿರೀಕ್ಷೆಗಳೇನೋ ಬೆಟ್ಟದಷ್ಟಿರುತ್ತೆ, ಅದರಲ್ಲಿ ಕಾರ್ಯರೂಪಕ್ಕೆ ಬರೋದು ಕೆಲವಷ್ಟೇ. ಹೀಗಾಗಿ ಮೇಘಾ ಶೆಟ್ಟಿ ಅನಿರುದ್ಧ ಮನೆಗೆ ಹೋಗಿರೋದು ಅವರಿಗೆ ಬರ್ತ್ ಡೇ ವಿಶ್(Birthday wish) ಮಾಡೋದಕ್ಕಷ್ಟೇ ಅನ್ನೋ ಸತ್ಯ ಕೊಂಚ ಒಗರಾಗಿದ್ರೂ ಒಪ್ಪಿಕೊಳ್ಳದೇ ವಿಧಿಯಿಲ್ಲ.

 

Aniruddha and Megha Shetty, who were the popular couple of the serial Jothe Jotheyai, have met

ಅನಿರುದ್ಧ ಹೊಸ ಮನೆ ಗೃಹಪ್ರವೇಶಕ್ಕೂ ಮೇಘಾ ಶೆಟ್ಟಿ ಆಗಮಿಸಿದ್ದರು. ಸೋ ಸೀರಿಯಲ್ ಬಿಟ್ಟು ಹೋದರೂ ರಿಯಲ್ ಅನು ಆರ್ಯ ನಡುವೆ ಹಿಂದಿನ ಸೌಹಾರ್ದವೇ ಇದೆ ಅನ್ನೋದಂತೂ ಇದರಿಂದ ಸಾಬೀತಾಗಿದೆ. ಆದರೆ ಈ ಜೋಡಿ ಮತ್ತೆ ಜೊತೆಯಾಗಿ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳೋ ಸೀನ್(Scene) ಎಲ್ಲ ಇರೋದಿಲ್ಲ ಅನ್ನೋದೂ ಗೊತ್ತಾಗಿದೆ. ಎಲ್ಲಾದರೂ ನಿರ್ಮಾಪಕ(Producer) ಆರೂರು ಜಗದೀಶ್‌ ಅವರಿಗೇ ಹೀಗೆ ಅನಿಸಿದರೆ ಫ್ಯಾನ್ಸ್ ಕನಸು ನನಸಾಗಬಹುದೇನೋ..

ಮದ್ವೆ ಆದ್ಮೇಲೆ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಲಾವಣ್ಯ; 'ಶ್ರೀರಸ್ತು ಶುಭಮಸ್ತು' ಪೂರ್ಣಿ ಯಾರು ಗೊತ್ತಾ?

Latest Videos
Follow Us:
Download App:
  • android
  • ios