ಹೊಂಗನಸು ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್. ಇಲ್ಲಿವರೆಗೆ ಗಂಡ, ಮಗ ಕಣ್ಣೆದುರು ಇದ್ದರೂ ಅವರು ಯಾರೋ ತನಗೆ ಗೊತ್ತೇ ಇಲ್ಲ ಅನ್ನೋ ಹಾಗೆ ಒಳಗೊಳಗೇ ನೋವು ತಿನ್ನುತ್ತಿದ್ದಳು ಜಗತಿ. ಇದೀಗ ಆಕೆಯ ಗಂಡ ಮಹೇಂದ್ರ ಜಗತಿ ನನ್ನ ಹೆಂಡತಿ ಎಂದು ಘಂಟಾಘೋಷವಾಗಿ ಘೋಷಿಸಿದ್ದಾನೆ. ಜಗತಿಯ ಮರ್ಯಾದೆ ತೆಗೆಯಲೆಂದೇ ಪ್ಲಾನ್ ಮಾಡಿದ್ದ ದೇವಯಾನಿಗೆ ಪ್ರಸಂಗ ಹೀಗೆ ತಿರುಗಿದ್ದು ತಲೆ ಚಚ್ಚಿಕೊಳ್ಳೋ ಹಾಗಾಗಿದೆ.
ಹೊಂಗನಸು ಸೀರಿಯಲ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತೆ. ಇದೀಗ ಈ ಸೀರಿಯಲ್‌ನಲ್ಲಿ ಒಂದು ದೊಡ್ಡ ತಿರುವು ಬಂದಿದೆ. ಇಲ್ಲೀವರೆಗೆ ಜಗತಿ ತನ್ನ ಗಂಡ, ಮಗನ ಜೊತೆಗೆ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರೂ ಎಂದೂ ತಮ್ಮಿಬ್ಬರ ಸಂಬಂಧದ ಬಗ್ಗೆ ಚಕಾರ ಎತ್ತಿದವಳಲ್ಲ. ಅವಳ ಬಗ್ಗೆ ರಿಷಿಗೆ ಬೆಟ್ಟದಷ್ಟು ಅಸಹನೆ ಇದೆ. ಆದರೆ ಜಗತಿಗೆ ಮಗ ರಿಷಿ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ತನ್ನಿಂದ ಎಲ್ಲೂ ಆತನಿಗೆ ಹರ್ಟ್ ಆಗದಂತೆ ಆಕೆ ಸದಾ ಎಚ್ಚರಿಕೆಯಿಂದ ಇರುತ್ತಾಳೆ. ಆದರೆ ಮಹೇಂದ್ರನಿಗೆ ಹಾಗಲ್ಲ, ಆತನಿಗೆ ಜಗತಿ ಅಂದರೆ ಬಹಳ ಪ್ರೀತಿ ಇದೆ. ತನ್ನ ಪ್ರೀತಿಯನ್ನು ತೋರಿಸದೆ ಇರೋದು ಆತನಿಂದಾಗಲ್ಲ. ಹೀಗಾಗಿ ಜಗತಿ ಎಷ್ಟೇ ಅವಾಯ್ಡ್ ಮಾಡಿದರೂ ಮಹೇಂದ್ರ ಜಗತಿಯನ್ನು ಹಚ್ಚಿಕೊಳ್ಳುತ್ತಾನೆ. ಅವಳು ಬೇಡ ಬೇಡ ಅಂದರೂ ಕಾಲೇಜ್ ಕಾರಿಡಾರ್‌ನಲ್ಲೂ ಕೆಲವೊಮ್ಮೆ ಜಗತಿ ಕೈ ಹಿಡಿದು ನಡೆಯುತ್ತಾನೆ. ಇದನ್ನು ನೋಡಿ ರಿಷಿ ತನ್ನ ತಂದೆಗೆ ಹೇಳಲಾಗದೇ ಜಗತಿಗೇ ನೇರವಾಗಿ ಹೇಳಿದ್ದಾನೆ. ಮಹೇಂದ್ರ ಮತ್ತು ನೀವು ಜಾಸ್ತಿ ಸಲುಗೆಯಿಂದ ಇರೋದು, ಜೊತೆಗೆ ಓಡಾಡೋದು ಮಾಡಬೇಡಿ ಅಂತ. ಆದರೆ ಮಹೇಂದ್ರ ಅವಳ ಕೈ ಹಿಡಿದು ನಡೆಯುವಾಗ ಅತ್ತ ಮಹೇಂದ್ರನನ್ನೂ ಸಂಭಾಳಿಸಲಾಗದೇ ಇತ್ತ ರಿಷಿಯ ನೋಟವನ್ನೂ ಎದುರಿಸಲಾಗದೆ ಜಗತಿ ಬೇಯುತ್ತಿದ್ದಾಳೆ.
ಮಹೇಂದ್ರನ ಅಣ್ಣನ ಹೆಂಡತಿ ದೇವಯಾನಿಗೆ ಜಗತಿ ನೆರಳು ಕಂಡರೂ ಸಿಟ್ಟು. ಸದಾ ಅವಳ ವಿರುದ್ಧ ಹುನ್ನಾರ ನಡೆಸುತ್ತಲೆ ಇರುತ್ತಾಳೆ. ಇದೀಗ ಕಿರುಚಿತ್ರದ ಕಾನ್ಸೆಪ್ಟ್ ಎಲ್ಲವೂ ಜಗತಿಯದು, ಆ ಕಿರುಚಿತ್ರಕ್ಕೆ ಎಲ್ಲೆಡೆ ಶ್ಲಾಘನೆ ಸಿಕ್ಕಿದಾಗ ಅವಳಿಂದ ತಡೆಯಲಾಗುವುದಿಲ್ಲ. ಅವಳೇ ರಿಪೋರ್ಟರ್‌ನನ್ನು ಕರೆದು ಜಗತಿ ಫ್ಯಾಮಿಲಿ ಬಗ್ಗೆ ಪ್ರಶ್ನೆ ಮಾಡಲು ಹೇಳುತ್ತಾಳೆ. ಆತನ ಜಗತಿಯ ಫ್ಯಾಮಿಲಿಯ ಬಗ್ಗೆ ಪ್ರಶ್ನಿಸಲು ಶುರು ಮಾಡ್ತಾನೆ, ನಿಮಗೊಬ್ಬ ಮಗ ಇದ್ದಾನಲ್ವಾ, ಆತನಿಗೆ ತಂದೆ ಯಾರು, ತಂದೆ ಇಲ್ಲದ ಹುಟ್ಟಿದ ಅವನು ಕುಂತೀ ಪುತ್ರನ ಥರವಾ ಅಂತೆಲ್ಲ ಪ್ರಶ್ನೆ ಕೇಳ್ತಾನೆ. ಜಗತಿ ತಲೆ ತಗ್ಗಿಸಿ ನಿಲ್ಲುತ್ತಾಳೆ. ಆದರೆ ಮಹೇಂದ್ರ ಮಾತ್ರ ರಿಷಿ ತಡೆದರೂ ಬಿಡದೇ ಜಗತಿಯನ್ನು ಕೈ ಹಿಡಿದು ವೇದಿಕೆಗೆ ಕರೆತಂದು ಅವಳೇ ತನ್ನ ಪತ್ನಿ, ತಮ್ಮಿಬ್ಬರ ಸಿಂಹದಂಥಾ ಮಗ ರಿಷ್ಯೇಂದ್ರ ಭೂಷಣ್ ಅಂತ ಘಂಟಾ ಘೋಷವಾಗಿ ಘೋಷಣೆ ಮಾಡ್ತಾರೆ.
Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!
ಹೇಂದ್ರ ಮಾತಿನಲ್ಲಿರುವ ಸಿಟ್ಟು ಕಂಡು ರಿಪೋರ್ಟರ್ ಮತ್ತೇನೂ ಕೇಳದೇ ಸುಮ್ಮನಾಗುತ್ತಾನೆ. ಇತ್ತ ದೇವಯಾನಿಗೆ ತಾನೊಂದು ಅಂದುಕೊಂಡರೆ ಇಲ್ಲಿ ಎಲ್ಲ ಬೇರೆಯೇ ಆಯ್ತಲ್ಲಾ, ತಾನು ಜಗತಿ ಮರ್ಯಾದೆ ಕಳೆಯಲು ಪ್ರಯತ್ನ ಮಾಡಿದರೆ ಈಕೆಗೆ ಇದೇ ವರವಾಯ್ತಲ್ಲಾ, ಅವಳು ಮಹೇಂದ್ರನ ಪತ್ನಿ ಅನ್ನೋದು ಸಾರ್ವಜನಿಕವಾಗಿಯೇ ಸಾಬೀತಾಯ್ತಲ್ಲಾ ಅಂತ ಕೈ ಕೈ ಹಿಸುಕಿಕೊಳ್ಳುತ್ತಾಳೆ.
ಇನ್ನೊಂದೆಡೆ ರಿಷಿ ಸಿಕ್ಕಾಪಟ್ಟೆ ಡಿಸ್ಟರ್ಬ್(Disturb) ಆಗಿದ್ದಾನೆ. ಆತನ ಸಿಟ್ಟೆಲ್ಲ ಜಗತಿ ಮೇಲೆ ಇದೆ. ಮೈದಾನದಲ್ಲಿ ಕಾರನ್ನು ವೇಗವಾಗಿ ಮನಬಂದ ಹಾಗೆ ಚಲಾಯಿಸುತ್ತಿರುವಾಗ ಅಲ್ಲಿಗೆ ವಸು ಬಂದಿದ್ದಾಳೆ. ಆತನ ಕಾರಿಗೆ ಅಡ್ಡ ನಿಂತಿದ್ದಾಳೆ. ಅವಳು ಇದರಲ್ಲಿ ಜಗತಿಯದೇನೂ ತಪ್ಪಿಲ್ಲ ಅಂತ ಎಷ್ಟೇ ಮನದಟ್ಟು ಮಾಡಲು ಯತ್ನಿಸಿದರೂ ಆತ ಅದನ್ನು ಒಪ್ಪುತ್ತಿಲ್ಲ. ಇತ್ತ ಮಹೇಂದ್ರ ತನ್ನ ಪತ್ನಿ ಜಗತಿಗೆ ಸಮಾಧಾನದ ಮಾತು ಹೇಳಿದ್ದಾನೆ. ಮಗ ರಿಷಿಯನ್ನೂ ಸಮಾಧಾನಿಸಲು ಪ್ರಯತ್ನಿಸಿದ್ದಾನೆ. ಆದರೆ ರಿಷಿಗೆ ಸಮಾಧಾನವಿಲ್ಲ. ಆತ ಒಂಟಿಯಾಗಿ ಉಳಿದಿದ್ದಾನೆ. ವಸು ಮೆಸೇಜ್ ಮಾಡಿದರೂ ಆತನ ರಿಪ್ಲೈ (Reply)ಇಲ್ಲ.
ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!
ಮರುದಿನವೂ ವಸು ರಿಷಿಗಾಗಿ ಕಾದಿದ್ದಾಳೆ. ರಿಷಿ ಬರುತ್ತಾನಾ ಇಲ್ಲವಾ ಅಂತ ಲಕ್ಕಿ ಗೇಮ್(Game)ಆಡುತ್ತಾ ಕೂತಿದ್ದಾಳೆ. ಒಂದು ಹಂತದಲ್ಲಿ ರಿಷಿ ಬಂದೇ ಬಿಟ್ಟ. ವಸು ಮುಖ ಅರಳಿದೆ. ಆದರೆ ರಿಷಿಗೆ ತನ್ನ ಸಿಟ್ಟು ಪೂರ್ತಿ ಇಳಿದಿಲ್ಲ. ಆದರೆ ಗೌತಮ್ ಬಂದು ವಸು ಜೊತೆಗೆ ಕೊಂಚ ಕ್ಲೋಸ್ ಆಗಿ ಮೂವ್(Move) ಮಾಡಿದರೂ ರಿಷಿಯ ಅಸಹನೆ ಗೊತ್ತಾಗುತ್ತೆ. ಇದೇ ಅವನಿಗೆ ಆಕೆ ಮೇಲಿರುವ ಪ್ರೀತಿಯ ಸಂಕೇತ. ಆಂಗ್ರಿ ಯಂಗ್ ಮ್ಯಾನ್(Angry young man) ರಿಷಿಯಾಗಿ ಮುಕೇಶ್ ಗೌಡ, ವಸುವಾಗಿ ರಕ್ಷಾ ಗೌಡ, ಜಗತಿಯಾಗಿ ಜ್ಯೋತಿ ರೈ ನಟಿಸಿದ್ದಾರೆ.
