Asianet Suvarna News Asianet Suvarna News

Bigboss Kannada 9: ಕಳೆದ ವಾರ ರಾಕೇಶ್‌ಗೆ ಫೇಕ್ ಅನಿಸಿದ್ದ ಕಾವ್ಯಶ್ರೀ ಈಗ ಕೇರಿಂಗ್ ಅಂತೆ!

ಬಿಗ್‌ಬಾಸ್‌ ಸೀಸನ್ 9ನಲ್ಲಿ ಇಂಟರೆಸ್ಟಿಂಗ್ ಘಟನೆಯೊಂದು ನಡೆದಿದೆ. ಕಳೆದ ವಾರ ಕಾವ್ಯಶ್ರೀಗೆ ಫೇಕ್ ಅಂದಿರೊ ರಾಕೇಶ್‌ ಅಡಿಗಗೆ ಇದ್ದಕ್ಕಿದ್ದಂತೆ ಆಕೆ ಕೇರಿಂಗ್ ಅನಿಸಿಬಿಟ್ಟಿದ್ದಾರೆ. ಈ ಸಡನ್ ಚೇಂಚ್ ಹೆಂಗಾಯ್ತಪ್ಪ ಅಂತ ವೀಕ್ಷಕರು ತಲೆ ಕೆರೆದುಕೊಳ್ತಿದ್ದಾರೆ.

 

In Big boss Rakesh took U turn
Author
First Published Nov 24, 2022, 4:06 PM IST

ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್‌ಬಾಸ್‌ ಸೀಸನ್ 9‌ ನಲ್ಲಿ ಆಗಾಗ ಬಹಳ ಸ್ವಾರಸ್ಯಕರ ಬೆಳವಣಿಗೆಗಳಾಗೋದುಂಟು. ವೀಕ್ಷಕರೂ ಅದನ್ನು ಸಖತ್ತಾಗೇ ಎನ್‌ ಜಾಯ್‌ ಮಾಡ್ತಾರೆ. ಈ ದೊಡ್ಡ ಮನೆಯೊಳಗೆ ಯಾವ್ಯಾವುದೋ ಸನ್ನಿವೇಶದಲ್ಲಿ ಸಿಕ್ಕಿ ಒದ್ದಾಡುವಾಗ ಕೆಲವೊಮ್ಮೆ ಸ್ಪರ್ಧಿಗಳು ವಿಚಿತ್ರವಾಗಿ ರೆಸ್ಪಾಂಡ್ ಮಾಡೋದಿದೆ. ಇನ್ನೊಂದು ಸಲ ಅವರ ಅಭಿಪ್ರಾಯವೇ ಬದಲಾಗಿ ಬಿಡೋದುಂಟು. ಪರಸ್ಪರ ಅಪರಿಚಿತರಾಗಿ ಬಂದು ಪರಿಚಿತರಾಗಿ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಆದವರು, ಪ್ರೇಮಿಸುತ್ತಲೇ ಇರುವವರನ್ನೆಲ್ಲ ಜನ ಕಂಡಿದ್ದಾರೆ. ಅದಿಲ್ಲಿ ಕಾಮನ್ ಆಗಿದೆ. ಆದರೆ ಈ ಬಾರಿ ಇಂಟರೆಸ್ಟಿಂಗ್ ಅನ್ನೋ ಘಟನೆಯೊಂದು ನಡೆದಿದೆ. ಕೇವಲ ಒಂದು ವಾರದ ಹಿಂದೆಯಷ್ಟೇ ಕಾವ್ಯಶ್ರೀ ಗೌಡ ಅವರನ್ನು ರಾಕೇಶ್ ಅಡಿಗ ‘ಫೇಕ್’ ಎಂದು ಕರೆದಿದ್ದರು. ಈ ವಾರ ಕಾವ್ಯಶ್ರೀ ಗೌಡ ಅವರಿಗೆ ರಾಕೇಶ್ ಅಡಿಗ ‘ಕೇರಿಂಗ್’ ಎಂಬ ಟೈಟಲ್ ಕೊಟ್ಟಿದ್ದಾರೆ. ಇದನ್ನು ನೋಡಿದ ವೀಕ್ಷಕರು ಗೊಂದಲಕ್ಕೆ ಬಿದ್ದಿದ್ದಾರೆ. ಕಾವ್ಯಾ ಮಾಡೋದೆಲ್ಲ ಫೇಕ್ ಅಂದ ರಾಕೇಶ್‌ಗೆ ಆಕೆ ಕೇರ್ ಮಾಡ್ತಿರೋದು ಫೇಕ್ ಅಂತ ಅನಿಸಿರಬೇಕಲ್ಲಾ.. ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಕಳೆದ ವಾರ ಆರ್ಯವರ್ಧನ್ ಗುರೂಜಿ ಒಂದು ಮಾತು ಹೇಳಿದ್ದರು. ಆ ಮಾತು ಇದ್ದದ್ದು ರಾಕೇಶ್ ಅಡಿಗ ಬಗ್ಗೆ. 'ಈ ಮನೆಯಲ್ಲಿ ತುಂಬಾ ಸೇಫ್ ಗೇಮ್ ಆಡ್ತಿರೋದು ರಾಕೇಶ್ ಅಡಿಗ’ ಅಂತ ಗುರೂಜಿ ಲಾಜಿಕ್ಕಾಗೇ ಹೇಳಿದ್ದರು. ಅವರು ಹೇಳಿದ್ದು ಸರಿಯೋ ತಪ್ಪೋ ಅನ್ನೋ ಬಗ್ಗೆ ಚರ್ಚೆ ನಡೆಯಿತ್ತು. ಇದೀಗ ಕಳೆದ ಬಾರಿ ಕಾವ್ಯಶ್ರೀ ಅವರನ್ನು ಫೇಕ್ ಅಂತ ನೆಗೆಟಿವ್ ಒಪೀನಿಯನ್ ಕೊಟ್ಟಿದ್ದ ರಾಕೇಶ್ ಇದೀಗ ಮೈಂಡ್‌ಸೆಟ್‌ ಬದಲಿಸಿರುವಂತೆ ಆಡ್ತಿದ್ದಾರೆ ಅನ್ನೋ ಬಗೆಯ ಮಾತುಗಳೂ ಕೇಳಿಬರುತ್ತಿವೆ. ಗುರೂಜಿ ಅವರ ಮಾತಿಗೆ ಪುಷ್ಠಿ ನೀಡುವಂತಹ ಸಂದರ್ಭವೊಂದು ಸೃಷ್ಟಿಯಾದ ಬಗ್ಗೆ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಕೇವಲ ಒಂದು ವಾರದ ಹಿಂದೆಯಷ್ಟೇ ಕಾವ್ಯಶ್ರೀ ಗೌಡ ಅವರನ್ನು ರಾಕೇಶ್ ಅಡಿಗ ‘ಫೇಕ್’ ಎಂದು ಕರೆದಿದ್ದರು. ಈ ವಾರ ಕಾವ್ಯಶ್ರೀ ಗೌಡ ಅವರಿಗೆ ರಾಕೇಶ್ ಅಡಿಗ ‘ಕೇರಿಂಗ್’ ಎಂಬ ಟೈಟಲ್ ಕೊಟ್ಟಿದ್ದಾರೆ. ಇದೇನಿದು ಒಂದೇ ವಾರದಲ್ಲಿ ಈ ಮಟ್ಟದ ಬದಲಾವಣೆ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

Transgender Neethu: ಸೂಪರ್ ಕ್ವೀನ್ ಆಗೋ ಹಾದಿಯಲ್ಲಿ ನೀತು ವನಜಾಕ್ಷಿ

ವೀಕೆಂಡ್‌ನಲ್ಲಿ ಪ್ರಸಾರವಾಗುವ 'ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ರಾಕೇಶ್ ಅಡಿಗ ಅವರಿಗೆ ಕಿಚ್ಚ ಸುದೀಪ್ ತೀರ್ಪು ನೀಡುವ ಅವಕಾಶ ನೀಡುತ್ತೇನೆ ಅಂತ ಹೇಳಿದರು. ಆಗ ಅನುಪಮಾ ಗೌಡ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್ ‘ರಿಯಲ್’ ಎಂದು ರಾಕೇಶ್ ಅಡಿಗ ಹೇಳಿದರು. ಕಾವ್ಯಶ್ರೀ ಗೌಡ ಅವರನ್ನು ‘ಫೇಕ್’ ಲಿಸ್ಟ್‌ಗೆ ರಾಕೇಶ್ ಅಡಿಗ ಸೇರಿಸಿದ್ದರು. ಇದು ಕಾವ್ಯಶ್ರೀ ಗೌಡ ಗೆ ನೋವಾಗಿತ್ತು. ಇದು ರಾಕೇಶ್ ಗಮನಕ್ಕೂ ಬಂದು ಅವರು ಕಾವ್ಯಶ್ರೀ ಗೌಡ ಅವರನ್ನು ಸಮಾಧಾನ ಮಾಡಿದ್ದರು.

'ನಾನು ಅನಿವಾರ್ಯವಾಗಿ ಹಾಗೆ ಮಾಡಬೇಕಾಯ್ತು. ನೀನು ಯಾರ ಬಳಿಯಾದರೂ ಜಗಳ ಆಡಿದಾಗ ನಾನು ನಿನ್ನ ಬಳಿ ಬಂದು ನಿನ್ನ ತಪ್ಪನ್ನ ಹೇಳಿದ್ದೀನಿ. ಸಾರಿ ನನ್ನಿಂದ ನಿನಗೆ ಹರ್ಟ್ ಆಗಿದ್ದರೆ' ಎಂದು ರಾಕೇಶ್ ಆಮೇಲೆ ಕಾವ್ಯಾ ಪ್ಲೀಸ್ ಮಾಡಲು ಪ್ರಯತ್ನಿಸಿದ್ದರು. ಆಗ ಕಾವ್ಯಶ್ರೀ ಗೌಡ, 'ನೀನು ಈ ವಿಷಯವನ್ನು ಡೈರೆಕ್ಟ್ ಆಗಿಯೇ ಹೇಳಬಹುದಿತ್ತು. ಇವರೆಲ್ಲಾ ಕ್ಲೋಸ್ ಇರೋದ್ರಿಂದ ನನಗೆ ಗೊತ್ತು ಅಂತ ನೀನು ಹೇಳಿದೆ. ಹಾಗಾದ್ರೆ, ನಾನು ಕ್ಲೋಸ್ ಇಲ್ವಾ ಅಂತ ನನಗೆ ಅನಿಸಿತು' ಅಂದುಬಿಟ್ಟರು.

ವಿದ್ಯಾ ಭರಣ್ ಜೊತೆ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್; ಇಲ್ಲಿದೆ ಸಂಪೂರ್ಣ ವಿವರ

ರಾಕೇಶ್ ಇದಕ್ಕೆ ಏನೇನೋ ಸಬೂಬು ನೀಡಲು ಪ್ರಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಆರ್ಯವರ್ಧನ್ ಗುರೂಜಿ, 'ಇಷ್ಟೊತ್ತಿನವರೆಗೂ ಸಮಾಧಾನ ಮಾಡಿದ್ದಾನೆ. ಇಲ್ಲಿ ತುಂಬಾ ಸೇಫ್ ಗೇಮ್(Safe game) ಆಡ್ತಿರೋದು ರಾಕೇಶ್ ಅಡಿಗನೇ ಎಂದಿದ್ದರು. ಅದಾಗಿ ಸ್ವಲ್ಪ ದಿನಕ್ಕೇ'ಎಲ್ಲರಿಗಿಂತ ನನ್ನನ್ನ ಪ್ಯಾಂಪರ್(Pamper) ಮಾಡೋದು ಕಾವ್ಯ. ಎಲ್ಲದಕ್ಕೂ ಸ್ಪಂದಿಸುತ್ತಾಳೆ' ಎನ್ನುತ್ತಾ ಕಾವ್ಯಶ್ರೀ ಗೌಡ ಅವರಿಗೆ ರಾಕೇಶ್ ಅಡಿಗ ‘ಕೇರಿಂಗ್’(Caring) ಅನ್ನೋ ಬಿರುದು ಕೊಟ್ಟೇ ಬಿಟ್ಟರು.

ರಾಕೇಶ್ ಅಡಿಗ ಈ ಮೈಂಡ್‌ಸೆಟ್ (Mind Set) ಇದೀಗ ಸೋಷಿಯಲ್ ಮೀಡಿಯಾ(Social media) ದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Follow Us:
Download App:
  • android
  • ios