ಪೂಜಾಳನ್ನು ದರದರ ಎಳೆದೊಯ್ದ ಭಾಗ್ಯ! ಸ್ಟಾರ್​ ಹೋಟೆಲ್​ ನೌಕರಿಯಿಂದ ವಜಾಗೊಂಡಳಾ?


ಸತ್ಯ ತಿಳಿಯುವ ತವಕದಲ್ಲಿ ಪೂಜಾಳನ್ನು ದರದರ ಎಳೆದು ಒಯ್ದಿದ್ದಾಳೆ ಭಾಗ್ಯ. ಅದೇ ಇನ್ನೊಂದೆಡೆ ನೆಟ್ಟಿಗರಿಂದ ಥಹರೇವಾರಿ ಪ್ರಶ್ನೆಗಳ ಸುರಿಮಳೆಯಾಗ್ತಿದೆ. ಏನದು?
 

In an attempt to know the truth Bhagya drags Pooja away in Bhagyalakshmi fans reacts suc

ಭಾಗ್ಯಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಸತ್ಯ ತಿಳಿದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾಳೆ. ಮನೆಯಲ್ಲಿ ಹುಚ್ಚಿಯಂತೆ ಆಡುತ್ತಿದ್ದಾಳೆ. ಹೀಗ್ಯಾಕೆ ಮಾಡುತ್ತಿದ್ದಿಯಾ ಎಂದು ತಾಂಡವ್​ ಕೇಳಿದಾಗ ನನಗೆ ಸತ್ಯ ತಿಳಿಯಬೇಕಿದೆ ಎಂದಿದ್ದಾರೆ. ಮದುವೆಯಾಗಲು ಹೊರಟಿರೋ ತಾಂಡವ್​ಗೂ ವಿಚಿತ್ರ ಎಂದರೆ ಸತ್ಯ ಹೇಳಲು ಭಯ! ಇದೊಳ್ಳೆ ಹಾಸ್ಯಾಸ್ಪದವಾಗಿದೆ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು! ಅತ್ತೆ ಕುಸುಮಾ ಮತ್ತು ಭಾಗ್ಯ ಇನ್ನೂ ಸತ್ಯ ಮುಚ್ಚಿಡಲು ನೋಡ್ತಿದ್ದಾರೆ. ಮದುವೆ ಮನೆಗೆ ಭಾಗ್ಯ ಹೋದರೂ ಡೌಟೇ ಬರಲಿಲ್ಲ! ಅಲ್ಲಿ ದ್ವಾರದಲ್ಲಿಯೇ ತಾಂಡವ್ ಫೋಟೋ ಇದ್ದದ್ದೂ ನೋಡಲಿಲ್ಲ! ಸಾಲದು ಎಂಬುದಕ್ಕೆ ಗಂಡಿನ ಕಡೆಯವರು ಮದುವೆ ನಿಲ್ಲಿಸಿದ್ದು ಹಾಗೂ ಕುಸುಮಾ ಮತ್ತು ಪೂಜಾ ಬಂದು ಮದುವೆ ನಿಲ್ಲಿಸಿದ್ದು ಎನ್ನುವ ಮಾತಿಗೆ ತಾಳೆ ಹಾಕಿರುವ ಭಾಗ್ಯಳಿಗೆ ತಾಂಡವ್​ ಮೇಲೆ ಸಂದೇಹ ಬಂದಿದೆ ಅಷ್ಟೇ. ಆದರೆ ಇದುವರೆಗೂ ಅದು ಗಂಡನೇ ಎನ್ನುವುದು ಮಾತ್ರ ಗೊತ್ತಾಗಲಿಲ್ಲ! ಇದಕ್ಕೆ ಏನೆನ್ನಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮದುವೆ ಗಂಡು ಯಾರು ಎಂದು ಅತ್ತೆ ಮತ್ತು ತಂಗಿಯನ್ನು ಪೂಜಾ ಪ್ರಶ್ನಿಸುತ್ತಿದ್ದಾಳೆ. ಅತ್ತ ಅತ್ತೆ ಕೂಡ ಭಾಗ್ಯಳಿಗೆ ವಿಷಯ ಗೊತ್ತಾಗಬಾರದು ಎಂದು ಏನೇನೋ ಕಸರತ್ತು ಮಾಡುತ್ತಿದ್ದಾಳೆ.

ಇದೀಗ ಭಾಗ್ಯ ಸತ್ಯ ತಿಳಿದುಕೊಳ್ಳಲೇಬೇಕು ಎನ್ನುವ ಪಣ ತೊಟ್ಟಿದ್ದಾಳೆ. ಅದಕ್ಕಾಗಿಯೇ ಪೂಜಾಳನ್ನು ದರದರ ಎಳೆದುಕೊಂಡು ಹೋಗಿದ್ದಾಳೆ. ಬಹುಶಃ ದೇವರ ಮೇಲೆ ಆಣೆ ಪ್ರಮಾಣ ಮಾಡಿಸುತ್ತಾಳೋ ಏನೋ. ಈಗಾದ್ರೂ ಪೂಜಾ ಸತ್ಯ ಬಾಯಿ ಬಿಡುತ್ತಾಳಾ ನೋಡಬೇಕಷ್ಟೇ. ಆದರೆ ನೆಟ್ಟಿಗರಿಗೆ ಈಗ ಪ್ರಶ್ನೆ ಕಾಡ್ತಿರೋದು, ಭಾಗ್ಯಳನ್ನು ಸ್ಟಾರ್​ ಹೋಟೆಲ್​ನಿಂದ ಡಿಸ್​ಮಿಸ್​ ಮಾಡಿಬಿಟ್ರಾ ಎನ್ನುವುದು. ಏಕೆಂದರೆ, ಅವಳು ಇಡೀ ದಿನ ಮನೆಯಲ್ಲೇ ಇರುತ್ತಿದ್ದಾಳೆ. ಹೋಟೆಲ್​ಗೆ ಹೋಗಿದ್ದನ್ನೂ ತೋರಿಸ್ತಿಲ್ಲ. ಅದೇ ಇನ್ನೊಂದೆಡೆ ತಾಂಡವ್ ಕೂಡ ಮನೆ ಬಿಟ್ರೆ ಶ್ರೇಷ್ಠಾಳ ಕಡೆ ಇರ್ತಾನೆ. ಎಲ್ಲರಿಗೂ ಕೆಲಸದಿಂದ ವಜಾ ಮಾಡಿಬಿಟ್ರಾ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಭಾಗ್ಯಾ ಈಗ ಸತ್ಯ ತಿಳಿಯುವ ತವಕದಲ್ಲಿ ಇದ್ದಾಳೆ. ಅವಳಿಗೆ ಅಷ್ಟೊಂದು ಸುದೀರ್ಘ ರಜೆ ಯಾರು ಕೊಟ್ರು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇದೊಂದು ಸೀರಿಯಲ್​, ಕೇವಲ ಸೀರಿಯಲ್​ ಆಗಿ ನೋಡದೇ ವಿಭಿನ್ನ ಪ್ರಶ್ನೆ ಕೇಳುತ್ತಿದ್ದಾರೆ. 

ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್​ ವಿಷಯ!

ಅಷ್ಟಕ್ಕೂ ಇದೀಗ ಭಾಗ್ಯಳ ಮೇಲೆಯೇ ಸೀರಿಯಲ್ ಪ್ರೇಮಿಗಳಿಗೆ ಅಹಸ್ಯ ಹುಟ್ಟಲು ಶುರುವಾದಂತಿದೆ. ಏಕೆಂದರೆ,  ಪತಿ ಮತ್ತು ಪತ್ನಿಗೆ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ, ಪ್ರೀತಿ, ನಂಬಿಕೆ ಎಲ್ಲವೂ ಇದ್ದರೇನೇ ದಾಂಪತ್ಯ ಚೆಂದ, ದಾಂಪತ್ಯದ ಸೊಗಡು ಇರುವುದೂ ಅದರಲ್ಲಿಯೇ ಎಂದರೂ,  ಭಾಗ್ಯಳಂಥ ಪೆದ್ದು ಪತ್ನಿಯನ್ನು ತೋರಿಸ್ತಿರೋದು ಯಾಕೆ ಎನ್ನುತ್ತಿದ್ದಾರೆ ನೆಟ್ಟಿಗರು. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಾಕೆಗೆ ತನ್ನ ಪತಿಯೇ ಮದುಮಗ ಎನ್ನೋದು ಇನ್ನೂ ಯಾಕೆ ಗೊತ್ತಾಗ್ತಿಲ್ಲ ಎನ್ನುವುದು ಅವರ ಪ್ರಶ್ನೆ.  ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಶ್ರೇಷ್ಠಾ ಯಾವುದೋ ಇಬ್ಬರು ಮಕ್ಕಳ ಅಪ್ಪನನ್ನು ಮದ್ವೆಯಾಗ್ತಿದ್ದಾಳೆ ಎನ್ನೋ ಸತ್ಯ ಭಾಗ್ಯಂಗೆ ಗೊತ್ತು. ಹೋಗಲಿ, ಎಷ್ಟೋ ಮಂದಿ ಇಂಥವರು ಇದ್ದಿರಬಹುದು. ಆದರೆ ಇದೀಗ ಶ್ರೇಷ್ಠಾಳ ಮದುವೆಗಾಗಿ ತಾಂಡವ್​ ಕಿಟಕಿ ಮುರಿದು ಹೋಗಿದ್ದಾನೆ. ಅದೂ ಹೋಗಲಿ... ಪೂಜಾ ಶ್ರೇಷ್ಠಾಳ ಮದುವೆ ನಿಲ್ಲಿಸಲು ಹೋದವರು ಗಂಡಿನ ಕಡೆಯವರು ಬಂದು ಮದುವೆ ನಿಲ್ಲಿಸಿದ್ದಾರೆ ಎಂದಿದ್ದಾರೆ. ಸಾಲದು ಎನ್ನುವುದಕ್ಕೆ ಮೈಮೇಲೆ ಬಂದಂತೆ ವರ್ತಿಸುತ್ತಿದ್ದ ಶ್ರೇಷ್ಠಾ ಪೂಜಾ ಮತ್ತು ಕುಸುಮಾ ಆಂಟಿ ಬಂದು ಮದುವೆ ನಿಲ್ಲಿಸಿದರು ಎಂದಿದ್ದಾರೆ....

ಇಷ್ಟೆಲ್ಲಾ ಇದ್ದರೂ, ಭಾಗ್ಯಳಿಗೆ ಅಲ್ಲಿರೋ ಮದುವೆ ಗಂಡು ತನ್ನ ಗಂಡನೇ ಎಂದು ತಿಳಿಯದಷ್ಟು ಪೆದ್ದಿನಾ? ಇದು ಮುಗ್ಧತೆಯ ಪರಮಾವಧಿಯೋ, ಮೂರ್ಖತನದ ಪರಮಾವಧಿಯೋ ಒಂದೂ ಗೊತ್ತಾಗ್ತಿಲ್ಲ ಎನ್ನುವುದು ನೆಟ್ಟಿಗರ ಮಾತು. ಇದೀಗ ಭಾಗ್ಯಳಿಗೆ ಗಂಡನ ಮೇಲೆ ಡೌಟ್​ ಬಂದಿದೆ. ಅಷ್ಟು ಮಾತ್ರಕ್ಕೆ ಅವಳಿಗೆ ತಲೆ ಇದೆ ಎನ್ನುವುದನ್ನು ತೋರಿಸಿದ್ದಾರೆ. ಅದೇ ಇನ್ನೊಂದೆಡೆ ಸೊಸೆಯನ್ನು ಒಂದು ತಿಂಗಳಿನಲ್ಲಿ ಬದಲಿಸ್ತೇನೆ ಎಂದಿದ್ದಾಳೆ ಕುಸುಮಾ. ಅವಳು ಸಕ್ಸಸ್​ ಆಗ್ತಾಳಾ ನೋಡಬೇಕಿದೆ. 

ಅದ್ಕೇ ಹೇಳೋದು ಅಕ್ಕವ್ರೇ... ಗಂಡಸ್ರು ಜಾಸ್ತಿ ಪಿರೂತಿ ಮಾಡಿದ್ಕೂಡ್ಲೆ ನಂಬ್​ಬಿಡ್ಬೇಡಿ... ಮಲ್ಲಿಯಂಥವರಿಗೆ ನೆಟ್ಟಿಗರ ಸಲಹೆ!
 

Latest Videos
Follow Us:
Download App:
  • android
  • ios